ಕರ್ನಾಟಕ

karnataka

ETV Bharat / sukhibhava

ಕ್ಯಾನ್ಸರ್​​​​ ಪೀಡಿತರ ಮನೋಬಲ ಹೆಚ್ಚಿಸುವಲ್ಲಿ ಯೋಗ, ಪ್ರಕೃತಿ ಚಿಕಿತ್ಸೆಯ ಪಾತ್ರ! - ಆಹಾರದ ಬದಲಾವಣೆಗಳು

ಕಿಮೊಥೆರಪಿ ಹಾಗೂ ವಿಕಿರಣ ಚಿಕಿತ್ಸೆ ಪಡೆದುಕೊಳ್ಳುವ ಕ್ಯಾನ್ಸರ್​ ಪೀಡಿತರಿಗೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಅವರ ಮನೋಬಲವನ್ನು ಹೆಚ್ಚಿಸುತ್ತದೆ. ಉತ್ತಮ ಆಹಾರ ಸೇವನೆ ಹಾಗೂ ಯೋಗ ಇವರನ್ನು ಬಲಗೊಳಿಸಲಿದೆ ಎಂದು ಸಂಶೋಧನೆಗಳಿಂದ ಕಂಡುಕೊಳ್ಳಲಾಗಿದೆ.

Yoga and naturopathy for cancer patients
ಕ್ಯಾನ್ಸರ್​​​​ ಪೀಡಿತರ ಮನೋಬಲ ಹೆಚ್ಚಿಸುವಲ್ಲಿ ಯೋಗ, ಪ್ರಕೃತಿ ಚಿಕಿತ್ಸೆಯ ಪಾತ್ರ!

By

Published : Feb 7, 2023, 3:43 PM IST

ನವದೆಹಲಿ:ಭಾರತದಲ್ಲಿ ಪ್ರತಿ ವರ್ಷ ಸುಮಾರು 10 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ ಎಂದು ಅಂದಾಜಿಸಲಾಗಿದೆ. ಒಟ್ಟಾರೆಯಾಗಿ ಕ್ಯಾನ್ಸರ್​​​​ನಿಂದ ಭಾರತದಲ್ಲಿ ಪ್ರತಿ ವರ್ಷ ಸರಿಸುಮಾರು ಐದು ಲಕ್ಷ ಮರಣಗಳು ಸಂಭವಿಸಿತ್ತವೆ ಎಂದು ವರದಿಗಳಿಂದ ತಿಳಿದು ಬಂದಿದೆ. ಕ್ಯಾನ್ಸರ್ ನಿಯಂತ್ರಣಕ್ಕೆ ತರಲು ವೈದಕೀಯ ಲೋಕ ನಾನಾ ಕಸರತ್ತುಗಳನ್ನು ಮಾಡುತ್ತಲೇ ಇದೆ. ಆದರೂ ಕ್ಯಾನ್ಸರ್​ಗೊಂದು ಉತ್ತಮ ಚಿಕಿತ್ಸೆ ಅಥವಾ ರಾಮಬಾಣದಂತಾ ಔಷಧವನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ.

ವಿಕಿರಣ, ಕೀಮೋಥೆರಪಿ ಮತ್ತು ಶಸ್ತ್ರಚಿಕಿತ್ಸೆಯಂತಹ ಚಿಕಿತ್ಸೆಗಳನ್ನು ಬಳಸಲಾಗುತ್ತಿದೆ. ಆದರೆ, ಈ ಚಿಕಿತ್ಸೆಗಳಿಂದ ಕ್ಯಾನ್ಸರ್​ ಅನ್ನು ಮೂಲೋತ್ಪಾಟನೆ ಮಾಡಲು ಸಾಧ್ಯವೇ ಆಗುತ್ತಿಲ್ಲ. ಹೀಗಾಗಿ ಬಹುತೇಕರು ಯೋಗದ ಮೊರೆ ಹೋಗುತ್ತಿದ್ದಾರೆ. ಪ್ರಕೃತಿ ಚಿಕಿತ್ಸೆ ಮತ್ತು ಯೋಗಗಳು ಕ್ಯಾನ್ಸರ್​ ನಿಂದ ಆಗುವ ಅಡ್ಡಪರಿಣಾಮಗಳನ್ನು ನಿವಾರಿಸುವ ಮೂಲಕ ಮತ್ತು ರೋಗಿ ಅನಾರೋಗ್ಯವನ್ನು ಸಹಜ ಸ್ಥಿತಿಗೆ ಮರಳಿ ತರುತ್ತದೆ ಎಂಬುದನ್ನು ಕಂಡುಕೊಳ್ಳಲಾಗಿದೆ.

