ಕರ್ನಾಟಕ

karnataka

By

Published : Jun 11, 2022, 8:50 PM IST

ETV Bharat / sukhibhava

ದಿನಾಲೂ ಸುಖ ನಿದ್ರೆ ನಿಮ್ಮದಾಗಬೇಕಾದರೆ ಈ ಟಿಪ್ಸ್​ ಪಾಲಿಸಿ..

ನಾವು ವೇಗವಾಗಿ ಓಡುತ್ತಿರುವ ಜಗತ್ತಿನಲ್ಲಿ ಜೀವಿಸುತ್ತಿದ್ದೇವೆ. ಈಗಿರುವ 24 ಗಂಟೆಗಳು ಹೇಗೆ ಲೆಕ್ಕ ಹಾಕಿದರೂ ಸಾಲುತ್ತಿಲ್ಲ, ಇನ್ನೂ ಜಾಸ್ತಿ ಹೊತ್ತು ಇರಬೇಕಾಗಿತ್ತು ಎನಿಸುತ್ತದೆ. ಆದರೆ ನಮ್ಮ ದಿನ ಚೆನ್ನಾಗಿರಬೇಕಾದರೆ ರಾತ್ರಿಯ ನಿದ್ದೆ ಬಹಳ ಮುಖ್ಯ. ಆಹ್ಲಾದಕರ, ಆರಾಮದಾಯಕ ನಿದ್ದೆ ನಿಮ್ಮದಾಗಿಸಿಕೊಳ್ಳಲು ಇಲ್ಲಿದೆ ಮಾರ್ಗೋಪಾಯ..

Your Guide to a Good Night's Sleep
ದಿನಾಲೂ ಸುಖ ನಿದ್ರೆ ನಿಮ್ಮದಾಗಬೇಕಾದರೆ ಹೀಗೆ ಮಾಡಿ..

ನಿದ್ರೆ ಬರುತ್ತಿದ್ದರೂ, ಸರಿಯಾದ ಸಮಯಕ್ಕೆ ಮಲಗಿದ ನಂತರವೂ ನಿದ್ರೆಗೆ ಜಾರದೆ ಹೊರಳಾಡುತ್ತೀರಾ? ಅದು ನಿಜವೇ ಆಗಿದ್ದರೆ, ಅದಕ್ಕೆ ಕಾರಣ ನೀವಿರುವ ಪರಿಸರ ಮತ್ತು ಕಳಪೆ ಪೂರ್ವ ನಿದ್ರಾ ಶಿಸ್ತು. ನೀವು ಬಯಸುವ ಆ ಸುಖ ನಿದ್ರೆ ನಿಮ್ಮದಾಗಬೇಕಾದರೆ, ಅದಕ್ಕಾಗಿ ನೀವು ಸ್ವಲ್ಪ ಕಷ್ಟಪಡಬೇಕಾಗುತ್ತದೆ. ನಿಮಗೆ ಹೊಂದುವಂತಹ, ಆಹ್ಲಾದಕರ ಪರಿಸರವನ್ನು ನೀವೇ ರಚಿಸಿಕೊಳ್ಳಿ ಅಥವಾ ರೂಢಿಸಿಕೊಳ್ಳಿ..

ಪೂರ್ವ-ನಿದ್ರೆಯ ಶಿಸ್ತು:ಮಾನಸಿಕವಾಗಿ ಮತ್ತು ದೈಹಿಕವಾಗಿ ನಿಮ್ಮೊಳಗಿರುವ ಎಲ್ಲಾ ಗೊಂದಲಗಳನ್ನು ಬದಿಗಿಟ್ಟು, ದೀಪಗಳನ್ನು ಮಂದಗೊಳಿಸಿ ನಿಮ್ಮ ಹಾಸಿಗೆ ಹೊಂದಿಸಿಕೊಳ್ಳಿ. ಆ ಮಂದ ಬೆಳಕಿನ ವಾತಾವರಣ ನಿಮ್ಮ ಮನಸ್ಸಿಗೆ ಇದು ನಿದ್ರೆಗೆ ಸೂಕ್ತ ಸಮಯ ಎಂಬುದನ್ನು ಸೂಚಿಸುತ್ತದೆ. ನಿಮಗೆ ನಿದ್ರೆ ಬರುವವರೆಗೆ ನಿಮ್ಮ ಮನಸ್ಸು ಯೋಚನೆಗಳನ್ನೆಲ್ಲ ಮರೆತು ನವಿಲು ಗರಿಯಷ್ಟು ಹಗುರವಾಗಿರುವ ಭಾವ ನೀಡುತ್ತದೆ.

