ಕರ್ನಾಟಕ

karnataka

ETV Bharat / sukhibhava

ಕೋವಿಡ್​​ ಸತ್ಯಾಂಶ ನಿರಾಕರಿಸುವ ಪಿತೂರಿ ಸಿದ್ಧಾಂತಗಳನ್ನು ಯುವಕರು ನಂಬುವುದು ಹೆಚ್ಚು : ಅಧ್ಯಯನ - ಈಟಿವಿ ಭಾರತ ಕನ್ನಡ

ಪಿತೂರಿ ಸಿದ್ಧಾಂತಗಳಲ್ಲಿನ ನಂಬಿಕೆಯು ಅತ್ಯಂತ ಹಾನಿಕಾರಕವಾಗಿದೆ. ಆದ್ದರಿಂದ ನಾವು ಅಂತಹ ಸಿದ್ಧಾಂತಗಳನ್ನು ವಿರೋಧಿಸಬೇಕು ಮತ್ತು ಸಾಧ್ಯ ಇರುವಲ್ಲಿ ಸತ್ಯ ಸಂಗತಿಗಳನ್ನು ಒಪ್ಪದವರಿಗೆ ತಿಳಿಹೇಳಬೇಕಿದೆ.

young-people-may-be-more-likely-to-believe-in-conspiracy-theories-that-deny-covid-facts
ಕೋವಿಡ್​​ ಸತ್ಯಾಂಶ ನಿರಾಕರಿಸುವ ಪಿತೂರಿ ಸಿದ್ಧಾಂತ

By

Published : Sep 16, 2022, 8:10 PM IST

Updated : Sep 17, 2022, 8:01 AM IST

ಕೋವಿಡ್ ಮಹಾಮಾರಿ ಜಗತ್ತಿನ ಮೂಲೆ ಮೂಲೆಗಳನ್ನೂ ಕಾಡಿದೆ. ಖಂಡ ಖಂಡಗಳನ್ನು ದಾಟಿ ಆವರಿಸಿದ ಕೊರೊನಾ ವೈರಸ್​ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿದೆ. ದಿನ ಕಳೆದಂತೆ ವೈರಸ್​​ ಅಟ್ಟಹಾಸ ಹತ್ತಿಕ್ಕಲು ಲಸಿಕೆಯೊಂದೇ ಮಾರ್ಗ ಎಂಬ ಸತ್ಯ ಎಲ್ಲ ದೇಶಗಳಿಗೂ ಈಗ ಅರಿವಾಗಿದೆ. ಈ ನಡುವೆ ವೈರಸ್​ ಕುರಿತಂತೆ ಪಿತೂರಿ ಸಿದ್ಧಾಂತಗಳ ಬೆಳವಣಿಗೆಯೂ ಮಾರಕವಾಗಿ ಪರಿಣಮಿಸಿತ್ತು. ಇಂತಹ ಸಿದ್ಧಾಂತಗಳನ್ನು ವಯಸ್ಸಾದವರಿಗಿಂತ ಯುವಕರೇ ಹೆಚ್ಚಾಗಿ ನಂಬುತ್ತಾರೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.

ಪಿತೂರಿ ಸಿದ್ಧಾಂತಗಳ ಬಗ್ಗೆ ಯುವಕರ ನಂಬುವಿಕೆಯ ಬಗ್ಗೆ ಸಂಪೂರ್ಣವಾಗಿ ಅರ್ಥವಾಗುತ್ತಿಲ್ಲ. ಆದರೆ, ಕಾರಣಗಳು ಏನೇ ಇದ್ದರೂ ಕೂಡ ಪಿತೂರಿ ಸಿದ್ಧಾಂತಗಳಲ್ಲಿನ ನಂಬಿಕೆಯು ಬಹಳ ಹಾನಿಕಾರಕವಾಗಿದೆ. ಆದ್ದರಿಂದ ನಾವು ಈ ಬೆಳವಣಿಗೆಯನ್ನು ವಿರೋಧಿಸಬೇಕು ಎಂದು ಅಧ್ಯಯನವು ಹೇಳುತ್ತಿದೆ.

