ಕೋರ್ಟ್ ಆವರಣದಲ್ಲೇ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಅತ್ಯಾಚಾರ ಅಪರಾಧಿಗಳು!ವಿಡಿಯೋ - ಪರ್ತಕರ್ತರ ಮೇಲೆ ಹಲ್ಲೆ ನಡೆಸಿದ ಅತ್ಯಾಚಾರ ಅಪರಾಧಿಗಳು
ನವದೆಹಲಿ: 2013ರಲ್ಲಿ ಗಾಂಧಿನಗರದಲ್ಲಿ ನಡೆದ ಐದು ವರ್ಷದ ಅಪ್ರಾಪ್ತೆಯ ಅಪಹರಣ ಹಾಗೂ ಅತ್ಯಾಚಾರ ಪ್ರಕರಣದ ಅಪರಾಧಿಗಳಿಬ್ಬರು ಇಂದು ಕೋರ್ಟ್ ಆವರಣದಲ್ಲೇ ಪರ್ತಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ದೆಹಲಿಯ ಕರ್ಕಾರ್ಡೂಮ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿದ್ದು, ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ ತೀರ್ಪು ನೀಡಿದೆ. ವಿಚಾರಣೆ ಬಳಿಕ ಕೋರ್ಟ್ನಿಂದ ಅಪರಾಧಿಗಳು ಹೊರಬರುತ್ತಿರುವುದನ್ನು ಮೊಬೈಲ್ನಲ್ಲಿ ಸೆರೆಹಿಡಿಯುತ್ತಿದ್ದ ಪತ್ರಕರ್ತರ ಮೇಲೆ ಮನೋಜ್ ಕುಮಾರ್ ಹಾಗೂ ಪ್ರದೀಪ್ ಹಲ್ಲೆ ನಡೆಸಿದ್ದು, ಮೊಬೈಲ್ಗಳನ್ನ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಜನವರಿ 30 ರಂದು ಅಪರಾಧಿಗಳ ಶಿಕ್ಷೆ ಸಂಬಂಧ ಕೋರ್ಟ್ ವಿಚಾರಣೆ ನಡೆಸಲಿದೆ.
Last Updated : Jan 18, 2020, 5:46 PM IST