40 ವರ್ಷಗಳ ಬಳಿಕ ಜೀವನದ ಎರಡನೇ ಇನ್ನಿಂಗ್ಸ್ ಆರಂಭವಾಗುತ್ತದೆ. ಐವತ್ತು ವರ್ಷದ ಬಳಿಕ ಬಿಪಿ ಮತ್ತು ಶುಗರ್ ಕೂಡ ನಿಮ್ಮ ದೇಹದ ಮೇಲೆ ದಾಳಿ ಮಾಡುತ್ತದೆ. ಈ ಸಮಯದಲ್ಲಿ ಫಿಟ್ ಆಗಬೇಕು, ವ್ಯಾಯಾಮ ಮಾಡಿ, ಆರೋಗ್ಯ ಕಾಯ್ದುಕೊಳ್ಳಬೇಕು ಎಂದರೆ ದೇಹದಲ್ಲಿ ಆ ಮಟ್ಟದ ಬಲ ಇರುವುದಿಲ್ಲ. ಆದರೆ, 62ವರ್ಷದ ಲಕ್ಷ್ಮಿ ಇದಕ್ಕೆ ಆಪವಾದದಂತೆ ಇದ್ದಾರೆ. ಕಾರಣ ಈ ಇಳಿವಯಸ್ಸಿನಲ್ಲಿ ಯುವ ಜನರನ್ನು ನಾಚಿಸುವಂತೆ ವ್ಯಾಯಾಮ ಕಲಿತು ಅಭ್ಯಾಸ ಮಾಡಿ ಗಮನ ಸೆಳೆದಿದ್ದಾರೆ. ಈ ಮೂಲಕ ತಮ್ಮ ಅನಾರೋಗ್ಯವನ್ನು ಹಿಮ್ಮೆಟ್ಟಿಸಿದ್ದಾರೆ.
38ರ ಬಳಿಕ ಯೋಗ ಕಲಿಕೆ: ಇಂದಿನ ಯುಗದಲ್ಲಿ ದೀರ್ಘಕಾಲದ ಜೀವನ ಕಷ್ಟ ಸಾಧ್ಯ. ಈ ವೇಳೆ, ಮೆಡಿಸಿನ್ ಮತ್ತು ಸೋಂಕು ಇಲ್ಲದಂತೆ ಜೀವನ ನಡೆಸುವುದು ಕಷ್ಟವಾಗಿದೆ ಎಂದು ವೈದ್ಯರು ತಿಳಿಸಿದರು. ವೈದ್ಯರ ಈ ಮಾತಿನಿಂದ ಭಯಗೊಂಡಿದೆ. ಈಕೆಯ ಗಂಡ ಅಪ್ಪಣ್ಣ ಕೂಡ ಯೋಗದ ಅಭ್ಯಾಸ ಮಾಡುವಂತೆ ಪ್ರೋತ್ಸಾಹ ನೀಡುತ್ತಾರೆ. ಸುಮಾರು 25 ವರ್ಷದಿಂದ ಲಕ್ಷ್ಮಿ ಅಭ್ಯಾಸ ಮಾಡುತ್ತಿದ್ದು, ಅವರು ಆರೋಗ್ಯವಾಗಿದ್ದಾರೆ. ಅಷ್ಟೇ ಅಲ್ಲದೆ, ಆರೋಗ್ಯ ಕಾಯ್ದುಕೊಳ್ಳಲು ಜನರಿಗೆ ಯೋಗಾಭ್ಯಾಸ ಮಾಡುವಂತೆ ಮಾಡಿದ್ದಾರೆ. ವಯಸ್ಸಾದ ಬಳಿಕವೂ ಯೋಗದ ಅಭ್ಯಾಸ ಆರಂಭ ಮಾಡಿದ ಲಕ್ಷ್ಮಿ ಅನೇಕ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ 30 ಗೋಲ್ಡ್ ಮೆಡಲ್ ಪಡೆದಿದ್ದಾರೆ.