ಮಲಗುವ ಕೋಣೆ ತಾಪಮಾನ ಹೊಂದಿಸಿ:ನಮ್ಮ ದೇಹ ಮತ್ತು ಮಲಗುವ ಕೋಣೆಯ ಉಷ್ಣತೆ ನಮ್ಮ ನಿದ್ರೆಯ ಗುಣಮಟ್ಟದ ಮೇಲೆ ಗಾಢವಾಗಿ ಪರಿಣಾಮ ಬೀರುತ್ತದೆ. ಮಲಗುವ ಪ್ರದೇಶದಲ್ಲಿ ಹೆಚ್ಚಿನ ಅಥವಾ ಕಡಿಮೆ ತಾಪಮಾನವು ನಿದ್ರೆಯ ಗುಣಮಟ್ಟವನ್ನು ಹದಗೆಡಿಸುತ್ತದೆ ಎಂಬುದು ಅಧ್ಯಯನಗಳಿಂದ ಬಹಿರಂಗಗೊಂಡಿವೆ. ನಿಮ್ಮ ದೇಹದ ಆದ್ಯತೆಗಳಿಗೆ ಅನುಗುಣವಾಗಿ ಉತ್ತಮ ಮತ್ತು ಆರಾಮದಾಯಕ ನಿದ್ರೆಗಾಗಿ ನಿಮ್ಮ ದೇಹಕ್ಕೆ ಸೂಕ್ತವಾದದ್ದನ್ನು ತಾಪಮಾನವನ್ನು ಕಂಡುಹಿಡಿಯಬೇಕು. ಹೆಚ್ಚಾಗಿ ಬೆಡ್​​ರೂಂ ತಂಪಾಗಿದ್ದರೆ (60 ಮತ್ತು 67 ಡಿಗ್ರಿಗಳ ನಡುವೆ) ಅತ್ಯುತ್ತಮ ನಿದ್ರೆ ನಿಮ್ಮದಾಗಿರುತ್ತದೆ.

ವಿಶ್ರಾಂತಿ ಶವರ್ ತೆಗೆದುಕೊಳ್ಳಿ:ಬೆಚ್ಚಗಿನ ವಿಶ್ರಾಂತಿ ಶವರ್ ಉತ್ತಮ ನಿದ್ರೆಗೆ ಮತ್ತೊಂದು ದಾರಿ. ಅಧ್ಯಯನಗಳ ಪ್ರಕಾರ, ಮಲಗುವ ಮುನ್ನ ಬಿಸಿನೀರಿನ ಸ್ನಾನವು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಜನರು ಹೆಚ್ಚು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಒಂದು ವೇಳೆ ನಿಮಗೆ ರಾತ್ರಿ ನಿದ್ರೆ ಮಾಡುವುದು ಕಷ್ಟ ಅಥವಾ ಇಷ್ಟವಿಲ್ಲದೇ ಹೋದರೆ ಆರಾಮದಾಯಕ ನಿದ್ರೆಗಾಗಿ ಉಗುರು ಬೆಚ್ಚಗಿನ ನೀರಿನಲ್ಲಿ ನಿಮ್ಮ ಪಾದಗಳನ್ನು ಕೆಲಕಾಲ ಮುಳುಗಿಸಿಡಿ. ಬೆಚ್ಚಗಿನ ಹಬೆಯನ್ನು ನಿಮ್ಮದಾಗಿಸಿಕೊಳ್ಳಿ. ಮನಸ್ಸಿಗೂ ಹಿತವಾಗಿ ನೆಮ್ಮದಿಯ ನಿದ್ರೆ ನಿಮ್ಮದಾಗುತ್ತದೆ.

