ಜಗತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದಂತೆ ಸಾಗರಗಳ ಮಾಲಿನ್ಯವೂ ಅದೇ ವೇಗದಲ್ಲಿ ಹೆಚ್ಚಾಗುತ್ತಿದೆ. ಜೈವಿಕ ಪರಿಸರ ವ್ಯವಸ್ಥೆಯ ಭಾಗವಾಗಿರುವ ಸಾಗರವೂ ಅನೇಕ ಸಂಪನ್ಮೂಲ ಮತ್ತು ಹಾರ ಮತ್ತು ಜೈವಿಕ ಪ್ರಮುಖ ಮೂಲವಾಗಿದೆ. ಈ ಹಿನ್ನೆಲೆ ಅದನ್ನು ರಕ್ಷಣೆ ಮಾಡುವುದು ಪ್ರಮುಖವಾಗಿದೆ. ಜೀವ ಜಗತ್ತಿಗೆ ಸಾಗರಗಳ ಕೊಡುಗೆ ಮತ್ತು ಸಮುದ್ರ ಜೀವಿಗಳ ಸಂರಕ್ಷಣೆಯ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಮತ್ತು ಅವುಗಳ ರಕ್ಷಣೆಗೆ ಕ್ರಮಕ್ಕೆ ಮುಂದಾಗುವ ಉದ್ದೇಶದಿಂದ ಜೂನ್ 8ರಂದು ವಿಶ್ವ ಸಾಗರ ದಿನವನ್ನು ಜಾಗತಿಕವಾಗಿ ಆಚರಿಸಲಾಗುವುದು.
ನಮ್ಮ ಭೂಮಿ ಶೇ 71ರಷ್ಟು ನೀರಿನಿಂದ ಕೂಡಿದೆ. ಇದೇ ಕಾರಣಕ್ಕೆ ಭೂಮಿಯನ್ನು ನೀಲಿ ಗ್ರಹ ಎಂದು ಕರೆಯುವುದು. ವ್ಯಾಪಾರದಲ್ಲಿ ಸಮುದ್ರದ ಪಾತ್ರ ಪ್ರಮುಖವಾಗಿದೆ. ಆದರೆ, ಸಾಗರದ ಮೇಲಿನ ಅತಿಯಾದ ಅವಲಂಬನೆ ಸಾಗರದ ಜೀವಿಗಳ ಕೊಲ್ಲುತ್ತಿದ್ದು, ಇದು ಜೈವಿಕ ಪರಿಸರದ ಜೈವಿಕ ವ್ಯವಸ್ಥೆ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಫ್ಯಾಕ್ಟರಿಗಳಿಂದ ಪ್ಲಾಸ್ಟಿಕ್, ವಿಷಕಾರಕ ಅಂಶಗಳು ಸಮುದ್ರ ಸೇರುತ್ತಿದೆ. ಹಡಗಿನ ಹೊಣೆ, ಸಮುದ್ರಾಳದ ಗಣಿಗಾರಿಗೆ, ಪರಿಸರ ಮಾಲಿನ್ಯ, ರಾಸಾಯನಿಕ, ರಸಗೊಬ್ಬರಗಳು ಸಮುದ್ರಾಳದ ಜೀವ ವೈವಿಧ್ಯತೆ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ.
ಇದನ್ನು ತಡೆಯಬೇಕು ಎಂಬ ಉದ್ದೇಶದಿಂದ 1992 ರಲ್ಲಿ ರಿಯೊ ಡಿ ಜನೈರೊದಲ್ಲಿ ನಡೆದ ಪ್ಲಾನೆಟ್ ಅರ್ಥ್ ಎಂಬ ವೇದಿಕೆಯಲ್ಲಿ ಪ್ರತಿ ವರ್ಷ ವಿಶ್ವ ಸಾಗರ ದಿನ ಆಚರಿಸಲು ನಿರ್ಧರಿಸಲಾಯಿತು. ಕೆನಡಾದ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಓಷನ್ ಡೆವಲಪ್‌ಮೆಂಟ್ ಮತ್ತು ಕೆನಡಾದ ಓಷನ್ ಇನ್‌ಸ್ಟಿಟ್ಯೂಟ್ ಭೂಮಿಯ ಶೃಂಗಸಭೆಯಲ್ಲಿ ಈ ಪ್ರಸ್ತಾವನೆಯನ್ನು ಮುಂದೆ ಇಡಲಾಯಿತು. 2008 ರಲ್ಲಿ, ವಿಶ್ವಸಂಸ್ಥೆ ಜೂನ್ 8 ಅನ್ನು ವಿಶ್ವ ಸಾಗರ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. 2009 ರಲ್ಲಿ ಮೊದಲ ಬಾರಿಗೆ ವಿಶ್ವ ಸಾಗರ ದಿನವನ್ನು 'ನಮ್ಮ ಸಾಗರಗಳು, ನಮ್ಮ ಜವಾಬ್ದಾರಿಗಳು' ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲು ನಿರ್ಧರಿಸಲಾಯಿತು.