ಅಷ್ಟಕ್ಕೂ ಯಾರು ಈ ಲಕ್ಷ್ಮಿ ಎಂಬ ಕುತೂಹಲ ಮೂಡುವುದು ಸಹಜ. ಶ್ರೀಕಾಕುಳಂ ಜಿಲ್ಲೆಯ ಅಮುದಲವಲಸದ ಲಗುಡು ಲಕ್ಷ್ಮಿ ಈ ಸಾಧನೆ ಮಾಡಿದ ಮಹಿಳೆ ಆಗಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆ ಲಕ್ಷ್ಮಿ ಹೃದಯಾಘಾತಕ್ಕೆ ಒಳಗಾಗಿದ್ದರು. ಕೀಲು ನೋವಿ, ಮೈಗ್ರೇನ್ ಮತ್ತಿತ್ತರ ಸಮಸ್ಯೆಗಳು ಅವರನ್ನು ಕಾಡಿತ್ತು. ಈ ವೇಳೆ ಅವರ ಈ ಕಾಯಿಲೆಗೆ ಯಾವುದೇ ಪರಿಹಾರವಿರಲಿಲ್ಲ. ನಿತ್ಯ ಔಷಧ, ಇಂಜೆಕ್ಷನ್ ಇಲ್ಲದೇ, ದೀರ್ಘಾವಧಿ ಬದುಕುವುದು ಕಷ್ಟ ಎಂದಿದ್ದರು. ಇದರಿಂದ ಇಡೀ ಕುಟುಂಬ ಕೂಡ ಆಘಾತಕ್ಕೆ ಒಳಗಾಗಿತ್ತು. ಆದರೆ, ಆಕೆ ಪತಿ ಮಾತ್ರ ಆಕೆಗೆ ಪ್ರೋತ್ಸಾಹ ನೀಡಿದ್ದು, ಧೈರ್ಯ ತುಂಬಿ ಬದುಕಿನ ದಾರಿ ತೋರಿಸುವಲ್ಲಿ ನೆರವಾಗಿದ್ದರು .
ಗಂಡನ ಧೈರ್ಯ, ಪ್ರೋತ್ಸಾಹ: ಹೆಂಡತಿ ಜೀವನ ಉಳಿಸಲು ಮುಂದಾದ ನಿವೃತ್ತ ಉದ್ಯೋಗಿ, ಅವರಿಗೆ ಯೋಗಶಾಸ್ತ್ರದ ಕುರಿತು ತಿಳಿಸಿದ್ದಾರೆ. ಈಗಾಗಲೇ ಆತ ಅವುಗಳ ಬಗ್ಗೆ ಅರಿವಿದ್ದು, ಅವುಗಳನ್ನು ಅಭ್ಯಾಸ ಮಾಡುತ್ತಿದ್ದರು. ಅಷ್ಟೇ ಅಲ್ಲ ಹೆಂಡತಿಯನ್ನು ಪಂತಜಂಲಿ ಯೋಗ ತರಬೇತಿ ಕೇಂದ್ರಕ್ಕೆ ಸೇರಿಸಿದ್ದಾರೆ. ಇಲ್ಲಿ ಅಭ್ಯಾಸ ಆರಂಭ ಮಾಡುತ್ತಿದ್ದಂತೆ ಅವರಿಗೆ ಯಾವುದೇ ಔಷಧದ ಅವಶ್ಯಕತೆ ಕೂಡಾ ಬೀಳಲಿಲ್ಲ. ಹಲವು ಸಮಸ್ಯೆಯಿಂದ ಬಳಲುತ್ತಿದ್ದ ಆಕೆ ಉಚಿತವಾಗಿ ಯೋಗ ಶಿಕ್ಷಣ ಪಡೆದರು. ಇದಾದ ಬಳಿಕ ಆಕೆ ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಗೆ ತನ್ನ ಸ್ವ ಇಚ್ಚೆಯಿಂದ ಭಾಗಿಯಾಗಲು ಮುಂದಾದರು.