ಪ್ರಕೃತಿಚಿಕಿತ್ಸೆಯು ಔಷದದ ಒಂದು ಪೂರಕ ಶಾಖೆಯಾಗಿದೆ. ಇದು ಸುರಕ್ಷಿತ ಮತ್ತು ನೈಸರ್ಗಿಕ ಚಿಕಿತ್ಸೆಗಳನ್ನು ನೀಡಲು ನೆರವಾಗುತ್ತದೆ. ಕ್ಯಾನ್ಸರ್​​​​​ನಿಂದ ಚೇತರಿಸಿಕೊಳ್ಳಲು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಪ್ರಕೃತಿಚಿಕಿತ್ಸೆಯ ಕ್ಯಾನ್ಸರ್​​ನಿಂದ ಆಗುವ ಅಡ್ಡ ಪರಿಣಾಮಗಳನ್ನು ತಡೆಗಟ್ಟಲು ನೆರವಾಗುತ್ತದೆ.

ಅಧ್ಯಯನಗಳು ಏನನ್ನು ಹೇಳುತ್ತವೆ?: ಇಂಟರ್ನ್ಯಾಷನಲ್ ಜರ್ನಲ್ ಆಫ್ ಹೆಲ್ತ್ ಸೈನ್ಸಸ್ ಅಂಡ್ ರಿಸರ್ಚ್‌ ಈ ಸಂಬಂದ ಅಧ್ಯಯನವೊಂದನ್ನು ಪ್ರಕಟಿಸಿದೆ. ಈ ಸಂಶೋಧನೆಯ ಪ್ರಕಾರ ಕ್ಯಾನ್ಸರ್ ರೋಗಿಗಳಿಗೆ ಪ್ರಕೃತಿ ಚಿಕಿತ್ಸೆ ಮತ್ತು ಯೋಗವು ಕೀಮೋಥೆರಪಿಗೆ ಹೇಗೆ ಸಹಕಾರಿ ಆಗಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಿ, ಅದರ ಪರಿಣಾಮಗಳನ್ನು ತಿಳಿದುಕೊಳ್ಳಲಾಗಿದೆ.

ಯೋಗ ಮತ್ತು ಪ್ರಕೃತಿ ಚಿಕಿತ್ಸೆಯು ಕ್ಯಾನ್ಸರ್ ರೋಗಿಗಳ ಮಾನಸಿಕ ಯೋಗಕ್ಷೇಮ ಮತ್ತು ಜೀವನದ ಗುಣಮಟ್ಟದಲ್ಲಿ ದೀರ್ಘಕಾಲೀನ ಸುಧಾರಣೆಗಳಿಗೆ ಕಾರಣವಾಗಬಹುದು ಎಂಬ ಅಂಶವನ್ನು ಈ ಸಂಶೋಧನೆಯಿಂದ ಕಂಡುಕೊಳ್ಳಲಾಗಿದೆ. ಪ್ರಕೃತಿ ಚಿಕಿತ್ಸೆ ಮತ್ತು ಯೋಗದಂತಹ ಪರ್ಯಾಯ ಚಿಕಿತ್ಸೆಗಳೊಂದಿಗೆ ಕ್ಯಾನ್ಸರ್ ರೋಗಿಗಳನ್ನು ಸಬಲೀಕರಣಗೊಳಿಸಬಹುದು. ಮತ್ತು ಅವರ ಸ್ವಂತ ಆರೈಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿಸುವುದು ಪ್ರಕೃತಿ ಚಿಕಿತ್ಸೆ ಮತ್ತು ಯೋಗದಿಂದ ಸಾಧ್ಯವಾಗಲಿದೆ. ಅಷ್ಟೇ ಅಲ್ಲ ಜೀವನದ ಗುಣಮಟ್ಟದ ಮೇಲೆ ದೀರ್ಘಕಾಲೀನ ಧನಾತ್ಮಕ ಪರಿಣಾಮಗಳನ್ನು ಯೋಗದಿಂದ ಬೀರಬಹುದು ಎಂಬುದನ್ನು ಸಂಶೋಧಕರು ಅರಿತುಕೊಂಡಿದ್ದಾರೆ.

