ಸ್ವಿಟ್ಜರ್ಲ್ಯಾಂಡ್ನಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಿಂಟರ್ಥೂರ್ ಎಂಬ ನಗರದಲ್ಲಿ ಹಸ್ತಮೈಥುನದ ವೇಳೆ 20 ವರ್ಷದ ಯುವಕ ಹಠಾತ್ತನೇ ಉಸಿರಾಟ ತೊಂದರೆಗೆ ಒಳಗಾಗಿ ಕುಸಿದು ಬಿದ್ದಿದ್ದಾನೆ. ಎದೆ ಕಿವುಚಿದಂತಾಗಿ, ಉಸಿರಾಡಲೂ ಆಗದೇ ಒದ್ದಾಡಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸದ್ಯಕ್ಕೆ ಆ ಯುವಕನಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಯಂತೆ.
ಸಾಮಾನ್ಯವಾಗಿ ಕಠಿಣ ವ್ಯಾಯಾಮ, ಲೈಂಗಿಕ ಕ್ರಿಯೆಯ ವೇಳೆ ಹೃದಯಾಘಾತ ಉಂಟಾಗುವ ಸಾಧ್ಯತೆಗಳು ಇರುತ್ತವೆ. ಆದರೆ, ಇದೇ ಮೊದಲ ಬಾರಿಗೆ ಹಸ್ತಮೈಥುನದ ಸಮಯದಲ್ಲೂ ಉಸಿರಾಟ ತೊಂದರೆ ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದು ವೈದ್ಯರೇ ಆಶ್ಚರ್ಯಪಡುವಂತಾಗಿದೆ. ಈ ಘಟನೆಯನ್ನು ‘ರೇಡಿಯಾಲಜಿ ಕೇಸ್ ರಿಪೋರ್ಟ್ಸ್’ ಎಂಬ ಜರ್ನಲ್ ಪ್ರಕಟಿಸಿದ್ದು, ಕುತೂಹಲದೊಂದಿಗೆ ಆತಂಕ ಉಂಟು ಮಾಡಿದೆ.
ಊದಿಕೊಂಡ ಮುಖ, ಕೈ ಕಾಲು:ಆಸ್ಪತ್ರೆಗೆ ಬಂದಾಗ ಆ ಯುವಕನ ಮುಖ ಊದಿಕೊಂಡಿತ್ತು. ಕತ್ತಿನಿಂದ ಕೈಗಳವರೆಗೆ ಎಲ್ಲಿ ಹಿಡಿದರೂ 'ಟಕ್ ಟಕ್' ಎಂದು ಕೀಲು ಮುರಿದಾಗ ಬರುವ ಸದ್ದು ಬರುತ್ತಿತ್ತಂತೆ. ನಂತರ ವೈದ್ಯರು ಯುವಕನಿಗೆ ನ್ಯುಮೋಮೆಡಿಯಾಸ್ಟಿನಮ್ ಮಾಡಿ ಪರೀಕ್ಷಿಸಿದ್ದಾರೆ. ಯುವಕನ ಶ್ವಾಸಕೋಶದಿಂದ ಗಾಳಿ ಸೋರಿಕೆಯಾಗಿ ದೇಹದಾದ್ಯಂತ ಹರಡಿರುವುದು ಕಂಡುಬಂದಿದೆ.