ಸಂಶೋಧನೆ: ಕೋವಿಡ್​​ ಪಿತೂರಿ ಸಿದ್ಧಾಂತಗಳ ಬಗ್ಗೆ ತಿಳಿಯಲು ಪ್ರಪಂಚದಾದ್ಯಂತದ 133 ಅಧ್ಯಯನಗಳ ಫಲಿತಾಂಶಗಳನ್ನು ಪರಿಗಣಿಸಲಾಗಿದೆ. ವಂಚನೆ, ಪಿತೂರಿ ಸಿದ್ಧಾಂತಗಳು ಇದರ ಭಾಗವಾಗಿದ್ದರೂ, ಈ ಸಂಶೋಧನೆಯು ಪಿತೂರಿ ನಂಬಿಕೆಗಳನ್ನು ಹೆಚ್ಚು ವಿಸ್ತೃತವಾಗಿ ವಿಶ್ಲೇಷಿಸಿದೆ. ಅಧ್ಯಯನದಲ್ಲಿನ ಅಂಶಗಳು ಕೋವಿಡ್ ಪಿತೂರಿ ಸಿದ್ಧಾಂತಗಳಲ್ಲಿ ಯುವಕರ ನಂಬಿಕೆ ಬಗ್ಗೆ ಹೇಳಿವೆ.

ಉದಾಹರಣೆಗೆ, ಮತಿವಿಕಲ್ಪದಂತಹ ಕೆಲವು ವ್ಯಕ್ತಿತ್ವದ ಲಕ್ಷಣಗಳು ಮತ್ತು ಕಡಿಮೆ ಮಟ್ಟದ ವಿಶ್ಲೇಷಣಾತ್ಮಕ ಹಾಗೂ ವೈಜ್ಞಾನಿಕ ಚಿಂತನೆಯಂತಹ ಅರಿವಿನ ಲಕ್ಷಣಗಳು ಈ ಪಿತೂರಿ ನಂಬಿಕೆಗಳಿಗೆ ಸಂಬಂಧಿಸಿವೆ. ಹೆಚ್ಚಿನ ಅಧ್ಯಯನಗಳು ವಯಸ್ಸಾದವರಿಗಿಂತ ಕಿರಿಯ ಜನರು ಕೋವಿಡ್​​ ಪಿತೂರಿ ಸಿದ್ಧಾಂತಗಳನ್ನು ನಂಬುವ ಸಾಧ್ಯತೆಯಿದೆ ಎಂಬುದನ್ನು ಹೇಳಿವೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂದರ್ಭಗಳೂ ಕೂಡ ಇದಕ್ಕೆ ಒಂದು ಸಂಭವನೀಯ ಕಾರಣವಿರಬಹುದು.

ನಿರ್ದಿಷ್ಟವಾಗಿ ಹೇಳುವುದಾದರೆ, ಹಿಂದುಳಿದವರು, ಸರ್ಕಾರದ ಮೇಲೆ ಅಪನಂಬಿಕೆ ಹೊಂದಿರುವವರು ಮತ್ತು ತಮ್ಮ ಜೀವನದ ಮೇಲೆ ಕಡಿಮೆ ನಿಯಂತ್ರಣ ಹೊಂದಿರುವ ಜನರು ಪಿತೂರಿ ಸಿದ್ಧಾಂತಗಳನ್ನು ನಂಬುವ ಸಾಧ್ಯತೆಯಿದೆ. ಅದರಲ್ಲೂ ಯುವ ಜನರಿಗೆ ಇದು ಅನ್ವಯಿಸಬಹುದು, ಯಾಕೆಂದರೆ ಅವರು ಕಡಿಮೆ ಆದಾಯದಲ್ಲಿ ವಾಸಿಸುತ್ತಾರೆ ಎಂದು ಅಧ್ಯಯನ ತಿಳಿಸಿದೆ.

ಜಾಗರೂಕರಾಗಿರಿ:ವಂಚನೆಯ ಪಿತೂರಿ ಸಿದ್ಧಾಂತಗಳನ್ನು ನಂಬುವುದರಿಂದ ಸಾಮಾನ್ಯವಾಗಿ ಸೂಕ್ತವಾದ ರಕ್ಷಣಾತ್ಮಕ ನಿಯಮ ಪಾಲಿಸದಿರಲು ಪ್ರೇರೇಪಿಸುತ್ತದೆ (ಉದಾಹರಣೆಗೆ, ಮಾಸ್ಕ್​ ಧರಿಸದೇ ಅಥವಾ ಲಸಿಕೆಯನ್ನು ಪಡೆಯದಿರುವುದು). ಇದು ಪಿತೂರಿ ಸಿದ್ಧಾಂತಿಗಳಿಗೆ ಮತ್ತು ಅವರ ಸುತ್ತಲಿನವರಿಗೆ ಅಪಾಯವನ್ನುಂಟು ಮಾಡುತ್ತದೆ. ವಂಚನೆಯ ಪಿತೂರಿ ಸಿದ್ಧಾಂತಗಳನ್ನು ಸತ್ಯದಿಂದ ವಿವೇಚಿಸುವುದು ನಮ್ಮಲ್ಲಿ ಹೆಚ್ಚಿನವರಿಗೆ ಸುಲಭವಾಗಿದ್ದರೂ, ರೋಗದ ತೀವ್ರತೆ ಅಥವಾ ಪ್ರಮಾಣದ ಬಗ್ಗೆ ವಿರೋಧ ಮನೋಭಾವ ಹೊಂದುವ, ತಪ್ಪು ಮಾಹಿತಿ ವಿರುದ್ಧ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಕಷ್ಟವಾಗುತ್ತದೆ.

