ಕರ್ನಾಟಕ

karnataka

ETV Bharat / videos

ಜೇಮ್ಸ್ ಜಾತ್ರೆ: ಅಪ್ಪು ಕಟೌಟ್ ಮುಂದೆ 1001 ಈಡುಗಾಯಿ ಒಡೆದ ಫ್ಯಾನ್ಸ್, ಪ್ರೇಕ್ಷಕರಿಗೆ ಚಿಕನ್ ಪಲಾವ್ ವಿತರಣೆ - ಪುನೀತ್ ರಾಜಕುಮಾರ್ 47ನೇ ಹುಟ್ಟುಹಬ್ಬ

By

Published : Mar 17, 2022, 10:26 AM IST

Updated : Feb 3, 2023, 8:20 PM IST

ಚಾಮರಾಜನಗರ: ಜಿಲ್ಲೆಯಲ್ಲಿ 'ಜೇಮ್ಸ್' ಅಬ್ಬರ ಜೋರಾಗಿದ್ದು ಸಿನಿಮಾ ಥಿಯೇಟರ್​ಗಳ ಮುಂದೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಜಿಲ್ಲಾದ್ಯಂತ ಐದಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ 'ಜೇಮ್ಸ್' ಬಿಡುಗಡೆಯಾಗಿದ್ದು ಥಿಯೇಟರ್​ಗಳ ಮುಂದೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬುಧವಾರದಿಂದಲೇ ಅಪ್ಪು ಕಾಟೌಟ್​ಗಳು ಆರ್ಭಟಿಸುತ್ತಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ‌ಮೆರವಣಿಗೆ ನಡೆಸಲಾಗುತ್ತಿದೆ. ಎಲ್ಲ ಚಿತ್ರಮಂದಿರಗಳ ಮುಂದೆ ಅಭಿಮಾನಿಗಳ ಮಹಾಪೂರವೇ ಸೇರಿದ್ದು, ನಗರದ ಗುರುರಾಘವೇಂದ್ರ ಚಿತ್ರಮಂದಿರದ ಮುಂದಿನ ಅಪ್ಪು ಕಟೌಟ್​ಗೆ 1001 ಈಡುಗಾಯಿ ಒಡೆಯಲಾಗಿದೆ. ಜೊತೆಗೆ ಮಧ್ಯಾಹ್ನ ಚಿತ್ರ ವೀಕ್ಷಣೆಗೆ ಬರುವ ಎಲ್ಲರಿಗೂ ಅಭಿಮಾನಿಗಳಿಂದ ಚಿಕನ್ ಪಲಾವ್ ಹಂಚಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
Last Updated : Feb 3, 2023, 8:20 PM IST

ABOUT THE AUTHOR

...view details