ಕರ್ನಾಟಕ

karnataka

ETV Bharat / videos

ಫಾಸ್ಟ್​ ಟ್ಯಾಗ್​ ಉದ್ದೇಶ, ದೇಶದಲ್ಲಿ ನಕಲಿ ಲೈಸನ್ಸ್​ ಬಗ್ಗೆ ನಿತಿನ್​ ಗಡ್ಕರಿ ಹೇಳಿದ್ದೇನು? - ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ,

By

Published : Feb 15, 2021, 9:40 AM IST

ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ರಾಷ್ಟ್ರೀಯ ಭದ್ರತಾ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ದೇಶದ ಬಹುತೇಕ ಚಾಲಕರಿಗೆ ನಕಲಿ ಪರವಾನಗಿ ಇದೆ ಎಂದು ಹೇಳಿದರು. ದೇಶದಲ್ಲಿ ಶೇ.30ರಷ್ಟು ಚಾಲಕರಲ್ಲಿ ನಕಲಿ ಲೈಸನ್ಸ್​ ಇವೆ. ನಕಲಿ ಪರವಾನಗಿಯನ್ನು ತಯಾರಿಸುವುದು ತುಂಬಾ ಸುಲಭವಾಗಿದೆ. ಹಣವನ್ನು ಪಾವತಿಸುವ ಮೂಲಕ ಯಾರಾದರೂ ಆರ್‌ಟಿಒ ಕಚೇರಿಯಿಂದ ಚಾಲನಾ ಲೈಸನ್ಸ್​ ಪಡೆಯಬಹುದಾಗಿದೆ. ಆದರೆ ನಕಲಿ ಪರವಾನಗಿ ಮಾಡುವುದನ್ನು ನಿಲ್ಲಿಸಲು ಫಾಸ್ಟ್‌ಟ್ಯಾಗ್ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಫಾಸ್ಟ್‌ಟ್ಯಾಗ್ ನೋಂದಣಿ ದಿನಾಂಕದ ಮಿತಿಯನ್ನು ಈ ಮೊದಲು ಎರಡು-ಮೂರು ಬಾರಿ ಸರ್ಕಾರ ವಿಸ್ತರಿಸಿದೆ. ಈಗ ಅದನ್ನು ಇನ್ನಷ್ಟು ವಿಸ್ತರಿಸಲಾಗುವುದಿಲ್ಲ. ಎಲ್ಲರೂ ಕೂಡಲೇ ಫಾಸ್ಟ್‌ಟ್ಯಾಗ್‌ ನೋಂದಣಿ ಮಾಡಿಕೊಳ್ಳಬೇಕೆಂದು ಗಡ್ಕರಿ ಹೇಳಿದರು.

ABOUT THE AUTHOR

...view details