ಕರ್ನಾಟಕ

karnataka

ವಿಶ್ವ ಹಸಿವು ದಿನ 2023: ಜಗತ್ತಿನಾದ್ಯಂತ ಹಸಿವಿನಿಂದ ನರಳುತ್ತಿದ್ದಾರೆ 690 ದಶಲಕ್ಷಕ್ಕೂ ಹೆಚ್ಚು ಜನರು!

By

Published : May 28, 2023, 4:41 AM IST

ವಿಶ್ವ ಹಸಿವು ದಿನದ ಇತಿಹಾಸ, ಮಹತ್ವ ಮತ್ತು ಈ ವರ್ಷದ ಥೀಮ್ ಏನೆಂದು ತಿಳಿಯಿರಿ.

World Hunger Day 2023: Celebrating sustainable solutions to Hunger and Poverty
ವಿಶ್ವ ಹಸಿವು ದಿನ 2023: ಜಗತ್ತಿನಾದ್ಯಂತ ಹಸಿವಿನಿಂದ ನರಳುತ್ತಿದ್ದಾರೆ 690 ದಶಲಕ್ಷಕ್ಕೂ ಹೆಚ್ಚು ಜನರು

ಹೈದರಾಬಾದ್: ಇಂದು ವಿಶ್ವ ಹಸಿವಿನ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಜಗತ್ತಿನಾದ್ಯಂತ 690 ದಶಲಕ್ಷಕ್ಕೂ ಹೆಚ್ಚು ಜನರು ಹಸಿವಿನಿಂದ ನರಳುತ್ತಿದ್ದಾರೆ. ಹೀಗಾಗಿ ಹಸಿವು ಮತ್ತು ಬಡತನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ.28 ರಂದು ವಿಶ್ವ ಹಸಿವು ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ಹಸಿವಿನ ದಿನದ ಇತಿಹಾಸ: ವಿಶ್ವ ಹಸಿವಿನ ದಿನದ ಆಚರಣೆಯು 2011ರಲ್ಲಿ ದಿ ಹಂಗರ್ ಪ್ರಾಜೆಕ್ಟ್‌ನಿಂದ ಮೊದಲ ಬಾರಿಗೆ ಪ್ರಾರಂಭವಾಯಿತು. ಅಂದಿನಿಂದ, ಹಸಿವಿನ ಬಗ್ಗೆ ಜಾಗೃತಿ ಮೂಡಿಸಲು ಮಾತ್ರವಲ್ಲದೆ ಸುಸ್ಥಿರ ಪರಿಹಾರದ ಮೂಲಕ ಹಸಿವಿನ ಸಮಸ್ಯೆಯನ್ನು ಪರಿಹರಿಸಲು ಈ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.

ವಿಶ್ವ ಹಸಿವಿನ ದಿನದ ಉದ್ದೇಶ:ಆಹಾರದ ಕೊರತೆಯಿಂದ ಜಗತ್ತಿನಲ್ಲಿ ಜನರು ಇನ್ನೂ ಸಾಯುತ್ತಿದ್ದಾರೆ. ಆದರೆ ಕೆಲವರು ಆಹಾರವನ್ನು ವ್ಯರ್ಥ ಮಾಡುತ್ತಾರೆ. ಪ್ರಪಂಚದಾದ್ಯಂತ ಹಸಿವಿನಿಂದ ಸಾಯುತ್ತಿರುವ ಜನರಲ್ಲಿ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಎಲ್ಲರಿಗೂ ಸಾಕಷ್ಟು ಆಹಾರ ಸಿಗುವುದಿಲ್ಲ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಸಿವು ಜಾಗತಿಕ ಸಮಸ್ಯೆ ನಿಜ, ಆದರೆ ನಾವು ಅದನ್ನು ನಿರ್ಲಕ್ಷಿಸಬಾರದು. ಇದನ್ನು ತೊಡೆದುಹಾಕಲು ಅನೇಕ ದೇಶಗಳು ಉತ್ತಮ ನೀತಿಗಳನ್ನು ಅಭಿವೃದ್ಧಿಪಡಿಸಿವೆ. ಹಾಗಾಗಿ ಭಾರತವೂ ಈ ದಿಸೆಯಲ್ಲಿ ಹೆಜ್ಜೆ ಇಡಬೇಕಾಗಿದೆ. ಈ ವರ್ಷದ ವಿಶ್ವ ಹಸಿವಿನ ದಿನದ ಥೀಮ್ ಹಸಿವು ಮತ್ತು ಬಡತನವನ್ನು ಕೊನೆಗೊಳಿಸುವ ಸಂಕಲ್ಪವಾಗಿದೆ.

