ವಿಡಿಯೋ: ಕಾಡು ಬಿಟ್ಟು ನಾಡಿನತ್ತ ಬಂದ ಹೆಬ್ಬಾವು ಸೆರೆ - ಸ್ನೇಕ್ ಕಿರಣ್
ಶಿವಮೊಗ್ಗ: ರಾತ್ರಿ ವೇಳೆ ಬೇಟೆಯಾಡಲು ಕಾಡು ಬಿಟ್ಟು ನಾಡಿನತ್ತ ಬಂದಿದ್ದ ಹೆಬ್ಬಾವೊಂದನ್ನ ಸ್ನೇಕ್ ಕಿರಣ್ ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. ಶಿವಮೊಗ್ಗದ ನಗರದ ಗೋಪಾಳ ಬಡಾವಣೆಯ ಶಾರದ ದೇವಿ ಅಂಧರ ವಿಕಾಸ ಶಾಲೆಯ ಸೇತುವೆ ಬಳಿ ರಾತ್ರಿ ವೇಳೆ ಹೆಬ್ಬಾವು ಕಾಣಿಸಿಕೊಂಡಿತು. ಕೂಡಲೇ ಎಡ್ವರ್ಡ್ ಪಿಂಟೊ ಎನ್ನುವರು ಈ ಕುರಿತು ಸ್ನೇಕ್ ಕಿರಣ್ ಅವರಿಗೆ ಫೋನ್ ಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಕಿರಣ್, ಹೆಬ್ಬಾವನ್ನ ಸುರಕ್ಷಿತವಾಗಿ ಹಿಡಿದು ಅರಣ್ಯಾಧಿಕಾರಿಗಳ ಮೂಲಕ ಕಾಡಿಗೆ ಬಿಟ್ಟಿದ್ದಾರೆ. ಈ ಹೆಬ್ಬಾವು ಸುಮಾರು 7 ಅಡಿ ಉದ್ದವಿದ್ದು, 15 ಕೆ.ಜಿ ತೂಕವಿದೆ.
Last Updated : Feb 3, 2023, 8:21 PM IST