ಆರಾಮದಾಯಕವಾದ ಹಾಸಿಗೆ, ಹೊದಿಕೆ, ದಿಂಬು ಇರಲಿ:ತುಂಬಾ ಜನ ಹೋಟೆಲ್​ಗಳ ರೂಮ್​ಗಳಲ್ಲಿ ಚೆನ್ನಾಗಿ ನಿದ್ರೆ ಮಾಡುತ್ತಾರೆ. ಮನೆಯಲ್ಲಿ ನಿದ್ರೆ ಬರುವುದಿಲ್ಲ. ಆದರೆ ಇಲ್ಲಿ ಹೇಗೆ ಇಷ್ಟು ಚೆನ್ನಾಗಿ ನಿದ್ರೆ ಮಾಡುತ್ತಾರೆ ಎಂದು ಕೆಲವರು ಆಶ್ಚರ್ಯ ಪಡುವುದೂ ಉಂಟು. ಶಾಂತವಾದ ವಾತಾವರಣ ಇರುವುದರ ಜೊತೆಗೆ ಹೋಟೆಲ್​ಗಳಲ್ಲಿ ಉತ್ತಮ ಗುಣಮಟ್ಟದ ಹಾಸಿಗೆ ಇರುತ್ತದೆ. ಹಾಗಾಗಿ ಹಾಸಿಗೆಯ ಗುಣಮಟ್ಟ ಕೂಡ ನಿಮ್ಮ ನಿದ್ರೆ ಮೇಲೆ ಪರಿಣಾಮ ಬೀರುತ್ತದೆ. ನೀವು ಈಗಾಗಲೇ ಹಾಸಿಗೆಯನ್ನು ಬದಲಾಯಿಸಲು ಯೋಚನೆ ಮಾಡುತ್ತಿದ್ದರೆ ನಿಮ್ಮ ವೈಯಕ್ತಿಕ ಆದ್ಯತೆಗಳ ಮೇಲೆ ನಿಮಗೆ ಆರಾಮದಾಯಕವೆನಿಸುವ ಹಾಸಿಗೆಯನ್ನು ಆಯ್ಕೆ ಮಾಡಿಕೊಳ್ಳಿ.

ನಿದ್ರೆಯ ನೈರ್ಮಲ್ಯ ಮುಖ್ಯ:ಸೆಲ್ ಫೋನ್‌ಗಳು, ಟಿವಿ ಪರದೆಗಳು ಮತ್ತು ಲ್ಯಾಪ್‌ಟಾಪ್‌ಗಳಿಂದ ಬರುವ ನೀಲಿ ಬೆಳಕು ನಿಮ್ಮ ನಿದ್ರೆಗೆ ಭಂಗ ತರುತ್ತವೆ. ಆದ್ದರಿಂದ ನೀವು ಮಲಗುವ ಕನಿಷ್ಠ ಅರ್ಧ ಗಂಟೆ ಮೊದಲು ಅವುಗಳನ್ನು ಆಫ್ ಮಾಡಿಡುವುದು ಉತ್ತಮ. ದೀಪ ಅಥವಾ ಕಿಟಕಿಯಿಂದ ಬರುತ್ತಿರುವ ಪ್ರಕಾಶಮಾನವಾದ ಬೆಳಕು ಸಹ ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರಬಹುದು. ರಾತ್ರಿಯ ನಿದ್ರೆಗಾಗಿ ಬ್ಲ್ಯಾಕೌಟ್ ಪರದೆಗಳು, ಕಣ್ಣಿನ ಮುಖವಾಡಗಳು, ವೈಟ್​ ನಾಯ್ಸ್​ ಮಷಿನ್​ ಮತ್ತು ಇತರ ಪರಿಕರಗಳನ್ನು ಬಳಸುವುದನ್ನು ರೂಢಿಸಿಕೊಳ್ಳಿ.

