ಮಹಮ್ಮದ್ ನಲಪಾಡ್ಗೆ ಸೇರಿದ ಹೋಟೆಲ್ ಗುತ್ತಿಗೆ ಪಡೆದ ಯುವತಿ ಮೇಲೆ ಹಲ್ಲೆ: ಸಿಸಿಟಿವಿ ವಿಡಿಯೋ - ಮೈಸೂರಿನಲ್ಲಿ ನಲಪಾಡ್ಗೆ ಸೇರಿದ ಹೋಟೆಲ್ ಗುತ್ತಿಗೆ ಪಡೆದ ಯುವತಿ ಮೇಲೆ ಹಲ್ಲೆ ಸಿಸಿಟಿವಿಯಲ್ಲಿ ಸೇರೆ
ಮೈಸೂರು: ರಾಜ್ಯ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ಗೆ ಸೇರಿದ ರೆಸ್ಟೋರೆಂಟ್ನಲ್ಲಿ ಯುವತಿ ಮೇಲೆ ಹಲ್ಲೆ ನಡೆಸಲಾಗಿದೆ. ಘಟನೆಗೆ ಸಂಬಂಧಿಸಿದ ಸಿಸಿಟಿವಿ ವಿಡಿಯೋ ದೊರೆತಿದೆ. ನಗರದ ಹೈವೇ ಸರ್ಕಲ್‌ನಲ್ಲಿರುವ ನಲಪಾಡ್ ಹೋಟೆಲ್ ಅನ್ನು ಕೃತಿಕಾ ಗೌಡ 20 ಲಕ್ಷ ರೂ ನೀಡಿ ಲೀಸ್ಗೆ ತೆಗೆದುಕೊಂಡು ನಡೆಸುತ್ತಿದ್ದರು. ಇದಕ್ಕೆ ಕಸ್ತೂರಿ ರೆಸ್ಟೋರೆಂಟ್ ಎಂದು ಹೆಸರಿಡಲಾಗಿತ್ತು. ಆದರೆ ರೆಸ್ಟೋರೆಂಟ್ ಪ್ರಾರಂಭಿಸಿ ಇನ್ನೂ ಒಂದು ವರ್ಷವೂ ಕಳೆದಿಲ್ಲ, ಆದರೂ ಅವಧಿಗೂ ಮುನ್ನವೇ ರೆಸ್ಟೋರೆಂಟ್ ಜಾಗ ಖಾಲಿ ಮಾಡುವಂತೆ ಹೋಟೆಲ್ ಮುಖ್ಯಸ್ಥ ಸಯ್ಯದ್ ರಿಯಾಜ್ ಕೃತಿಕಾ ಜೊತೆ ಗಲಾಟೆ ಮಾಡಿದ್ದಾನೆ. ಇಬ್ಬರ ಮಧ್ಯೆ ವಾಗ್ವಾದ ನಡೆದಿದ್ದು ಸಯ್ಯದ್ ರಿಯಾಜ್, ಕೃತಿಕಾ ಅವರನ್ನು ತಳ್ಳಿ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
Last Updated : Feb 3, 2023, 8:21 PM IST