ವೈರಸ್​ ತೀವ್ರತೆ ಕಡಿಮೆ ಆಗಿದ್ದರೂ ಅದು ತುಂಬಾ ಹಾನಿಕಾರಕ. ಉದಾಹರಣೆಗೆ, ಅಧಿಕೃತ ವರದಿಗಳ ಪ್ರಕಾರ ಸೋಂಕು ಅಥವಾ ಸಾವಿನ ಪ್ರಮಾಣವು ತೀವ್ರವಾಗಿಲ್ಲ ಎಂದು ಕೋವಿಡ್​ ಸೂಚಿಸುತ್ತವೆ. ಆದರೆ ಕೋವಿಡ್​​​ ಭೀತಿಯು ನಿಜವಾಗಿ ಇರುವುದಕ್ಕಿಂತ ಕಡಿಮೆ ಎಂದು ಹೇಳುವುದರಿಂದ, ಅಂತಹ ಆಲೋಚನೆಗಳನ್ನು ನಂಬುವ ಜನರು ಮುನ್ನೆಚ್ಚರಿಕೆ ಮುಖ್ಯವಲ್ಲ ಅಂದುಕೊಳ್ಳಬಹುದು. ಇದರಿಂದ ವೈರಸ್ ಹರಡುವಿಕೆ ಉಲ್ಬಣಗೊಳ್ಳುತ್ತದೆ. ಹಾಗೆಯೇ ಇತ್ತೀಚಿನ ವೈರಸ್​​ ರೂಪಾಂತರಗಳು ಸೌಮ್ಯವಾಗಿವೆ ಅಥವಾ ಸಾಂಕ್ರಾಮಿಕವು ಮುಗಿದಿದೆ ಎಂದು ಜನರು ಹೇಳುವುದನ್ನು ನಾವು ನೋಡಬಹುದು.

ಕೋವಿಡ್ ಪಿತೂರಿಗಳನ್ನು ಎದುರಿಸುವುದು: ಪಿತೂರಿ ಸಿದ್ಧಾಂತಗಳು ಭಾವನಾತ್ಮಕ ರೀತಿಯಲ್ಲಿ ಬೆದರಿಕೆ ಗ್ರಹಿಸುವ ನಮ್ಮ ವಿಕಸನೀಯ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ. ಇದರ ಎದುರು ವೈಜ್ಞಾನಿಕ ಸತ್ಯಗಳು ಪ್ರಭಾವ ಬೀರುವುದಿಲ್ಲ. ಹೀಗಾಗಿ ವಿಜ್ಞಾನವನ್ನು ತಿಳಿಸಲು ಹಾಗೂ ಅದನ್ನು ಜನರಿಗೆ ತಲುಪಿಸಲು ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆ ಬಹಳ ಪ್ರಮುಖ ಅಸ್ತ್ರವಾಗಿದೆ.

ಇದರ ಜೊತೆಗೆ, ತಪ್ಪು ಮಾಹಿತಿಗೆ ಸಂಬಂಧಿಸಿದ ತಂತ್ರಗಳು ಮತ್ತು ಕುಶಲತೆಯ ಬಗ್ಗೆ ಜನರಿಗೆ ತಿಳಿಸಲು ಸಂವಾದಾತ್ಮಕ ಆನ್‌ಲೈನ್ ಗೇಮ್​​ಗಳೂ ಬಂದಿವೆ. ಆದರೆ ವೈಜ್ಞಾನಿಕ ಸತ್ಯಗಳನ್ನು ತಲುಪಿಸಲು ಮತ್ತು ವಿಮರ್ಶಾತ್ಮಕ ಚಿಂತನೆ ಬಗ್ಗೆ ತಿಳಿಹೇಳಲು ಇದೆಲ್ಲ ಸಾಕಾಗುವುದಿಲ್ಲ.

ಇದನ್ನೂ ಓದಿ:ಮಾನಸಿಕ ಯೋಗಕ್ಷೇಮ ಹೊಂದಲು ಮಹಿಳೆಯರಿಗೆ ಮಿತ ವ್ಯಾಯಾಮದ ಅವಶ್ಯಕತೆ ಇದೆ : ಸಂಶೋಧನೆ

Last Updated : Sep 17, 2022, 8:01 AM IST

ABOUT THE AUTHOR

...view details