ಇನ್ನು ಈ ಕುರಿತು ಮಾತನಾಡಿರುವ ಅವರು, ನನ್ನ ಗಂಡ ಆಂಧ್ರ ಪ್ರದೇಶ ಯೋಗ ಅಸೋಸಿಯೇಷನ್ ಅಧ್ಯಕ್ಷರಾಗಿದ್ದರು. 38 ವರ್ಷವಿದ್ದಾಗ ಯೋಗಾಭ್ಯಾಸ ಶುರು ಮಾಡಿದೆ. ಪ್ರತಿಯೊಬ್ಬರು ನನ್ನ ನೋಡಿ ನಗಲು ಶುರು ಮಾಡಿದರು. ಆದರೆ, ನಾನು ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಲಿಲ್ಲ. ಐದು ವರ್ಷದ ಬಳಿಕ ಅಂದರೆ, 43ನೇ ವಯಸ್ಸಿನಲ್ಲಿ ನಾನು ವರಂಗಲ್ನಲ್ಲಿ ರಾಜ್ಯ ಮಟ್ಟದ ಸ್ಪರ್ಧೆ ಮಾಡಿ, ಕಂಚಿನ ಪದಕ ಗೆದ್ದೆ. ನನ್ನ ಆಸಕ್ತಿ ಬೆಳೆದ ಬಳಿಕ ಇದೇ ರೀತಿ ಅಭ್ಯಾಸ ಮಾಡಿದೆ. 2013ರಲ್ಲಿ ಥಾಯ್ಲೆಂಡ್ನ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ನಾಲ್ಕು ವರ್ಗದಲ್ಲಿ ಚಿನ್ನದ ಪದಕ ಗೆದ್ದೆ. ಈ ವೇಳೆ ಥಾಯ್ಲೆಂಡ್ ಯೋಗ ಸೊಸೈಟಿ ನನಗೆ ಮಿಸ್ಟರ್ಸ್ ಯೋಗ ಯುನಿವರ್ಸ್ ಬಿರುದು ನೋಡಿ ಸನ್ಮಾನ ಮಾಡಿತು. 2015ರಲ್ಲಿ ಚೀನಾದಲ್ಲಿ ನಡೆದ ಸ್ಪರ್ಧೆಯಲ್ಲಿ ಮಾತನಾಡಿದ ಅವರು, ಮಹಿಳೆಯರ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಯೋಗ ಅವಶ್ಯಕತೆ ಎಂದರು.
ಉಚಿತ ತರಬೇತಿ: ಗೃಹಿಣಿಯರ ಆರೋಗ್ಯದ ದೃಷ್ಟಿಯಿಂದ ಲಕ್ಷ್ಮಿ ಯೋಗ ತರಬೇತಿ ಆರಂಭಿಸಿದರು. ಬಳಿಕ ಅವರು, ಬಡ ವಿದ್ಯಾರ್ಥಿಗಳಿಗಾಗಿ ಎಲ್ಲೆಡೆ ಯೋಗ ತರಬೇತಿ ಶುರು ಮಾಡಿದರು. ಇದರಲ್ಲಿ ಉತ್ತಮ ಪ್ರದರ್ಶನ ಮಾಡುವವರನ್ನು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಕಳುಹಿಸಲಾಗುತ್ತದೆ. ಆ ವೆಚ್ಚವನ್ನು ಅವರೇ ಭರಿಸುತ್ತಿದ್ದಾರೆ. 2001ರಿಂದ 5000 ಜನರಿಗೆ ತರಬೇತಿ ಮಾಡಲಾಯಿತು. ಇವರ ಅಡಿ ತರಬೇತಿ ಪಡೆದ ಸುಮಾರು ನೂರಕ್ಕೂ ಹೆಚ್ಚು ಮಂದಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾರೆ.
ಇದನ್ನೂ ಓದಿ: 60ನೇ ವಯಸ್ಸಿನಲ್ಲಿ ಮರುಮದುವೆಯಾದ ಖಳನಟ ಆಶಿಶ್ ವಿದ್ಯಾರ್ಥಿ!