ವಾಷಿಂಗ್ಟನ್: ಪ್ರಸ್ತುತ ಅಮೆರಿಕದಾದ್ಯಂತ ಝೋಂಬಿ ಡೀರ್ ರೋಗವೂ ಪತ್ತೆಯಾಗಿದ್ದು, ಇದು ಮಾನವರಿಗೂ ಹರಡುವ ಸಾಧ್ಯತೆ ಇದೆ. ಆದರೆ, ಇದನ್ನು ಪತ್ತೆ ಮಾಡುವುದು ಅಸಾಧ್ಯ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಝೋಂಬಿ ಡೀರ್ ರೋಗವೂ ದೀರ್ಘಕಾಲದ ಕ್ಷೀಣತೆ ರೋಗವಾಗಿದ್ದು, ಇದು ಮಾರಾಣಾಂತಿಕವಾಗಿದೆ. ಪ್ರಿಯಾನ್ ಸೋಂಕಿಗೆ ಒಳಗಾದ ಜಿಂಕೆಗಳಲ್ಲಿ ಈ ರೋಗ ಲಕ್ಷಣಗಳು ಕಾಡುತ್ತದೆ. ಈ ರೋಗಕ್ಕೆ ತುತ್ತಾದ ಜಿಂಕಿಗಳ ನರ ಮಂಡಲ ವ್ಯವಸ್ಥೆಯ ಮೇಲೆ ಇದು ಪರಿಣಾಮ ಬೀರುತ್ತದೆ. ಇದು ಜಿಂಕೆ, ಎಲ್ಕ್ ಮತ್ತು ಮೂಸ್ ಪ್ರಾಣಿಗಳ ದೇಹದ ಕಾರ್ಯಾಚರಣೆಗೆ ಅಡ್ಡಿ ಮಾಡುತ್ತದೆ. ಇದು ಸದ್ಯ ಅಮೆರಿಕದ 26 ರಾಜ್ಯದಲ್ಲಿ ಹರಡಿದೆ.
ಈ ರೋಗವೂ ಮಾನವರಿಗೆ ಹರಡುವ ಸಾಧ್ಯತೆ ಇದೆ. ಇದರ ಸೂಚನೆ ಬಗ್ಗೆ ನಮಗೆ ಗೊತ್ತಿಲ್ಲದೆ ಇರಬಹುದು ಎಂದು ಮಿನ್ನೆಸೊಟಾ ಯುನಿವರ್ಸಿಟಿಯ ಡಾ ಮೈಕೆಲ್ ಒಸ್ಟರ್ಹೊಲ್ಮ್ ತಿಳಿಸಿದ್ದಾರೆ. ಮ್ಯಾಡ್ ಕೌ ರೋಗವೂ (ಹುಚ್ಚು ಹಸುವಿನ ರೋಗ) ಹಸುವಿನಲ್ಲಿ ಕಂಡು ಬಂದ 10 ವರ್ಷದ ಬಳಿಕ ಇದು ತನ್ನ ರೋಗ ಲಕ್ಷಣವನ್ನು ತೋರಿತು. ಈ ಸೋಂಕಿನ ಪತ್ತೆಗೆ 10 ವರ್ಷ ಸಮಯ ಬೇಕಾಯಿತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಈ ರೋಗವೂ ಮಾರಾಣಾಂತಿಕವಾಗಿದ್ದು, ಉಪಶಮನ ಮಾಡಲಾಗದ ಮತ್ತು ಹೆಚ್ಚಿನ ರೂಪಾಂತರವನ್ನು ಹೊಂದಿದೆ, ಇದನ್ನು ಸೋಂಕಿತ ಪ್ರಾಣಿಗಳಿಂದ ಅಥವಾ ಪರಿಸರದಿಂದ ನಿರ್ಮೂಲನೆ ಮಾಡಲು ಯಾವುದೇ ಪರಿಣಾಮಕಾರಿಯಾದ ಮಾರ್ಗಗಳಿಲ್ಲ ಎಂದು ಮಿನ್ನೆಸೊಟಾ ಯುನಿವರ್ಸಿಟಿಯ ಡಾ ಕೊರೆ ಆಂಡ್ರೆಸನ್ ತಿಳಿಸಿದ್ದಾರೆ.