ಹಸಿವು ಸೂಚ್ಯಂಕದಲ್ಲಿ ಭಾರತ ಸ್ಥಾನ: ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 27.2 ಅಂಕಗಳೊಂದಿಗೆ, 107 ದೇಶಗಳ ಪೈಕಿ 94ನೇ ಸ್ಥಾನದಲ್ಲಿದೆ. ಇಂದು ಪ್ರಪಂಚದಾದ್ಯಂತ 690 ದಶಲಕ್ಷಕ್ಕೂ ಹೆಚ್ಚು ಜನರು ಆಹಾರವಿಲ್ಲದೆ ಹಸಿವಿನಿಂದ ನರಳುತ್ತಿದ್ದಾರೆ. ಅಪೌಷ್ಟಿಕತೆಯ ವಿಷಯದಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. 189.2 ಮಿಲಿಯನ್ ಜನರು ಅಥವಾ ದೇಶದ ಜನಸಂಖ್ಯೆಯ ಶೇಕಡಾ 14 ರಷ್ಟು ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಭಾರತದಲ್ಲಿ ಆಹಾರ ವ್ಯರ್ಥ ಎಷ್ಟು?: ಭಾರತದಲ್ಲಿ ಪ್ರತಿ ವರ್ಷ ಒಬ್ಬ ವ್ಯಕ್ತಿ 50 ಕೆಜಿ ಆಹಾರ ವ್ಯರ್ಥ ಮಾಡುತ್ತಾನೆ. ಭಾರತದ 2011ರ ಜನಗಣತಿಯ ಪ್ರಕಾರ, ಜನಸಂಖ್ಯೆಯ 14 ಪ್ರತಿಶತದಷ್ಟು ಅಂದರೆ 169.4 ಮಿಲಿಯನ್ ಜನರಲ್ಲಿ ಅಪೌಷ್ಟಿಕತೆ ಇದೆ. ಇದರ ಹೊರತಾಗಿಯೂ ಭಾರತದಲ್ಲಿ ನಾಲ್ಕು ವರ್ಷಗಳಲ್ಲಿ ಸುಮಾರು 11,520 ಟನ್ ಆಹಾರ ಧಾನ್ಯಗಳು ವ್ಯರ್ಥವಾಗಿವೆ ಎಂದು ವರದಿಯೊಂದು ತಿಳಿಸಿದೆ. ದಕ್ಷಿಣ ಏಷ್ಯಾದ ದೇಶಗಳಲ್ಲಿ ಅಫ್ಘಾನಿಸ್ತಾನವು ಅತಿ ಹೆಚ್ಚು ಆಹಾರ ವ್ಯರ್ಥವನ್ನು ಮಾಡುತ್ತಿದೆ (ವರ್ಷಕ್ಕೆ 82 ಕೆಜಿ). ನೇಪಾಳದಲ್ಲಿ 79 ಕೆಜಿ, ಶ್ರೀಲಂಕಾದಲ್ಲಿ 76 ಕೆಜಿ, ಪಾಕಿಸ್ತಾನದಲ್ಲಿ 74 ಕೆಜಿ ಮತ್ತು ಬಾಂಗ್ಲಾದೇಶದಲ್ಲಿ 65 ಕೆಜಿ ನಂತರದ ಸ್ಥಾನದಲ್ಲಿದೆ. ಆಹಾರ ಪೋಲು ಮಾಡುವ ವಿಷಯದಲ್ಲಿ ಈ ರಾಷ್ಟ್ರಗಳಿಗೆ ಹೊಲಿಸಿಕೊಂಡರೆ ಭಾರತ ಆಹಾರ ವ್ಯರ್ಥ ಮಾಡುವ ವಿಷಯದಲ್ಲಿ ಉತ್ತಮವಾಗಿದೆ.

15ರಿಂದ 49ರ ವಯೋಮಾನದ ಶೇ.51.4ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ವಿಶ್ವದಲ್ಲಿ ಸಾಯುತ್ತಿರುವ ಮಹಿಳೆಯರಲ್ಲಿ ಶೇಕಡಾ 60 ರಷ್ಟು ಮಹಿಳೆಯರು ಹಸಿವಿನಿಂದ ಸಾಯುತ್ತಿದ್ದಾರೆ ಮತ್ತು 130 ಮಿಲಿಯನ್ ಜನರು COVID-19 ಸಾಂಕ್ರಾಮಿಕ ರೋಗದಿಂದ ಹಸಿವಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಏಡ್ಸ್, ಮಲೇರಿಯಾ ಮತ್ತು ಕ್ಷಯರೋಗದಿಂದ ಸಾಯುತ್ತಿರುವವರಿಕ್ಕಿಂತಲೂ ಹಸಿವಿನಿಂದ ಪ್ರಪಂಚದಲ್ಲಿ ಹೆಚ್ಚು ಜನರನ್ನು ಸಾಯುತ್ತಿದ್ದಾರೆ. ಆದ್ದರಿಂದ, ವಿಶ್ವದ ಎಲ್ಲ ದೇಶಗಳು ಆಹಾರ ವ್ಯರ್ಥ ಮಾಡುವುದನ್ನು ತಡೆಯುವ ತುರ್ತು ಅಗತ್ಯವಿದೆ.

ಇದನ್ನೂ ಓದಿ:ಮಿದುಳು ಮತ್ತು ಬೆನ್ನುಹುರಿ ನಡುವೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ ಈ ವೈರ್​ಲೆಸ್​ ಡಿಜಿಟಲ್​ ಬ್ರಿಡ್ಜ್​

ABOUT THE AUTHOR

...view details