ಕರ್ನಾಟಕ

karnataka

ETV Bharat / sukhibhava

ವಿಶ್ವ ತಂಬಾಕು ರಹಿತ ದಿನ 2023: ತಂಬಾಕು ಮುಕ್ತ ಜಗತ್ತು ನಿರ್ಮಾಣಕ್ಕೆ ಕೈ ಜೋಡಿಸಿ.. - ತಂಬಾಕು ಮುಕ್ತ ಜಗತ್ತು ನಿರ್ಮಾಣಕ್ಕೆ ಕೈ ಜೋಡಿಸಿ

ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ 31 ರಂದು ವಿಶ್ವದಾದ್ಯಂತ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ.

World No Tobacco Day 2023: Efforts towards creating Tobacco-Free World
ವಿಶ್ವ ತಂಬಾಕು ರಹಿತ ದಿನ 2023: ತಂಬಾಕು ಮುಕ್ತ ಜಗತ್ತು ನಿರ್ಮಾಣಕ್ಕೆ ಕೈ ಜೋಡಿಸಿ..

By

Published : May 31, 2023, 6:00 AM IST

ಹೈದರಾಬಾದ್: ತಂಬಾಕು ಸೇವನೆಯು ಗಂಭೀರವಾದ ಜಾಗತಿಕ ಆರೋಗ್ಯ ಸಮಸ್ಯೆಯಾಗಿದ್ದು, ಪ್ರತಿ ವರ್ಷ ಜಗತ್ತಿನಾದ್ಯಂತ ಲಕ್ಷಾಂತರ ಜನರ ಸಾವಿಗೆ ಕಾರಣವಾಗುತ್ತಿದೆ. ತಂಬಾಕು ಸೇವನೆಯು ಸಮಾಜದಲ್ಲಿನ ವ್ಯಕ್ತಿಗಳು ಮತ್ತು ಕುಟುಂಬಗಳ ಮೇಲೆ ಆರ್ಥಿಕ ಮತ್ತು ಸಾಮಾಜಿಕ ಹೊರೆಗೂ ಕಾರಣವಾಗಿದೆ. ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ.31 ರಂದು ವಿಶ್ವದಾದ್ಯಂತ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ತಂಬಾಕು ರಹಿತ ದಿನವು ತಂಬಾಕು ಸೇವನೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ಜಾಗತಿಕ ಮಟ್ಟದಲ್ಲಿ ತಂಬಾಕಿನ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಪರಿಣಾಮಕಾರಿ ನೀತಿಗಳು ಮತ್ತು ಕಾನೂನುಗಳನ್ನು ಉತ್ತೇಜಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) 2023 ರ ಜಾಗತಿಕ ಅಭಿಯಾನವು ತಂಬಾಕು ಬೆಳೆಯುವ ರೈತರಿಗೆ ಪರ್ಯಾಯ ಬೆಳೆ ಉತ್ಪಾದನೆಯ ಬಗ್ಗೆ ಜಾಗೃತಿ ಮೂಡಿಸುತ್ತದೆ.

ತಂಬಾಕು ಸೇವನೆಯ ಅಪಾಯಗಳು, ತಂಬಾಕು ಕಂಪನಿಗಳು ನಡೆಸುವ ದುಷ್ಕೃತ್ಯಗಳು, ತಂಬಾಕು ಸಾಂಕ್ರಾಮಿಕದ ವಿರುದ್ಧ WHO ನ ಹೋರಾಟ ಮತ್ತು ಆರೋಗ್ಯಕರ ಜೀವನಕ್ಕಾಗಿ ತಮ್ಮ ಹಕ್ಕನ್ನು ಪಡೆಯಲು ಜನರು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು WHO ಗುರಿಯನ್ನು ಹೊಂದಿದೆ. ಭವಿಷ್ಯದ ಪೀಳಿಗೆಯನ್ನು ರಕ್ಷಿಸಿ. 2023 ರಲ್ಲಿ, ವಿಶ್ವ ತಂಬಾಕು ರಹಿತ ದಿನವನ್ನು "ನಮಗೆ ಆಹಾರ ಬೇಕು, ತಂಬಾಕು ಅಲ್ಲ" ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತದೆ.

