ಒಂದಲ್ಲ, ಎರಡಲ್ಲ, ಬರೋಬ್ಬರಿ 20 ಕೋವಿಡ್ ಪೀಡಿತರ ಸಾಮೂಹಿಕ ಅಂತ್ಯಕ್ರಿಯೆ.. ವಿಡಿಯೋ - 20 ಕೋವಿಡ್ ಪೀಡಿತರ ಸಾಮೂಹಿಕ ಅಂತ್ಯಕ್ರಿಯೆ
ಅಹಮದ್ನಗರ: ಮಹಾರಾಷ್ಟ್ರದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ನಿತ್ಯ ನೂರಾರು ಸೋಂಕಿತರು ಡೆಡ್ಲಿ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಅವರ ಸಾಮೂಹಿಕವಾಗಿ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ಇದೀಗ ಮಹಾರಾಷ್ಟ್ರದ ಅಹಮದ್ನಗರದಲ್ಲಿ ಕೋವಿಡ್ ಪೀಡಿತ 20 ಜನರ ಮೃತದೇಹ ಸಾಮೂಹಿಕವಾಗಿ ಅಂತ್ಯಕ್ರಿಯೆ ನಡೆಸಲಾಗಿದೆ. ಇಲ್ಲಿನ ಅಮರ್ಧಾಮ್ನಲ್ಲಿ ಈ ಪ್ರಕ್ರಿಯೆ ನಡೆಸಲಾಗಿದ್ದು, ಒಂದೇ ದಿನ 42 ಜನರನ್ನ ಇಲ್ಲಿನ ಶವಾಗಾರದಲ್ಲಿ ಮಣ್ಣು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಪ್ರಕರಣ ಹೆಚ್ಚಾಗಿರುವ ಕಾರಣ ಇಲ್ಲಿಯವರೆಗೆ 1273 ಜನರು ಬಲಿಯಾಗಿದ್ದು, ಹೀಗಾಗಿ ಅಲ್ಲಿನ ಮಹಾನಗರ ಪಾಲಿಕೆ ಈ ಕ್ರಮ ಕೈಗೊಂಡಿದೆ. ಕಳೆದ ಕೆಲ ದಿನಗಳ ಹಿಂದೆ ಔರಂಗಾಬಾದ್ನಲ್ಲಿ 8 ಮಂದಿ ಕೋವಿಡ್ ಸೋಂಕಿತರ ಮೃತದೇಹ ಒಂದೇ ಚಿತೆ ಮೇಲೆ ಅಂತ್ಯಕ್ರಿಯೆ ನಡೆಸಲಾಗಿತ್ತು.