ಏಷ್ಯಾ ಬುಕ್ ಆಫ್ ರೆಕಾರ್ಡ್ಗೆ ಸೇರಿ ‘ಗ್ರ್ಯಾಂಡ್ ಮಾಸ್ಟರ್’ ಬಿರುದು ಪಡೆದ 2 ವರ್ಷದ ಪೋರ..!
ಎರ್ನಾಕುಲಂ: 2 ವರ್ಷದ ಈಥನ್ ಅಶ್ವಿನ್ ಪುಟ್ಟ ಮಗುವೊಂದು ಏಷ್ಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಹೆಸರು ದಾಖಲಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ತನ್ನ 2ನೇ ವರ್ಷದಲ್ಲಿ ಇಂಗ್ಲೀಷ್ ವರ್ಣಮಾಲೆಯನ್ನು ಹಿಮ್ಮುಖವಾಗಿ ಕೇವಲ 6 ನಿಮಿಷ 38 ಸೆಕೆಂಡ್ಗಳಲ್ಲಿ ಬರೆದು ಈ ಸಾಧನೆ ಮಾಡಿದ್ದಾನೆ. ಈ ಮೂಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ಗೆ ಪ್ರವೇಶಿಸಿ ‘ಗ್ರ್ಯಾಂಡ್ ಮಾಸ್ಟರ್’ ಎಂಬ ಬಿರುದು ಪಡೆದಿದ್ದಾನೆ. ಈ ಪೋರ 15 ಪ್ರಾಣಿಗಳ ಶಬ್ದ, 16 ಆಕಾರಗಳು, 18 ಬಣ್ಣಗಳು, 1ರಿಂದ 99ರ ವರೆಗಿನ ಸರಿ ಹಾಗೂ ಬೆಸ ಸಂಖ್ಯೆ, 1ರಿಂದ 100ರ ವೆರೆಗಿನ ಹಿಮ್ಮುಖ ಸಂಖ್ಯೆ ಬರೆಯುವುದು ಹಾಗೂ ಎಣಿಸುವುದನ್ನು ಕರಗತ ಮಾಡಿಕೊಂಡಿದ್ದಾನೆ. ಅಲ್ಲದೇ ಇದಕ್ಕೂ ಮೊದಲೇ 100ರಿಂದ 1ರ ವರೆಗೆ ಹಿಮ್ಮುಖವಾಗಿ ಸಂಖ್ಯೆ ಬರೆದು ಇಂಡಿಯನ್ ಬುಕ್ ಆಫ್ ರೆಕಾರ್ಡ್ನಲ್ಲೂ ಪ್ರವೇಶಿಸಿದ್ದಾನೆ.