ಕರ್ನಾಟಕ

karnataka

ETV Bharat / videos

ಭೀಕರ ರಸ್ತೆ ಅಪಘಾತದಲ್ಲಿ ಮೂವರು ಅಪ್ರಾಪ್ತರು ಬಲಿ! - 3 dead in accident

By

Published : Jan 15, 2020, 1:03 PM IST

Updated : Jan 15, 2020, 1:22 PM IST

ರಾಜಸ್ಥಾನದ ಪ್ರತಾಪ್​ಗಢ್ ನಗರದ ಮಾಂಡ್‌ಸೌರ್ ರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರನ್ನು ಚಿಕಿತ್ಸೆಗಾಗಿ ಉದಯಪುರಕ್ಕೆ ಕಳುಹಿಸುವ ಸಂದರ್ಭದಲ್ಲಿ ಅವರೂ ಅಸುನೀಗಿದ್ದಾರೆ. ಮಾಹಿತಿಯ ಪ್ರಕಾರ, ನಗರದ ವಾಟರ್ ವರ್ಕ್ಸ್ ರಸ್ತೆಯಲ್ಲಿ ವಾಸಿಸುವ ಅಪ್ರಾಪ್ತ ವಯಸ್ಕರು ತಮ್ಮ ಬೈಕ್​ಗಳೊಂದಿಗೆ ಪ್ರತಾಪ್​ಗರ್​ ಕಡೆಗೆ ಬರುತ್ತಿದ್ದರು. ಆ ವೇಳೆ ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಗರದ ವಾಟರ್‌ವರ್ಕ್‌ ರಸ್ತೆಗಳಲ್ಲಿ ವಾಸಿಸುವ ಸಲೀಂ ಮಗ ಕರೀಮ್ ಖಾನ್, ತೌಕೀರ್ ಪುತ್ರ ಅಸ್ಲಂ ಖಾನ್ ಮತ್ತು ಸೊಹೈಲ್ ಪುತ್ರ ಸಲೀಮ್ ಖಾನ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ಅಪ್ರಾಪ್ತರಾಗಿದ್ದಾರೆ. ಟ್ರಕ್​ ಚಾಲಕ ಅಪಘಾತದ ಬಳಿಕ ಪರಾರಿಯಾಗಿದ್ದು ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇನ್ನೂ ಮೃತಪಟ್ಟವರ ಮರಣೋತ್ತರ ಪರೀಕ್ಷೆಯನ್ನು ಜಿಲ್ಲಾಸ್ಪತ್ರೆಯಲ್ಲಿ ನಡೆಸಯಿತು.
Last Updated : Jan 15, 2020, 1:22 PM IST

ABOUT THE AUTHOR

...view details