ಮಲೇಷ್ಯಾದಲ್ಲಿ ಸಿಲುಕಿ ನರಕಯಾತನೆ: ಕೊನೆಗೂ ಹಿಂದಿರುಗಿದ ಪಂಜಾಬ್‌ನ 300 ಯುವಕರು - ಮಲೇಷ್ಯಾ
ಪಂಜಾಬ್: ನಕಲಿ ಏಜೆಂಟರ್ಗಳ ಮೂಲಕ ಮಲೇಷ್ಯಾಗೆ ಹೋಗಿ ಸಿಲುಕಿದ್ದ ಪಂಜಾಬ್‌ನ 300 ಯುವಕರು ಕೊನೆಗೂ ತಮ್ಮ ಮನೆಗಳಿಗೆ ಹಿಂತಿರುಗಿದ್ದಾರೆ. ಹಲವು ದಿನಗಳ ನಂತರ ಮಕ್ಕಳನ್ನು ನೋಡಿದ ಪೋಷಕರು ಭಾವುಕರಾಗಿದ್ದಾರೆ. ಉದ್ಯೋಗಕ್ಕಾಗಿ ತೆರಳಿ ಬಂಧನಕ್ಕೊಳಗಾಗಿದ್ದ ನಮಗೆ ಊಟ, ನೀರು ನೀಡದೆ ಮಲೇಷ್ಯಾ ಪೊಲೀಸರು ಹಿಂಸೆ ನೀಡಿದ್ದು, ನರಕಯಾತನೆ ಅನುಭವಿಸಿ ಮರಳಿ ಬಂದಿದ್ದೇವೆ ಎಂದು ಸಂತ್ರಸ್ತ ಯುವಕರು ತಮ್ಮ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ.