ಕರ್ನಾಟಕ

karnataka

ETV Bharat / sukhibhava

ವಿಶ್ವ ಹಾಲು ದಿನ 2023: ಈ ದಿನದ ವಿಶೇಷತೆ ಏನು ಗೊತ್ತಾ?

ಜನರಿಗೆ ಹಾಲಿನ ಅಗತ್ಯದ ಬಗ್ಗೆ ಅರಿವು ಮೂಡಿಸಲು ಮತ್ತು ಜಾಗತಿಕವಾಗಿ ಹೈನುಗಾರಿಕೆಯನ್ನು ವ್ಯವಹಾರವನ್ನು ಉತ್ತೇಜಿಸಲು ಪ್ರತಿ ವರ್ಷ ಜೂನ್ 1 ರಂದು ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತದೆ.

World Milk Day 2023: Dairy provides nutritious foods and livelihoods while reducing environmental footprint
ವಿಶ್ವ ಹಾಲು ದಿನ 2023: ಈ ದಿನದ ವಿಶೇಷತೆ ಏನು ಗೊತ್ತಾ?

By

Published : May 31, 2023, 10:59 PM IST

ಹೈದರಾಬಾದ್: ಮಕ್ಕಳಿಂದ ಹಿಡಿದು ವೃದ್ಧರು ವರೆಗೂ ಪ್ರತಿ ದಿನ ಹಾಲನ್ನು ಕುಡಿಯುತ್ತಾರೆ. ಹಾಲು ನಾವು ಸೇವಿಸುವ ಆಹಾರಕ್ಕೆ ಪೌಷ್ಠಿಕಾಂಶದ ಮೌಲ್ಯವನ್ನು ಹೆಚ್ಚಿಸುತ್ತದೆ, ಅದಕ್ಕಾಗಿಯೇ ಇದನ್ನು ಎಲ್ಲಾ ವಯಸ್ಸಿನ ಜನರು ಸೇವಿಸಬೇಕು ಎಂದು ಹೇಳುತ್ತಾರೆ. ಜನರಿಗೆ ಹಾಲಿನ ಅಗತ್ಯದ ಬಗ್ಗೆ ಅರಿವು ಮೂಡಿಸಲು ಮತ್ತು ಜಾಗತಿಕವಾಗಿ ಹೈನುಗಾರಿಕೆ ವ್ಯವಹಾರವನ್ನು ಉತ್ತೇಜಿಸಲು, ಪ್ರತಿ ವರ್ಷ ಜೂನ್. 1 ರಂದು 'ವಿಶ್ವ ಹಾಲು ದಿನ' ಆಚರಿಸಲಾಗುತ್ತದೆ.

ವಿಶ್ವ ಹಾಲು ದಿನವು ವಿಶ್ವ ಆಹಾರವಾಗಿ ಹಾಲಿನ ಮಹತ್ವವನ್ನು ಎತ್ತಿ ತೋರಿಸುತ್ತದೆ. ಜಾಗತಿಕ ಡೈರಿ ಮಾರುಕಟ್ಟೆಯು ಜಾಗತಿಕ ಆರ್ಥಿಕತೆಯ ಪ್ರಮುಖ ಅಂಶವಾಗಿದೆ ಮತ್ತು ಭಾರತೀಯ ಆರ್ಥಿಕತೆಯನ್ನು ವೃದ್ಧಿಸುವಲ್ಲಿ ಹೆಚ್ಚಿನ ಮಹತ್ವವನ್ನು ಹೊಂದಿದೆ, ಏಕೆಂದರೆ ಭಾರತವು ವಿಶ್ವದ ಅತಿ ಹೆಚ್ಚು ಹಾಲು ಉತ್ಪಾದಕ ದೇಶವಾಗಿದೆ.

ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಆಹಾರ ಮತ್ತು ಕೃಷಿ ಸಂಸ್ಥೆಯು 2001ರಲ್ಲಿ ವಿಶ್ವ ಹಾಲು ದಿನದ ಆಚರಣೆಯನ್ನು ಪ್ರಾರಂಭಿಸಿತು ಮತ್ತು 2016ರ ಹೊತ್ತಿಗೆ, ಈ ದಿನವನ್ನು ವಿಶ್ವದಾದ್ಯಂತ ಸುಮಾರು 40 ಈ ದಿನವನ್ನು ಆಚರಿಸಲಾಯಿತು. ಇಂದು ರಾಷ್ಟ್ರೀಯ ಆರ್ಥಿಕತೆಯಲ್ಲಿ ಡೈರಿ ಉದ್ಯಮದ ಪ್ರಾಮುಖ್ಯತೆಯನ್ನು ತಿಳಿಸಲು ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಹಾಲು ಮತ್ತು ಡೈರಿ ಉತ್ಪನ್ನಗಳು ಎಲ್ಲರಿಗೂ ಒದಗಿಸುವ ಪ್ರಯೋಜನಗಳ ಕುರಿತು ಇಂದು ವಿಶ್ವಾದ್ಯಂತ ಉತ್ತೇಜಿಸಲಾಗುತ್ತದೆ. ಇದರೊಂದಿಗೆ, ಈ ಉದ್ಯಮಕ್ಕೆ ಸಂಬಂಧಿಸಿದ ಅನೇಕ ಜನರ ಜೀವನೋಪಾಯವಕ್ಕೆ ಸಂಬಂಧಿಸಿದಂತೆ ಪೂರಕವಾಗಿ ಕೆಲಸ ಮಾಡುತ್ತಿದೆ.

ಪ್ರತಿ ವರ್ಷ, ವಿಶ್ವ ಹಾಲು ದಿನಾಚರಣೆ ಕಾರ್ಯಕ್ರಮವು ಹೈನುಗಾರಿಕೆಗೆ ಸಂಬಂಧಿಸಿದ ವಿಷಯದ ಮೇಲೆ ಕೇಂದ್ರೀಕರಿಸುತ್ತದೆ, ಇದು ಈ ಕ್ಷೇತ್ರದ ಸಮಸ್ಯೆಯಗಳ ಚರ್ಚೆಗಳಿಗೆ ಮತ್ತು ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಪೌಷ್ಠಿಕಾಂಶದ ಆಹಾರ ಮತ್ತು ಜೀವನೋಪಾಯವನ್ನು ಒದಗಿಸುತ್ತಿರುವ ಡೈರಿಗಳು ಪರಿಸರದ ಮೇಲೆ ತನ್ನ ಪರಿಣಾಮವನ್ನು ಹೇಗೆ ಕಡಿಮೆ ಮಾಡಿದೆ ಎಂಬ ಧ್ಯೇಯವಾಕ್ಯದಡಿ ಈ ವರ್ಷದ ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತಿದೆ.

ಪ್ರಾರಂಭದಲ್ಲಿ ಕೆಲವೇ ದೇಶಗಳು ವಿಶ್ವ ಹಾಲು ದಿನವನ್ನು ಆಚರಿಸುತ್ತಿದ್ದವು. ಪ್ರಸ್ತುತ ವಿಶ್ವ ಹಾಲು ದಿನವನ್ನು 100 ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲಾಗುತ್ತದೆ. ಇಂದು ನಮ್ಮ ದೈನಂದಿನ ಆಹಾರದಲ್ಲಿ ಹಾಲಿನ ಪ್ರಾಮುಖ್ಯತೆಯನ್ನು ತಿಳಿಸಲು ಮತ್ತು ಉತ್ತೇಜಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಹಾಲು ಕ್ಯಾಲ್ಸಿಯಂ, ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಬಿ 12, ಕಬ್ಬಿಣ, ಅಯೋಡಿನ್, ಮೆಗ್ನೀಸಿಯಮ್, ಸತು, ರಂಜಕ, ಫೋಲೇಟ್‌ಗಳು, ಪ್ರೋಟೀನ್, ಪೊಟ್ಯಾಸಿಯಮ್, ಆರೋಗ್ಯಕರ ಕೊಬ್ಬು, ಪ್ರೋಟೀನ್‌ಗಳು, ಅಮೈನೋ ಆಮ್ಲಗಳನ್ನು ಒಳಗೊಂಡಿದೆ.

ಹಾಲಿನ ಪ್ರಯೋಜನಗಳನ್ನು ಇಲ್ಲಿವೆ: ಪೌಷ್ಟಿಕಾಂಶ ಹಾಲಿನಲ್ಲಿ ಸಸಾರಜನಕ, ಪ್ರೋಟಿನ್, ಜಿಡ್ಡು, ಸಕ್ಕರೆ ಮತ್ತು ಪಿಷ್ಟ-ಕಾರ್ಬೋಹೈಡ್ರೇಟ್, ಲವಣಗಳು, ಮಿನರಲ್, ಜೀವಸತ್ವಗಳು ಹಾಗೂ ನೀರಿನಾಂಶ ಇರುತ್ತದೆ. ಇದು ದೇಹದ ಆರೋಗ್ಯಕ್ಕೆ ಉತ್ತಮವಾದ ಆಹಾರ. ಹಾಗೂ ದೇಹದಲ್ಲಿನ ರೋಗ ನಿರೋಧಕ ಶಕ್ತಿ ತರಲು ಮುಖ್ಯ ಅಂಶಗಳಾಗಿವೆ ಮತ್ತು ಮೂಳೆಗಳ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ:ನೀವು ಜಂಕ್​ಫುಡ್ ತಿಂತೀರಾ? ಹಾಗಾದರೆ ನಿಮ್ಮ ನಿದ್ದೆಗೆ ಬರುತ್ತೆ ಕುತ್ತು..!

ABOUT THE AUTHOR

...view details