ಈ ಸಂಬಂಧವೇ ನಡೆಸಿದ ಇನ್ನೊಂದು ಅಧ್ಯಯನ ಏನು ಹೇಳುತ್ತದೆ?:ಕರುಳಿನ ಅಡೆನೊಕಾರ್ಸಿನೋಮ ಶಸ್ತ್ರಚಿಕಿತ್ಸೆಗೆ ಒಳಗಾದ 116 ವಯಸ್ಕ ರೋಗಿಗಳನ್ನು ಒಳಗೊಂಡ ಮತ್ತೊಂದು ಅಧ್ಯಯನದ ಪ್ರಕಾರ, ಕೀಮೋಥೆರಪಿಯ ಜೊತೆಗೆ ಯೋಗ ಮತ್ತು ಪ್ರಕೃತಿಚಿಕಿತ್ಸೆ ಮಾಡುವುದರಿಂದ ಹಿಮೋಗ್ಲೋಬಿನ್ ಮಟ್ಟದಲ್ಲಿ ಸುಧಾರಣೆ ಆಗಲಿದೆ. ಮತ್ತು ಇದರಿಂದ ಒಟ್ಟಾರೆ ಕ್ರಿಯಾತ್ಮಕ ಜೀವನ ಸೂಚ್ಯಂಕದಲ್ಲಿ ಸುಧಾರಣೆ ಕಂಡು ಬರಲಿದೆ ಎಂಬ ಅಂಶ ಪತ್ತೆ ಹಚ್ಚಲಾಗಿದೆ.

ಪ್ರಕೃತಿ ಚಿಕಿತ್ಸೆ ಮತ್ತು ಯೋಗವು ಕ್ಯಾನ್ಸರ್‌ನಲ್ಲಿ ಹೇಗೆ ಸಹಾಯ ಮಾಡುತ್ತದೆ?: ಕ್ಯಾನ್ಸರ್ ರೋಗಿಗಳು ವಿಕಿರಣ ಅಥವಾ ಕಿಮೊಥೆರಪಿಯನ್ನು ಪಡೆಯಲೇಬೇಕಾದ ಅನಿವಾರ್ಯತೆಯಲ್ಲಿದೆ. ಆದರೆ ಕಿಮೊಥೆರಪಿ ಹಲವಾರು ಪ್ರತಿಕೂಲ ಪರಿಣಾಮಗಳನ್ನು ಹೊಂದಿದೆ, ಅವುಗಳೆಂದರೆ:

- ಅತಿಸಾರ ಅಥವಾ ಬಾಯಿ ಹುಣ್ಣು ಆಗುವುದು ಜತತೆ ಕೀಲು ನೋವು ಮತ್ತು ಆಯಾಸ ಆಗುತ್ತದೆ. ವಿಕಿರಣ - ಪ್ರೇರಿತ ಡರ್ಮಟೈಟಿಸ್ ಕಂಡು ಬರುವುದಲ್ಲದೇ, ಕೈ ಅಥವಾ ಕಾಲುಗಳಲ್ಲಿ ಮರಗಟ್ಟುವಿಕೆ ಮತ್ತು ಜುಮ್ಮೆನಿಸುವಿಕೆ ಕಂಡು ಬರುತ್ತದೆ. ಇದು ಕ್ಯಾನ್ಸರ್​ ಪೀಡಿತರನ್ನು ಅತಿಯಾಗಿ ಬಾಧಿಸುತ್ತದೆ.

- ಇನ್ನು ಕಿಮೊಥೆರಪಿಗೆ ಒಳಗಾದವರಲ್ಲಿ ಹೆಚ್ಚಾಗಿ ನಿದ್ರಾಹೀನತೆ ಕಂಡು ಬರುತ್ತದೆ. ಇದು ಅವರನ್ನು ಹೆಚ್ಚಿನ ಸಮಸ್ಯೆಗೆ ದೂಡುತ್ತದೆ. ವಾಕರಿಕೆ ಮತ್ತು ವಾಂತಿ ಆಗಾಗ ಕಂಡು ಬರುತ್ತಲಿರುತ್ತದೆ.