ವಿಶ್ವ ತಂಬಾಕು ರಹಿತ ದಿನದ ಇತಿಹಾಸ:ತಂಬಾಕು ಸೇವನೆಯ ವ್ಯಾಪಕ ಸ್ವರೂಪ ಮತ್ತು ಸಾರ್ವಜನಿಕರ ಮೇಲೆ ಅದರ ನಕಾರಾತ್ಮಕ ಪರಿಣಾಮಗಳ ವಿರುದ್ಧ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯು 1987 ರಲ್ಲಿ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲು ಪ್ರಾರಂಭಿಸಿತು. ಈ ದಿನವು ತಂಬಾಕು ಸೇವನೆಯನ್ನು ನಿಯಂತ್ರಣದಲ್ಲಿಟ್ಟು ಕೊಳ್ಳುವವರಿಗೆ ಮತ್ತು ತಂಬಾಕು ಸೇವನೆಯನ್ನು ನಿಲ್ಲಿಸಲು ಪ್ರಯತ್ನಿಸುವವರಿಗೆ ಸಹಾಯ ಮಾಡುತ್ತದೆ. ಜಾಗತಿಕ ಆಹಾರ ಬಿಕ್ಕಟ್ಟಿನ ನಡುವೆ ತಂಬಾಕಿನ ಬೆಳವಣಿಗೆಯನ್ನು ಪ್ರೋತ್ಸಾಹಿಸಿತ್ತಿರುವ ತಂಬಾಕು ಉದ್ಯಮದ ವಿರುದ್ಧ ಡಬ್ಲ್ಯುಎಚ್ಒ ಜಾಗೃತಿ ಮೂಡಿಸುತ್ತಿದೆ.

ವಿಶ್ವ ತಂಬಾಕು ದಿನವು ತಂಬಾಕು ಸೇವನೆಯ ದುಷ್ಪರಿಣಾಮಗಳು ಮತ್ತು ಕ್ಯಾನ್ಸರ್, ಹೃದಯರಕ್ತನಾಳದ ಸಮಸ್ಯೆಗಳು ಮತ್ತು ಉಸಿರಾಟದ ಸಮಸ್ಯೆಗಳಂತಹ ಕಾಯಿಲೆಗಳೊಂದಿಗೆ ಅದರ ಸಂಬಂಧದ ಬಗ್ಗೆ ಜ್ಞಾನವನ್ನು ಹರಡಲು ವೇದಿಕೆಯನ್ನು ಒದಗಿಸುತ್ತದೆ. ಇದು ತಂಬಾಕು ಬಳಕೆಯನ್ನು ಕಡಿಮೆ ಮಾಡಲು ಮತ್ತು ತಂಬಾಕು ಮುಕ್ತ ಜಗತ್ತನ್ನು ಸೃಷ್ಟಿಸಲು ಉತ್ತೇಜಿಸುತ್ತದೆ. ಭಾರತದಲ್ಲಿ 40 ಪ್ರತಿಶತದಷ್ಟು ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸರ್​ಗಳು ತಂಬಾಕು ಮತ್ತು ಧೂಮಪಾನದಿಂದ ಉಂಟಾಗುತ್ತಿದೆ ಎಂದು ಅಧ್ಯಯನಗಳು ತಿಳಿವೆ.

ಧೂಮಪಾನದ ಅಪಾಯಗಳು: ಮುಖ ಸುಕ್ಕುಗಟ್ಟುವುದು, ಹೃದಯರಕ್ತನಾಳದ ಕಾಯಿಲೆಗಳು, ಶ್ವಾಸಕೋಶ, ಮೂತ್ರಪಿಂಡ, ಗಂಟಲು, ಬಾಯಿ, ಹೊಟ್ಟೆ ಮತ್ತು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್. ಆಸ್ಟಿಯೊಪೊರೋಸಿಸ್, ಹಲ್ಲುಗಳು ನಿಶ್ಯಕ್ತಿಯಾಗುವುದು, ವೀರ್ಯಗಳ ಕೊರತೆ, ಕುರುಡುತನ, ಉಬ್ಬಸ, ಕೆಮ್ಮು, ಸೋಂಕಿತ ರಕ್ತ ಮತ್ತು ರೋಗನಿರೋಧಕ ಶಕ್ತಿ ಕುಂದುವುದು.

ಇದನ್ನೂ ಓದಿ:ವಿಶ್ವ ವೇಪ್ ಡೇ 2023: ಇ - ಸಿಗರೆಟ್ ಅಥವಾ ವ್ಯಾಪಿಂಗ್​ನ ದುಷ್ಪರಿಣಾಮಗಳೇನು ಗೊತ್ತಾ?

ABOUT THE AUTHOR

...view details