ಚಿಕ್ಕಮಗಳೂರು : ಬಿಯರ್ ಬಾಟಲ್ ಒಳಗೆ ತಲೆ ಸಿಕ್ಕಿಸಿಕೊಂಡಿದ್ದ ನಾಗರಹಾವು ರಕ್ಷಣೆ - ಚಿಕ್ಕಮಗಳೂರಿನಲ್ಲಿ ಬಿಯರ್ ಬಾಟಲ್ ಒಳಗೆ ತಲೆ ಸಿಕ್ಕಿಸಿಕೊಂಡಿದ್ದ ನಾಗರಹಾವು ರಕ್ಷಣೆ
ನಾಗರಹಾವೊಂದು ಬಿಯರ್ ಬಾಟಲ್‌ನಲ್ಲಿ ತಲೆ ಸಿಲುಕಿಸಿಕೊಂಡು ಪರದಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ನಡೆದಿದೆ. ಸಾರ್ವಜನಿಕರು ಕೂಡಲೇ ಮೂಡಿಗೆರೆಯ ಉರಗ ತಜ್ಞ ಆರಿಫ್ಗೆ ಫೋನ್ ಮೂಲಕ ವಿಚಾರ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಉರಗ ತಜ್ಞ ಆರಿಫ್, ಬಿಯರ್ ಬಾಟಲಿ ಒಳಗೆ ತಲೆಯನ್ನು ಸಿಕ್ಕಿಸಿಕೊಂಡು ಒದ್ದಾಡುತ್ತಿದ್ದ ಹಾವನ್ನ ರಕ್ಷಿಸಿದ್ದಾರೆ. ಈ ಸಮಯದಲ್ಲಿ ನಾಗರಹಾವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹಾವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಸುರಕ್ಷಿತವಾಗಿ ಚಾರ್ಮುಡಿ ಘಾಟ್ ಅರಣ್ಯಕ್ಕೆ ಬಿಟ್ಟಿದ್ದಾರೆ.
Last Updated : Feb 3, 2023, 8:19 PM IST