ಭೀಕರ ಪ್ರವಾಹದಲ್ಲಿ ತೇಲಿ ಹೋದ 11 ಲಾರಿ, ಟ್ರ್ಯಾಕ್ಟರ್, ಟಾಟಾ ಸುಮೋ: ವಿಡಿಯೋ - ಪ್ರವಾಹಕ್ಕೆ ತೇಲಿ ಹೋದ 11 ಲಾರಿ
ನಲ್ಗೊಂಡ: ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ವೇಳೆ ಸುರಿದ ಭಾರೀ ಮಳೆಗೆ ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ. ಪ್ರವಾಹದ ನೀರಿನಲ್ಲಿ ಅಂದಾಜು 30 ಜನರು ಸಾವನ್ನಪ್ಪಿದ್ದಾರೆ. ಈ ನಡುವೆ ನೀರಲ್ಲಿ ಬೈಕ್, ಕಾರುಗಳು ತೇಲಿ ಹೋಗಿರುವ ಘಟನೆ ಸಹ ನಡೆದಿದೆ. ಯಡಾದ್ರಿ ಭುವನಗಿರಿ ಜಿಲ್ಲೆಯಲ್ಲಿ ಮುಸಿ ನದಿಯ ದಂಡೆಯಲ್ಲಿ ನಿಲ್ಲಿಸಲಾಗಿದ್ದ 11 ಲಾರಿಗಳು, ಟ್ರ್ಯಾಕ್ಟರ್ ಹಾಗೂ ಲಾರಿಗಳು ಪ್ರವಾಹದಲ್ಲಿ ತೇಲಿ ಹೋಗಿವೆ. 25 ಗಂಟೆಗಳ ಕಾಲ ಸುರಿದ ಭೀಕರ ಮಳೆಗೆ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ವಾರಂಗಲ್-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಗೆ ಸಂಪೂರ್ಣವಾಗಿ ಹಾನಿಯಾಗಿದೆ.