ಕಿಮೊಥೆರಪಿಯಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ:ಹೀಗೆ ವಿಕಿರಣ ಅಥವಾ ಕೀಮೋಥೆರಪಿಯಿಂದ ಉಂಟಾಗುವ ಹಲವಾರು ಅಡ್ಡಪರಿಣಾಮಗಳಲ್ಲಿ ಇವು ಕೆಲವು ಮಾತ್ರವೇ ಆಗಿದೆ. ಇನ್ನು ಕೆಲವು ಸಮಸ್ಯೆಗಳನ್ನು ಕ್ಯಾನ್ಸರ್​ ಪೀಡಿತರು ನಿರಂತರವಾಗಿ ಅನುಭವಿಸುತ್ತಲೇ ಇರುತ್ತಾರೆ. ಇದರ ಪರಿಣಾಮವಾಗಿ ಅನೇಕ ಕ್ಯಾನ್ಸರ್ ರೋಗಿಗಳು ಕೀಮೋಥೆರಪಿ ಅಥವಾ ವಿಕಿರಣವನ್ನು ಪಡೆಯುವುದರಿಂದ ತಪ್ಪಿಸಿಕೊಳ್ಳಲು ಮುಂದಾಗುತ್ತಾರೆ.

ಆದಾಗ್ಯೂ, ಕ್ಯಾನ್ಸರ್​​ನ ಅಂತಿಮ ಘಟ್ಟದಲ್ಲಿ ಕಿಮೊಥೆರಪಿ ಮಾಡಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಕ್ಯಾನ್ಸರ್ ರೋಗಿಗಳಿಗೆ ಹೆಚ್ಚು ಅಗತ್ಯವಿರುವ ಪರಿಹಾರವನ್ನು ನೀಡಲು, ಪ್ರಕೃತಿ ಚಿಕಿತ್ಸೆ ಮತ್ತು ಯೋಗವು ಅತ್ಯಂತ ಉಪಯುಕ್ತವೆಂದು ಕಂಡುಕೊಳ್ಳಲಾಗಿದೆ. ಇದರಿಂದ ರೋಗಿಗಳು ತುಸು ನೆಮ್ಮದಿಯನ್ನು ಪಡೆದುಕೊಳ್ಳುತ್ತಾರೆ. ಹೇಗೆ ಎಂಬುದು ಇಲ್ಲಿದೆ:

ಆಹಾರದ ಬದಲಾವಣೆಗಳು: ಹಲವಾರು ಕಿಮೊಥೆರಪಿ ಔಷಧಗಳು ಬಾಯಿ ಮತ್ತು ಜೀರ್ಣಾಂಗ ವ್ಯವಸ್ಥೆಯ ಒಳಪದರವನ್ನು ಗಾಯಗೊಳ್ಳುವಂತೆ ಮಾಡುತ್ತವೆ. ಅತ್ಯಂತ ಸೂಕ್ಷ್ಮ ರೀತಿಗೆ ಪರಿವರ್ತನೆ ಮಾಡುತ್ತವೆ. ಇದಲ್ಲದೇ ಇದು ಅತಿಸಾರವನ್ನು ಉಂಟುಮಾಡುತ್ತದೆ. ಆಹಾರವನ್ನು ಬದಲಾಯಿಸುವ ಮೂಲಕ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಬಹುದು ಹಾಗೂ ಪುನರ್ನಿರ್ಮಾಣ ಮಾಡಬಹುದು.

ಪಾಲಕ್, ಕೇಲ್, ಕುಂಬಳಕಾಯಿ ಹೋಲುವ ಚೀನೀಕಾಯಿ, ಸೆಲರಿ, ಕ್ಯಾರೆಟ್, ಆಲೂಗಡ್ಡೆ, ಈರುಳ್ಳಿ, ಪಾರ್ಸ್ಲಿ ಮತ್ತು ಟೊಮೆಟೊಗಳನ್ನು ಕ್ಯಾನ್ಸರ್ ರೋಗಿಗಳ ಆಹಾರದಲ್ಲಿ ಸೇರಿಸುವುದು ಉತ್ತಮ. ಇದರಿಂದಾಗಿ ಅವರ ದೇಹಕ್ಕೆ ಅಗತ್ಯವಿರುವ ಎಲೆಕ್ಟ್ರೋಲೈಟ್‌ಗಳನ್ನು ಪಡೆಯಲು ಈ ಆಹಾರ ಸೇವನೆ ಸಹಾಯ ಮಾಡುತ್ತದೆ. ನಿಯಮಿತ ಆಹಾರದಲ್ಲಿ ಕಪ್ಪು ಬೀನ್ಸ್ ಮತ್ತು ಕಡು ಹಸಿರು ಎಲೆಗಳ ತರಕಾರಿಗಳನ್ನು ಸೇರಿಸುವುದು ಆಲಸ್ಯ ಮತ್ತು ಬಳಲಿಕೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕಿಮೊಥೆರಪಿ ಸಮಯದಲ್ಲಿ, ನಿಯಮಿತ ಜೀರ್ಣಕಾರಿ ಕಾರ್ಯವನ್ನು ಸುಧಾರಿಸಲು ನಿತ್ಯ ಶುಂಠಿ ಚಹಾ ಸೇವನೆ ಅತ್ಯುತ್ತಮ ಪರಿಹಾರವಾಗಿದೆ.

