ಹೈದರಾಬಾದ್: ಸಾಮಾನ್ಯ ಸಿಗರೇಟ್‌ಗಳಿಗೆ ಇ-ಸಿಗರೇಟ್ ಅಥವಾ ವೇಪ್‌ಗಳು ಉತ್ತಮ ಪರ್ಯಾಯ ಎಂದು ಆರಂಭದಲ್ಲಿ ನಂಬಲಾಗಿತ್ತು. ಸಿಗರೇಟ್‌ನಿಂದ ಉಂಟಾಗುವ ಹಾನಿಕಾರಕ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ವೇಪ್ಅನ್ನು ಬಳಸುವ ಅನೇಕ ಜನರಿದ್ದಾರೆ. ಆದರೆ ಅನೇಕ ವೈಜ್ಞಾನಿಕ ಅಧ್ಯಯನಗಳು ವ್ಯಾಪಿಂಗ್ ಸುರಕ್ಷಿತ ಪರ್ಯಾಯವಲ್ಲ ಎಂದು ತಿಳಿಸಿವೆ. ಬದಲಿಗೆ ಇದು ಸಿಗರೇಟಿನಂತೆಯೇ ಆರೋಗ್ಯಕ್ಕೆ ಹಾನಿಕಾರಕವೆಂದು ಹೇಳಿದೆ. ಧೂಮಪಾನಕ್ಕೆ ಪರ್ಯಾವಾಗಿ ಪ್ರಪಂಚದ ಅನೇಕ ಭಾಗಗಳಲ್ಲಿ ವ್ಯಾಪಿಂಗ್ ಜನಪ್ರಿಯವಾಗಿದೆ. ಇದನ್ನು ಹೆಚ್ಚು ಬಳಕೆ ಮಾಡಿದರೆ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ದೇಹದ ಮೇಲೆ ಬೀರುತ್ತದೆ ಎಂದು ನಿಮಗೆ ಗೊತ್ತಿರಲಿ.
ವೇಪ್ನ 5 ಅನಾನುಕೂಲಗಳನ್ನು ತಿಳಿಯೋಣ:
ಶ್ವಾಸಕೋಶಕ್ಕೆ ಹಾನಿ: ವೇಪ್ ಬಳಸಿ, ರಾಸಾಯನಿಕಗಳನ್ನು ಹೊಗೆಯ ಮೂಲಕ ಶ್ವಾಸಕೋಶಕ್ಕೆ ಎಳೆದುಕೊಳ್ಳುವುದು, ಶ್ವಾಸಕೋಶದ ಊತಕ್ಕೆ ಕಾರಣವಾಗುತ್ತದೆ. ನಂತರ ಶ್ವಾಸಕೋಶವನ್ನು ಸಂಪೂರ್ಣ ಹಾನಿಗೊಳಿಸುತ್ತದೆ. ಇದು ಬ್ರಾಂಕೈಟಿಸ್, ಆಸ್ತಮಾ ಮತ್ತು ಇತರ ಮಾರಣಾಂತಿಕ ಉಸಿರಾಟದ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಬಹುದು.
ಕ್ಯಾನ್ಸರ್ ಅಪಾಯ: ನಿಮ್ಮ ಆಹಾರ, ಜೀವನಶೈಲಿ ಮತ್ತು ನಿಮ್ಮ ಸುತ್ತಲಿನ ಮಾಲಿನ್ಯದ ಮಟ್ಟದಿಂದಾಗಿ ವ್ಯಾಪಿಂಗ್ ಹಾನಿಕಾರಕ ಅಪಾಯವನ್ನು ಹೆಚ್ಚಿಸುತ್ತದೆ. ದೀರ್ಘಕಾಲದ ವ್ಯಾಪಿಂಗ್ ದೇಹವು ಜೀವಾಣುಗಳು ಮತ್ತು ಅನೇಕ ಹಾನಿಕಾರಕ ರಾಸಾಯನಿಕಗಳನ್ನು ಸಂಗ್ರಹಿಸಲು ಕಾರಣವಾಗಬಹುದು. ವ್ಯಾಪಿಂಗ್ ಅಭ್ಯಾಸವು ಬಾಯಿ, ನಾಲಿಗೆ ಅಥವಾ ಗಂಟಲಿನ ಕ್ಯಾನ್ಸರ್ನ ಅಪಾಯವನ್ನು ಹೆಚ್ಚಿಸುತ್ತದೆ.
ನಿಕೋಟಿನ್ ವ್ಯಸನ: ಬಹುತೇಕ ಎಲ್ಲಾ ರೀತಿಯ ವೇಪ್ ಖಂಡಿತವಾಗಿಯೂ ನಿಕೋಟಿನ್ ಅನ್ನು ಹೊಂದಿರುತ್ತದೆ. ಇದು ವ್ಯಸನಕಾರಿ ಮತ್ತು ಹೃದಯದ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ನೀವು ಪ್ರತಿದಿನ ವ್ಯಾಪಿಂಗ್ ಮಾಡಿದರೆ ಅದು ನಿಮ್ಮನ್ನು ವ್ಯಸನಿಯನ್ನಾಗಿ ಮಾಡುತ್ತದೆ. ನಿಕೋಟಿನ್ ವ್ಯಸನವು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ಸಾಬೀತಾಗಿದೆ.