ಕಾರ್ಯಕರ್ತರ ಜೈಕಾರ.. ಭಾವುಕರಾದ AAP ಸಿಎಂ ಅಭ್ಯರ್ಥಿ ಭಗವಂತ್ ಮಾನ್, ತಾಯಿ ಹರ್ಪಾಲ್ ಕೌರ್! - ಪಂಚರಾಜ್ಯ ಫಲಿತಾಂಶ
ಸಂಗ್ರೂರ್(ಪಂಜಾಬ್): ಪಂಚರಾಜ್ಯಗಳ ಚುನಾವಣೆ ಪೈಕಿ ಪಂಜಾಬ್ನಲ್ಲಿ ಏಕಾಂಗಿಯಾಗಿ ಹೋರಾಟ ನಡೆಸಿ, ಅತಿದೊಡ್ಡ ಪಕ್ಷವಾಗಿ ಭಾರಿ ಬಹುಮತದೊಂದಿಗೆ ಹೊರಹೊಮ್ಮುವಲ್ಲಿ ಆಮ್ ಆದ್ಮಿ ಪಕ್ಷ ಯಶಸ್ವಿಯಾಗಿದೆ. ಈ ವೇಳೆ ಪಕ್ಷದ ಕಾರ್ಯಕರ್ತರ ಮುಂದೆ ಆಗಮಿಸುತ್ತಿದ್ದಂತೆ ಭಗವಂತ್ ಮಾನ್ ಹಾಗೂ ತಾಯಿ ಹರ್ಪಾಲ್ ಕೌರ್ ಅವರು ಭಾವುಕರಾಗಿದ್ದಾರೆ. ಎಎಪಿ ಪಕ್ಷದ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಕೂಡ ತಮ್ಮ ಕ್ಷೇತ್ರದಲ್ಲಿ 55 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು ಪಂಜಾಬ್ ಜನರ ಸಿಎಂ ಆಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.
Last Updated : Feb 3, 2023, 8:19 PM IST