ಯೋಗ: ಕ್ಯಾನ್ಸರ್ ಎನ್ನುವುದು ರೋಗಿಯ ದೈಹಿಕ ಸಾಮರ್ಥ್ಯದ ಜೊತೆಗೆ ಅವರ ಮಾನಸಿಕ ಸಾಮರ್ಥ್ಯವನ್ನು ಕುಗ್ಗಿಸುವ ಸ್ಥಿತಿಯಾಗಿದೆ. ಈ ಅನಾರೋಗ್ಯಕರ ಪರಿಸ್ಥಿತಿಯನ್ನ ಅಷ್ಟು ಸುಲಭವಾಗಿ ಗುಣಪಡಿಸಲಾಗದು ಎಂದು ಬಿಂಬಿಸಲಾಗಿರುವುದರಿಂದ ರೋಗಿಗಳು ತಮ್ಮ ಚಿಕಿತ್ಸೆ ಪ್ರಾರಂಭವಾಗುವ ಮೊದಲೇ ಭರವಸೆ ಕಳೆದುಕೊಳ್ಳುತ್ತಾರೆ. ಅವರು ಭೀಕರವಾದ ಆಲೋಚನೆಗಳಿಂದ ಜರ್ಜರಿತವಾಗುತ್ತಾರೆ. ಅದು ಅವರ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಯೋಗವು ಕ್ಯಾನ್ಸರ್​ ಪೀಡಿತರಿಗೆ ರಾಮಬಾಣದಂತೆ ಸಹಾಯ ಮಾಡುತ್ತದೆ. ಯೋಗವನ್ನು ಅಭ್ಯಾಸ ಮಾಡುವುದರಿಂದ ಕ್ಯಾನ್ಸರ್ ರೋಗಿಗಳು ತಮ್ಮ ಆತಂಕ, ಒತ್ತಡ ಮತ್ತು ಉದ್ವೇಗ ಪರಿಹಾರವನ್ನು ಕಂಡುಕೊಳ್ಳುತ್ತಾರೆ ಎಂದು ಸಂಶೋಧನೆಗಳು ದೃಢಪಡಿಸಿವೆ.

ಇದನ್ನು ಓದಿ:ಆಲಸ್ಯದ ಜೀವನಶೈಲಿ ಧೂಮಪಾನದಷ್ಟೇ ಕೆಟ್ಟದ್ದು.. ಹೃದಯದ ಆರೋಗ್ಯಕ್ಕೆ ಬೇಕು ಉತ್ತಮ ಜೀವನಾಭ್ಯಾಸ: ಡಾ ರಾಜೇಶ್ ಟಿ ಆರ್

ಯೋಗ ಹೇಗೆಲ್ಲ ರೋಗಿಗಳನ್ನು ಲವಲವಿಕೆಯಿಂದ ಇರಿಸಲಿದೆ;ಯೋಗವು ರೋಗಿಯ ರಕ್ತಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ದೀರ್ಘಕಾಲದ ಕ್ಯಾನ್ಸರ್ ಚಿಕಿತ್ಸೆಯನ್ನು ತಡೆದುಕೊಳ್ಳಲು ದೇಹ ಮತ್ತು ಮನಸ್ಸನ್ನು ಗಟ್ಟಿಗೊಳಿಸುತ್ತದೆ. ಕ್ಯಾನ್ಸರ್​ನಿಂದ ಬದುಕುಳಿದವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಕಿಮೊಥೆರಪಿಯ ಹಲವಾರು ಪ್ರತಿಕೂಲ ಪರಿಣಾಮಗಳನ್ನು ನಿಭಾಯಿಸಲು ಯೋಗ ಸಹಾಯ ಮಾಡುತ್ತದೆ. ಸಾಮಾನ್ಯ ಜೀವನಕ್ಕೆ ಮರಳಲು ಹಾಗೂ ಸದಾ ಲವಲವಿಕೆಯಿಂದ ಇರಲು ಯೋಗವು ಸಹಕಾರಿ ಆಗಲಿದೆ.

