ಹೈದರಾಬಾದ್:ಸಸ್ಯಾಹಾರಿ ಜೀವನ ಶೈಲಿಯನ್ನು ಅನುಸರಿಸಲು ಜನರನ್ನು ಪ್ರೋತ್ಸಾಹಿಸಲು ವಿಶ್ವ ಸಸ್ಯಾಹಾರಿ ದಿನವನ್ನು ನವೆಂಬರ್ 1ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದು ಸಸ್ಯಾಹಾರಿ ತಿಂಗಳ ಆರಂಭವನ್ನೂ ಸೂಚಿಸುತ್ತದೆ. ನವೆಂಬರ್ ತಿಂಗಳನ್ನು ಸಸ್ಯಾಹಾರಿ ತಿಂಗಳು ಎಂದು ಆಚರಿಸಲಾಗುತ್ತದೆ.
ಸಸ್ಯಾಹಾರಿ ಆಹಾರವು ಮಾನವನ ಆರೋಗ್ಯಕ್ಕೆ ಅನೇಕ ಪ್ರಯೋಜನವನ್ನು ನೀಡುತ್ತದೆ. ಪ್ರಾಣಿಗಳ ಯೋಗಕ್ಷೇಮವನ್ನು ರಕ್ಷಿಸುತ್ತದೆ ಮತ್ತು ಪರಿಸರವನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಇತಿಹಾಸ ಮತ್ತು ಮಹತ್ವ:
ಡೊನಾಲ್ಡ್ ವ್ಯಾಟ್ಸನ್ ಎಂಬವವರು 1 ನವೆಂಬರ್ 1944ರಂದು 5 ಜನರ ಸಭೆಯನ್ನು ಕರೆದು ಡೈರಿಯೇತರ ಸಸ್ಯಾಹಾರಿ ಆಹಾರ ಪದ್ಧತಿಗಳ ಕುರಿತು ಚರ್ಚಿಸಿದರು.
ಸಸ್ಯಾಹಾರಿಗಳ ಜೀವನಶೈಲಿ ಮತ್ತು ಅವುಗಳ ಪ್ರಾಮುಖ್ಯತೆಯನ್ನು ಕೇಂದ್ರೀಕರಿಸಲು ಮತ್ತು ಉತ್ತೇಜಿಸಲು ಅವರು ಸಸ್ಯಾಹಾರಿ ಜೀವನಶೈಲಿ (vegan lifestyle) ಎಂದು ಕರೆಯಲ್ಪಡುವ ಹೊಸ ಆಂದೋಲನವನ್ನು ಸ್ಥಾಪಿಸಿದರು.
ಬಳಿಕ ಅವರು ತಮ್ಮ ಸಸ್ಯಾಹಾರಿ ಆಹಾರದ ವ್ಯಾಖ್ಯಾನವನ್ನು ಸ್ಪಷ್ಟಪಡಿಸಿದರು. 1979ರಿಂದ ವಿಶ್ವ ಸಸ್ಯಾಹಾರಿ ದಿನವನ್ನು ಆಚರಿಸಲಾಗುತ್ತಿದೆ.
ಸಸ್ಯಾಹಾರಿಯಾಗುವುದರಿಂದ ಆರೋಗ್ಯಕ್ಕೆ ಪ್ರಯೋಜನಗಳು:
- ಸಸ್ಯಾಹಾರಿ ಆಹಾರಗಳು ನಿಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳಿಂದ ಸಮೃದ್ಧವಾಗಿವೆ
- ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಸಸ್ಯಾಹಾರಿ ಆಹಾರವು ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸುತ್ತದೆ.
- ಆರೋಗ್ಯಕರ ದೇಹದ ತೂಕದ ಮೇಲೆ ಹಿಡಿತ ಸಾಧಿಸಲು ಸಹಾಯ ಮಾಡುತ್ತದೆ.
- ಇದು ಟೈಪ್ 2 ಡಯಾಬಿಟಿಸ್ ತಡೆಗಟ್ಟಲು ಸಹಾಯ ಮಾಡುತ್ತದೆ.
- ಸಸ್ಯಾಹಾರ ತಿನ್ನುವುದರಿಂದ ಸಂಧಿವಾತದ ನೋವು ಕಡಿಮೆಯಾಗುತ್ತದೆ.
- ಸಸ್ಯ ಆಧಾರಿತ ಆಹಾರವು ಸಂಪೂರ್ಣ ಪ್ರೋಟೀನನ್ನು ಸುಲಭವಾಗಿ ಒದಗಿಸುತ್ತದೆ.
- ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ.
- ಸರಾಸರಿ 16% ವೇಗವಾಗಿ ಕ್ಯಾಲೊರಿಗಳನ್ನು ಸುಡುತ್ತದೆ.