ಮಾದಕ ವ್ಯಸನಿಗಳ ಗೂಂಡಾಗಿರಿ...ತಡೆಯಲು ಮುಂದಾದ ಮಹಿಳಾ ಕಾನ್‌ಸ್ಟೆಬಲ್ ಮೇಲೆ ಹಲ್ಲೆ - ಮಹಿಳಾ ಕಾನ್‌ಸ್ಟೆಬಲ್ ಕಿರಣ್ಜಿತ್ ಕೌರ್
ಕುಡಿದ ಅಮಲಿನಲ್ಲಿ ಅಂಗಡಿ ಮಾಲೀಕರೊಂದಿಗೆ ಜಗಳವಾಡುತ್ತಿದ್ದ ಮೂವರನ್ನು ತಡೆಯಲು ಹೋದ ಮಹಿಳಾ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆದ ಪ್ರಕರಣ ಜಲಂಧರ್ನ ನಕೋಡರ್ ರಸ್ತೆಯ ಲವ್ಲಿ ಸ್ವೀಟ್ಸ್ ಬಳಿಯ ಪ್ರೀತ್ ಹೋಟೆಲ್ ಮುಂಭಾಗ ಸಂಭವಿಸಿದೆ. ನಡೆಯುತ್ತಿದ್ದ ಗಲಾಟೆಯನ್ನು ತಪ್ಪಿಸಲು ಮುಂದಾದ ಮಹಿಳಾ ಪೊಲೀಸ್ ಮೇಲೆ ಥಳಿಸಿದ್ದು, ಮಹಿಳಾ ಕಾನ್‌ಸ್ಟೆಬಲ್ ಕಿರಣ್ಜಿತ್ ಕೌರ್ ಅವರ ಹೊಟ್ಟೆಗೆ ಒದ್ದಿದ್ದಾರೆ. ಕುಡಿದ ಅಮಲು ಎಷ್ಟರ ಮಟ್ಟಿಗಿತ್ತೆಂದರೆ, ಪೊಲೀಸರೇ ತಮ್ಮ ಪ್ರಾಣ ರಕ್ಷಿಸಿಕೊಳ್ಳಲು ಮುಂದಾದ ಪರಿಸ್ಥಿತಿ ನಿರ್ಮಾಣ ವಾಗಿತ್ತು. ಬಳಿಕ ಎಸ್‌ಎಚ್‌ಒ ರಾಚ್‌ಪಾಲ್ ಸಿಂಗ್ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಚ್‌ಪಾಲ್ ಸಿಂಗ್ ಮಾತನಾಡಿ, ಆ ಮಾದಕ ವ್ಯಸನಿಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ, ಓರ್ವನನ್ನು ಮಾತ್ರ ಸದ್ಯಕ್ಕೆ ಗುರುತಿಸಲಾಗಿದ್ದು, ಉಳಿದ ಇಬ್ಬರ ವಶಕ್ಕೆ ಬಲೆ ಬೀಸಲಾಗಿದೆಯೆಂದು ಮಾಹಿತಿ ನೀಡಿದ್ದಾರೆ.
Last Updated : Jan 30, 2020, 6:28 PM IST