ಪ್ರಶಾಂತ್ ನೀಲ್ ಡೈರೆಕ್ಷನ್‌ನಲ್ಲಿ ಕೆಲಸ ಮಾಡಲು ಭಯ ಆಗ್ತಿತ್ತು ಎಂದ ರವೀನಾ.. ಕೆಜಿಎಫ್ ಒಂದು ಪಾಠ-ಸಂಜಯ್ ದತ್ - sanjay dut in kfg trailer release programme
'KGF 2' ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ರಿಲೀಸ್ ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ರವೀನಾ ಟಂಡನ್, ಈ ಸಿನಿಮಾಗೆ ನನ್ನನ್ನು ಕಾಸ್ಟ್ ಮಾಡಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಟ್ರೈಲರ್ ತುಂಬ ಅದ್ಭುತವಾಗಿ ಮೂಡಿ ಬಂದಿದೆ. ಪ್ರಶಾಂತ್ ನೀಲ್ ಡೈರೆಕ್ಷನ್‌ನಲ್ಲಿ ಕೆಲಸ ಮಾಡಲು ಭಯ ಆಗ್ತಿತ್ತು. ಆಮೇಲೆ ತುಂಬಾ ಎಡ್ಜೆಸ್ಟ್ ಆಗಿಬಿಟ್ರು. ಅವರೊಂದಿಗೆ ಕೆಲಸ ಮಾಡಿರುವುದಕ್ಕೆ ತುಂಬಾ ಖುಷಿ ಆಗ್ತಿದೆ ಎಂದು ಟಂಡನ್ ಹೇಳಿದರು. ಇದೇ ವೇಳೆ ಹಿರಿಯ ನಟ ಸಂಜಯ್ ದತ್ ಮಾತನಾಡಿ, 45 ವರ್ಷದ ನಂತರ ಕೆಜಿಎಫ್ ನನಗೆ ಒಂದು ಪಾಠವಾಯಿತು. ಕೆಜಿಎಫ್ ಶೂಟಿಂಗ್ ಮಾಡುವಾಗ ನಾವೆಲ್ಲಾ ಒಂದು ಫ್ಯಾಮಿಲಿ ತರ ಇದ್ವಿ. ನನ್ನ ಜೊತೆ ಅಭಿನಯಿಸಿದ್ದಕ್ಕೆ ಯಶ್ಗೆ ಧನ್ಯವಾದ ಎಂದರು.
Last Updated : Feb 3, 2023, 8:21 PM IST