ಬೆಂಗಳೂರು: ಸದ್ಯ ದೇಶದಲ್ಲಿ ಉಸಿರಾಟದಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಅನೇಕರಲ್ಲಿ ಕೆಮ್ಮು, ಮೈ-ಕೈ ನೋವು, ಜ್ವರ, ಮತ್ತು ಗಂಟಲು ನೋವು ಸಾಮಾನ್ಯ ಲಕ್ಷಣಗಳು ಕಂಡು ಬರುತ್ತಿದ್ದು, ಇದು ಕೊರೊನಾ, ಇನ್ಫ್ಲುಯೆಂಜಾ ಅಥವಾ ಓಮ್ರಿಕಾನ್ನ ಎಂಬುದು ತಿಳಿಯದಾಗಿದೆ. ಕೊರೋನಾ ಜೊತೆ ಜೊತೆಯಲ್ಲಿ ಅನೇಕ ವೈರಸ್ಗಳ ದಾಳಿಗಳು ಆಗುತ್ತಿದ್ದು, ಅದೆಲ್ಲದರ ಲಕ್ಷಣಗಳು ಒಂದೇ ರೀತಿ ಇರುವ ಹಿನ್ನೆಲೆ ಜನ ಸಾಮಾನ್ಯರಲ್ಲೂ ತಮಗೆ ಏನು ಆಗಿದೆ ಎಂಬುದು ತಿಳಿಯದಂತೆ ಆಗಿದೆ.
ಉಸಿರಾಟದ ಮೇಲೆ ಪ್ರಭಾವ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅನುಸಾರ, ಕೋವಿಡ್ 19 ವೈರಸ್, ಹಂದಿ ಜ್ವರ ಮತ್ತು ಋತುಮಾನದ ವೈರಸ್ಗಳಾದ ವಿಕ್ಟೋರಿಯಾ ಮತ್ತು ಯಮಗಾಟ್ ತಳಿಗಳು ಉಸಿರಾಟದ ಸಮಸ್ಯೆ ಮೇಲೆ ಪ್ರಭಾವ ಬೀರುವ ಸಂಯೋಜನೆ ಹೊಂದಿದೆ. H3N2 ಮತ್ತು H3N1 ಈ ಎರಡು ವಿಧವೂ ಇನ್ಫ್ಲುಯೆಂಜಾ A ಸೋಂಕು ಆಗಿದ್ದು, ಇದನ್ನು ಜ್ವರದಿಂದ ಪತ್ತೆ ಮಾಡಲಾಗುವುದು. ಇದರ ಇನ್ನಿತರ ಸಾಮಾನ್ಯ ಲಕ್ಷಣಗಳಿಂದೆ ದೀರ್ಘಕಾಲದ ಜ್ವರ, ಕೆಮ್ಮು, ನೆಗಡಿ ಮತ್ತು ದೇಹದ ನೋವು ಆಗಿದೆ. ಆದರೆ, ಇದರಲ್ಲಿ ಅನೇಕ ಮಂದಿ ಉಸಿರಾಟದ ಸಮಸ್ಯೆ ಅನುಭವಿಸಿರುವುದು ಕಾಣಬಹುದಾಗಿದೆ.
ಇದರ ಜೊತೆಯಲ್ಲಿ ಸದ್ಯ ಕೋವಿಡ್ ಪ್ರಕರಣಗಳು ಕೂಡ ಹೆಚ್ಚುತ್ತಿದೆ. ನಾಲ್ಕು ತಿಂಗಳ ಬಳಿಕ ಒಂದೇ ದಿನದಲ್ಲಿ ದೇಶದಲ್ಲಿ 700 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸದ್ಯ ದೇಶದಲ್ಲಿ 4,623 ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಗುರುವಾರ ವರದಿ ಪ್ರಕಟಿಸಿದೆ.
ವ್ಯತ್ಯಾಸ ತಿಳಿಯುವುದು ಕಷ್ಟ: ಆರೋಗ್ಯ ತಜ್ಞರು ಹೇಳುವ ಪ್ರಕಾರ ಈ ನಡುವಿನ ವ್ಯತ್ಯಾಸ ತಿಳಿಯುವುದು ಕಷ್ಟವಾಗಿದೆ. ಪ್ರಯೋಗಾಲಯ ಮಾತ್ರ ಇದರ ಪತ್ತೆ ಮಾಡಬಹುದಾಗಿದೆ. ನ್ಯಾಸೊಫರೆಂಜೆಲ್ ಸ್ವಾಬ್ ಮಾದರಿಯ ಕ್ಲಿನಿಕಲ್ ಪರೀಕ್ಷೆ ಮೂಲಕ ಇದರ ಸ್ಪಷ್ಟತೆಯನ್ನು ಪಡೆಯಬಹುದು. ರೋಗಿಯ ಲಕ್ಷಣ ಆಧಾರದ ಇದರ ನಡುವಿನ ಒಂದು ವ್ಯತ್ಯಾಸ ತಿಳಿಸಬೇಕು ಎಂದರೆ, ಕೋವಿಡ್ ಲಕ್ಷಣಗಳು 2-3 ದಿನ ಇರುತ್ತದೆ. ಯಾವುದೇ ಸಮಸ್ಯೆ, ಪ್ರಮುಖ ಚಿಕಿತ್ಸೆ ಇಲ್ಲದೇ ಚೇತರಿಕೆ ಕಾಣಬಹುದಾಗಿದೆ ಎಂದು ಎಚ್ಎನ್ ರಿಲಯನ್ಸ್ ಫೌಂಡೇಷನ್ ಹಾಸ್ಪಿಟಲ್ನ ಸಿನಿಯರ್ ಕನ್ಸ್ಲ್ಟೆಂಟ್ ಡಾ ಸಮರ್ಥ್ ಶಾ ತಿಳಿಸಿದ್ದಾರೆ.