ಸ್ಟಂಟ್ ಮಾಸ್ಟರ್ ಆಗಬೇಕೆಂಬ ಕನಸು ಕಾಣುತ್ತಿರುವ ವಿಶೇಷ ಚೇತನ ಯುವಕ - ಸ್ಟಂಟ್ ಮಾಸ್ಟರ್
ಅನಂತ್‌ನಾಗ್ (ಜಮ್ಮು ಕಾಶ್ಮೀರ) : ಹುಟ್ಟಿನಿಂದಲೇ ಅಂಗವಿಕಲನಾಗಿರುವ 17ವರ್ಷದ ಬಾಲಕ ರಯೀಸ್ ಅಹ್ಮದ್ ಷಾ ತನ್ನ ಗಾಲಿ ಕುರ್ಚಿಯ ಮೇಲೆ ಕುಳಿತು ಕ್ರಿಕೆಟ್ ಆಡುತ್ತಾನೆ. ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಕೋಕರ್‌ನಾಗ್ ಪ್ರದೇಶದ ಷಾ, ಸ್ಟಂಟ್ ಮಾಸ್ಟರ್ ಆಗಬೇಕೆಂಬ ಕನಸು ಹೊಂದಿದೆ. ಇದರಲ್ಲಿ ಯಶಸ್ವಿಯಾಗಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾನೆ. ಈಟಿವಿ ಭಾರತದೊಂದಿಗೆ ಮಾತನಾಡಿದ ಆತ "ನಾನು 5 ವರ್ಷಗಳಿಂದ ಸಾಹಸ ಅಭ್ಯಾಸ ಮಾಡುತ್ತಿದ್ದೇನೆ ಮತ್ತು ಶೀಘ್ರದಲ್ಲೇ ಅದನ್ನು ಕರಗತ ಮಾಡಿಕೊಳ್ಳುವ ಭರವಸೆ ಹೊಂದಿದ್ದೇನೆ. ನನ್ನ ಕನಸುಗಳನ್ನು ಈಡೇರಿಸಲು ನಾನು ಶ್ರಮಿಸುತ್ತಿದ್ದೇನೆ. ನನ್ನ ಪೋಷಕರು ತುಂಬಾ ಬೆಂಬಲ ಮತ್ತು ಪ್ರೋತ್ಸಾಹ ನೀಡುತ್ತಿದ್ದಾರೆ" ಎಂದು ಹೇಳಿದನು.