ಹೈದರಾಬಾದ್:ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕುವುದರಿಂದ ಹಿಡಿದು, ದೇಹದಲ್ಲಿನ ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ನಿಯಂತ್ರಿಸುವವರೆಗೆ, ಒಟ್ಟಾರೆ ಆರೋಗ್ಯವನ್ನು ಕಾಪಾಡುವಲ್ಲಿ ಮೂತ್ರಪಿಂಡಗಳು ಪ್ರಮುಖ ಪಾತ್ರವಹಿಸುತ್ತವೆ.
ಆದರೆ, ನಮ್ಮ ಕರುಳಿನ ಆರೋಗ್ಯವನ್ನು ನಾವು ಎಷ್ಟು ನೋಡಿಕೊಳ್ಳುತ್ತೇವೆಯೋ ಹಾಗೆಯೇ ನಮ್ಮ ಮೂತ್ರಪಿಂಡಗಳ ಆರೈಕೆ ಮಾಡುತ್ತೇವೆಯೇ? ಇಂದು ವಿಶ್ವ ಮೂತ್ರಪಿಂಡದ ದಿನದಂದು, ಮೂತ್ರಪಿಂಡಗಳ ಪ್ರಾಮುಖ್ಯತೆ ಮತ್ತು ಅವುಗಳನ್ನು ಹೇಗೆ ನೋಡಿಕೊಳ್ಳಬಹುದು ಎಂಬುದರ ಕುರಿತು ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.
ನಿಮ್ಮ ಮೂತ್ರಪಿಂಡದ ಆರೋಗ್ಯವನ್ನು ಪರೀಕ್ಷಿಸಿ:
ಪ್ರತಿ ವರ್ಷ ಮಾರ್ಚ್ ಎರಡನೇ ಗುರುವಾರ, ನಮ್ಮ ದೇಹದಲ್ಲಿನ ಮೂತ್ರಪಿಂಡಗಳ ಪ್ರಾಮುಖ್ಯತೆ, ಅವುಗಳಿಗೆ ಸಂಬಂಧಿತ ಕಾಯಿಲೆಗಳು ಮತ್ತು ಅದನ್ನು ಹೇಗೆ ನೋಡಿಕೊಳ್ಳಬಹುದು ಎಂಬ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಮೂತ್ರಪಿಂಡ ದಿನವನ್ನು ಆಚರಿಸಲಾಗುತ್ತದೆ.
ಈ ವರ್ಷ, ಮಾರ್ಚ್ 11ರಂದು ಈ ದಿನವನ್ನು ಆಚರಿಸಲಾಗುತ್ತಿದೆ. ಈ ದಿನವನ್ನು ಮೊದಲ ಬಾರಿಗೆ 2006ರಲ್ಲಿ ಇಂಟರನ್ಯಾಷನಲ್ ಸೊಸೈಟಿ ಆಫ್ ನೆಫ್ರಾಲಜಿ (ಐಎಸ್ಎನ್) ಮತ್ತು ಇಂಟರನ್ಯಾಷನಲ್ ಫೆಡರೇಶನ್ ಆಫ್ ಕಿಡ್ನಿ ಫೌಂಡೇಶನ್ಸ್ (ಐಎಫ್‌ಕೆಎಫ್) ವತಿಯಿಂದ ಜಂಟಿಯಾಗಿ ಆಚರಿಸಲಾಯಿತು.
2017ರಲ್ಲಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯ (ಸಿಕೆಡಿ) ಕುರಿತು ಲ್ಯಾನ್ಸೆಟ್ ಪ್ರಕಟಿಸಿದ ಅಧ್ಯಯನದ ಪ್ರಕಾರ, ಜಾಗತಿಕವಾಗಿ, 2017ರಲ್ಲಿ 697.5 ಮಿಲಿಯನ್ ಸಿಕೆಡಿ ಪ್ರಕರಣಗಳು ಕಂಡುಬಂದಿದ್ದು, 1.2 ಮಿಲಿಯನ್ ಜನರು ಅದರಿಂದ ಸಾವನ್ನಪ್ಪಿದ್ದಾರೆ. ಸಿಕೆಡಿ ರೋಗಿಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಜನರು ಚೀನಾ ಮತ್ತು ಭಾರತ ದೇಶಗಳಲ್ಲಿ ವಾಸಿಸುತ್ತಿದ್ದರು.
ದಿನದ ಉದ್ದೇಶಗಳು:
ವಿಶ್ವ ಮೂತ್ರಪಿಂಡ ದಿನದ ಅಧಿಕೃತ ವೆಬ್‌ಸೈಟ್ ಪ್ರಕಾರ, ಈ ದಿನದ ಮುಖ್ಯ ಉದ್ದೇಶಗಳೆಂದರೆ,
- ಮೂತ್ರಪಿಂಡದ ಬಗ್ಗೆ ಜಾಗೃತಿ ಮೂಡಿಸಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡಗಳು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ (ಸಿಕೆಡಿ) ಪ್ರಮುಖ ಅಪಾಯಕಾರಿ ಅಂಶಗಳಾಗಿವೆ ಎಂಬುದನ್ನು ತಿಳಿಸುವುದು.
- ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವ ಎಲ್ಲಾ ರೋಗಿಗಳಿಗೆ ಸಿಕೆಡಿ ಪರೀಕ್ಷೆಗೆ ಒಳಗಾಗಲು ಪ್ರೋತ್ಸಾಹಿಸುವುದು.
- ಸಿಕೆಡಿಯನ್ನು ತಡೆಗಟ್ಟುವ ವಿಧಾನಗಳನ್ನು ಪ್ರೋತ್ಸಾಹಿಸುವುದು.
- ಎಲ್ಲಾ ವೈದ್ಯಕೀಯ ವೃತ್ತಿಪರರಿಗೆ ಸಿಕೆಡಿಯ ಅಪಾಯವನ್ನು ಕಂಡುಹಿಡಿಯುವಲ್ಲಿ ಮತ್ತು ಕಡಿಮೆ ಮಾಡುವಲ್ಲಿ ಅವರ ಪ್ರಮುಖ ಪಾತ್ರದ ಬಗ್ಗೆ ತಿಳಿಸುವುದು.
- ಸಿಕೆಡಿ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಸ್ಥಳೀಯ ಮತ್ತು ರಾಷ್ಟ್ರೀಯ ಆರೋಗ್ಯ ಅಧಿಕಾರಿಗಳ ಪ್ರಮುಖ ಪಾತ್ರವನ್ನು ಒತ್ತಿ ಹೇಳುವುದು.
- ಮೂತ್ರಪಿಂಡ ವೈಫಲ್ಯಕ್ಕೆ ಉತ್ತಮ ಆಯ್ಕೆಯಾಗಿ ಕಸಿ ಮಾಡುವಿಕೆಯನ್ನು ಪ್ರೋತ್ಸಾಹಿಸಿ, ಮತ್ತು ಜೀವ ಉಳಿಸುವ ಉಪಕ್ರಮವಾಗಿ ಅಂಗಾಂಗ ದಾನ ಮಾಡುವ ಕ್ರಿಯೆಯನ್ನು ಪ್ರೋತ್ಸಾಹಿಸುವುದು.
ಮೂತ್ರಪಿಂಡಗಳ ಪ್ರಮುಖ ಕಾರ್ಯಗಳು: