ಆಟಿಸಂ ಪೀಡಿತ ಬಾಲಕಿಯ ದಾಖಲೆ: 13 ಗಂಟೆಯಲ್ಲಿ ಲಂಕಾದಿಂದ ತಮಿಳುನಾಡಿನವರೆಗೆ ಈಜು! - ಲಂಕಾದಿಂದ ತಮಿಳುನಾಡಿನವರೆಗೆ ಈಜು
ರಾಮನಾಥಪುರಂ(ತಮಿಳುನಾಡು): ಸಾಧನೆ ಮಾಡಬೇಕೆಂಬ ಛಲವಿದ್ದರೆ ಯಾವ ನ್ಯೂನತೆ ಕೂಡ ಅಡ್ಡಿ ಬರಲ್ಲ. ಆಟಿಸಂ(ಸ್ವಲೀನತೆ) ಎಂಬ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿಯೋರ್ವಳು ಕೇವಲ 13 ಗಂಟೆಗಳಲ್ಲಿ ಶ್ರೀಲಂಕಾದಿಂದ ತಮಿಳುನಾಡಿಗೆ ಈಜುವ ಮೂಲಕ ಹೊಸದೊಂದು ದಾಖಲೆ ಬರೆದಿದ್ದಾಳೆ. ಶ್ರೀಲಂಕಾದ ತಲೈಮನ್ನಾರ್ನಿಂದ ಧನುಷ್ಕೋಡಿಯ ಅರಿಚಲ್ಮುನೈಗೆ ಕೇವಲ 13 ಗಂಟೆಗಳಲ್ಲಿ ಈಜಿದ್ದಾಳೆ. ಜಿಯಾ ರೈ ಈ ಸಾಧನೆ ಮಾಡಿದ್ದು, ಮುಂಬೈನಲ್ಲಿ ವಾಸವಾಗಿರುವ ಭಾರತೀಯ ನೌಕಾಧಿಕಾರಿ ಮದನ್ ರೈ ಅವರ ಪುತ್ರಿ. ಎರಡು ವರ್ಷದವಳಿದ್ದಾಗ ಜಿಯಾ ಆಟಿಸಂ ತೊಂದರೆಗೊಳಗಾಗಿದ್ದು, ವೈದ್ಯರ ಸಲಹೆ ಮೇರೆಗೆ ಈಜು ತರಬೇತಿ ನೀಡಲಾಗ್ತಿದೆ. ಪ್ರತಿ ಗಂಟೆಗೆ 14 ಕಿಲೋ ಮೀಟರ್ ವೇಗದಲ್ಲಿ ಈ ಬಾಲಕಿ ಈಜುತ್ತಾಳೆ.
Last Updated : Feb 3, 2023, 8:20 PM IST