ಭಾರಿ ಹಿಮಪಾತದಡಿ ಸಿಕ್ಕಿಬಿದ್ದಿದ್ದ ಐವರು ಪ್ರಯಾಣಿಕರ ರಕ್ಷಣೆ! - ಲಡಾಖ್ನಲ್ಲಿ ಭಾರಿ ಹಿಮಪಾತ
ಲಡಾಖ್ : ಜೊಜಿಲಾ ಪಾಸ್‌ನಲ್ಲಿ ಭಾರಿ ಹಿಮಪಾತದಿಂದ ಸಿಕ್ಕಿಬಿದ್ದಿದ್ದ ಐವರು ಪ್ರಯಾಣಿಕರನ್ನು ಬಾರ್ಡರ್ ರೋಡ್ಸ್ ಆರ್ಗನೈಸೇಷನ್ಸ್ (ಬಿಆರ್‌ಒ) ಭಾನುವಾರ ರಕ್ಷಿಸಿದೆ. ಹವಾಮಾನ ವೈಪರೀತ್ಯದಿಂದ ಇಲ್ಲಿ ಭಾರಿ ಹಿಮಪಾತ ಬೀಳುತ್ತಿದ್ದು ಮುಂದೆಯೂ ಹೋಗದೇ ಹಿಂದೆಯೂ ಬರದೇ ಪ್ರಯಾಣಿಕರ ವಾಹನವೊಂದು ಹಿಮಪಾತದಡಿ ಸಿಲುಕಿತ್ತು. ಸ್ಥಳಕ್ಕೆ ಬಂದ ಪ್ರಾಜೆಕ್ಟ್ ಬೀಕನ್ ಆಫ್ ಬಾರ್ಡರ್ ರೋಡ್ಸ್ ಆರ್ಗನೈಸೇಷನ್ಸ್ ತಂಡದ ಸದಸ್ಯರು ಶ್ರೀನಗರ-ಸೋನ್‌ಮಾರ್ಗ್ ರಸ್ತೆಯಿಂದ ಪ್ರಯಾಣಿಕರನ್ನು ರಕ್ಷಿಸುವ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.