ನಮ್ಮ ಆರೋಗ್ಯದ ವಿಷಯದಲ್ಲಿ ನಿದ್ರೆ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಸ್ಲೀಪ್ ಅಪ್ನಿಯದಂತಹ ಸಾಮಾನ್ಯ ನಿದ್ರಾಹೀನತೆ ಸಮಸ್ಯೆಗಳು ನಿದ್ರಾಹೀನತೆಗೆ ಕಾರಣವಾಗಬಹುದು. ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಹೊಂದಿರುವ ಜನರು ವಿಶಿಷ್ಟವಾಗಿ ಗೊರಕೆ ಹೊಡೆಯುವ ಶಬ್ದಗಳನ್ನು ಮಾಡುತ್ತಾರೆ. ಅವರ ನಿದ್ರೆಗೆ ಅವರೇ ಅಡ್ಡಿಯಾಗುತ್ತಾರೆ. ನಿದ್ರೆಯ ಸಮಯದಲ್ಲಿ ಈ ಅಡಚಣೆಗಳು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ವೈದ್ಯಕೀಯ ಸಲಹೆಗಳನ್ನೂ ಪಡೆಯಬೇಕಾಗಬಹುದು. ಅಲ್ಲದೆ, ನಿದ್ರಾಹೀನತೆ ಅಧಿಕ ರಕ್ತದೊತ್ತಡ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಖಿನ್ನತೆ, ಆತಂಕ, ಸ್ಥೂಲಕಾಯತೆ, ಮಾನಸಿಕ ಯಾತನೆಗಳಿಗೆ ದಾರಿ ಮಾಡಿಕೊಡುತ್ತದೆ. ಸಿಗರೇಟ್ ಧೂಮಪಾನ, ದೈಹಿಕ ನಿಷ್ಕ್ರಿಯತೆ ಮತ್ತು ಅತಿಯಾದ ಮದ್ಯಪಾನದಂತಹ ಪ್ರತಿಕೂಲ ಆರೋಗ್ಯ ನಡವಳಿಕೆಗಳಿಗೆ ಜೋತು ಬೀಳುವಂತೆಯೂ ಮಾಡಬಹುದು.

ಹಾಗಂತ ನಿದ್ರೆ ಮಾತ್ರೆಗಳು ಅಥವಾ ಇತರ ಔಷಧಗಳು ಇದಕ್ಕೆ ಪರಿಹಾರವಲ್ಲ. ನಿದ್ರೆಗಾಗಿ ನೀವು ಔಷಧ ಸೇವಿಸಲು ಪ್ರಾರಂಭಿಸಿದರೆ ಅದು ವ್ಯಸನವಾಗುವ ಸಾಧ್ಯತೆಗಳು ಹೆಚ್ಚು. ನೀವು ಅತ್ಯುತ್ತಮ ಆರೋಗ್ಯದ ಬಗ್ಗೆ ಆಸಕ್ತಿ ಹೊಂದಿದ್ದರೆ ನಿದ್ರೆಗೆ ಪ್ರಮುಖ ಆದ್ಯತೆ ನೀಡಿ. ಮೇಲಿನ ಸಲಹೆಗಳನ್ನು ಪಾಲಿಸಿ ಎನ್ನುತ್ತಾರೆ ಎಸ್​​ಆರ್​ ಕನ್ಸಲ್ಟೆಂಟ್ ನರವಿಜ್ಞಾನಿ ಡಾ. ಸೋನಿಯಾ ಲಾಲ್ ಗುಪ್ತಾ.

ಇದನ್ನೂ ಓದಿ:ಬಿಯರ್​ ಪ್ರಿಯರೇ.. ನಿಮ್ಮ ನೆಚ್ಚಿನ ಪಾನೀಯ ಸೇವಿಸುವಾಗ ಈ ತಪ್ಪನ್ನು ಮಾಡದಿರಿ

ABOUT THE AUTHOR

...view details