ಅಕ್ಯುಪಂಕ್ಚರ್: ಕ್ಯಾನ್ಸರ್ ರೋಗಿಗಳು ಮತ್ತು ಕ್ಯಾನ್ಸರ್ ಬದುಕುಳಿದವರು ಅಕ್ಯುಪಂಕ್ಚರ್ನ ಪ್ರಬಲವಾದ ಪುನಶ್ಚೈತನ್ಯಕಾರಿ ಮತ್ತು ಚಿಕಿತ್ಸಕ ಪರಿಣಾಮಗಳಿಂದ ಪ್ರಯೋಜನ ಪಡೆಯಬಹುದು. ನೋವು, ಬಿಸಿ ಹೊಳಪು, ಉರಿಯೂತ, ಪ್ರತಿರಕ್ಷಣಾ ವ್ಯವಸ್ಥೆಯ ನಿಯಂತ್ರಣ, ನಿದ್ರಾಹೀನತೆ, ಆತಂಕ, ವಾಂತಿ ಮತ್ತು ವಾಕರಿಕೆ ಎಲ್ಲವನ್ನೂ ಅಕ್ಯುಪಂಕ್ಚರ್‌ನೊಂದಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು. ಕ್ಯಾನ್ಸರ್ ರೋಗಿಯ ಒಟ್ಟಾರೆ ಜೀವನದ ಗುಣಮಟ್ಟವನ್ನು ಸುಧಾರಿಸಲು ಅಕ್ಯುಪಂಕ್ಚರ್ ಪರಿಣಾಮಕಾರಿ ಚಿಕಿತ್ಸೆಯಾಗಿದೆ.

ಯಾವುದೇ ರೀತಿಯ ಕ್ಯಾನ್ಸರ್ ಹೊಂದಿರುವ ರೋಗಿಗಳಿಗೆ, ಅಸ್ತಿತ್ವದಲ್ಲಿರುವ ಕ್ಯಾನ್ಸರ್ ಚಿಕಿತ್ಸೆಗೆ ಹೆಚ್ಚುವರಿಯಾಗಿ ಪ್ರಕೃತಿಚಿಕಿತ್ಸೆಯನ್ನು ಬಳಸಬಹುದು. ಕ್ಯಾನ್ಸರ್ ಬದುಕುಳಿದವರಿಗೂ ಸಹ ನೈಸರ್ಗಿಕ ಚಿಕಿತ್ಸೆಗಳು ಅತ್ಯಂತ ಸಹಾಯಕವಾಗಬಹುದು. ಯಾವುದೇ ಆಹಾರದ ಹೊಂದಾಣಿಕೆಗಳನ್ನು ಮಾಡುವ ಮೊದಲು ಅಥವಾ ಯೋಗಾಭ್ಯಾಸವನ್ನು ಪ್ರಾರಂಭಿಸುವ ಮೊದಲು, ಸಾಮಾನ್ಯವಾಗಿ ತರಬೇತಿ ಪಡೆದ ಪ್ರಕೃತಿ ಚಿಕಿತ್ಸಕರೊಂದಿಗೆ ಮಾತನಾಡುವುದು ಯೋಗ್ಯವಾಗಿದೆ ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ದೇಹ ಪ್ರಕಾರವು ಪ್ರಕೃತಿಚಿಕಿತ್ಸೆಯ ಚಿಕಿತ್ಸೆಗಳಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ

ಇದನ್ನು ಓದಿ:ಭಾರತ ಮಹಿಳೆಯರಿಗೆ ಸುರಕ್ಷಿತ ದೇಶ: ಸಂದೇಶ ಸಾರಲು ಸೈಕಲ್ ಯಾತ್ರೆ ಕೈಗೊಂಡ ಯುವತಿ

ABOUT THE AUTHOR

...view details