ಬೆಂಗಳೂರು: ಪ್ರತಿ ವರ್ಷ ಏಪ್ರಿಲ್ 17ರಂದು ವಿಶ್ವ ಹಿಮೋಫಿಲಿಯಾ ದಿನವನ್ನು ಆಚರಿಸಲಾಗುತ್ತದೆ. ರಕ್ತ ಸಂಬಂಧಿ ಸಮಸ್ಯೆಯಾದ ಹಿಮೋಫಿಲಿಯಾ ಕುರಿತು ಅರಿವು ಮೂಡಿಸುವ ಸಂಬಂಧ ಈ ದಿನವನ್ನು ಆಚರಿಸಲಾಗುವುದು. ವರ್ಲ್ಡ್ ಫೆಡರೇಶನ್ ಆಫ್ ಹಿಮೋಫಿಲಿಯಾ ಸಂಸ್ಥಾಪಕ ಫ್ರಾಂಕ್ ಷ್ನಾಬೆಲ್ ಅವರ ಹುಟ್ಟುಹಬ್ಬದ ಅಂಗವಾಗಿ ಈ ದಿನವನ್ನು ಆಚರಿಸಲಾಗುವುದು. ಅದು ವಿಶ್ವದ ಅತೀ ಅಪರೂಪದ ರೋಗ ಆಗಿದ್ದು, ಈ ರೋಗಕ್ಕೆ ಬಹುತೇಕ ಅನುವಂಶಿಕ ಹಿನ್ನೆಲೆ ಇರುವುದರಿಂದ ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ. ಈ ಬಗ್ಗೆ ಹೆಚ್ಚಿನ ಜಾಗೃತಿ ಅವಶ್ಯಕವಾಗಿದೆ.
ಏನಿದು ಹಿಮೋಫಿಲಿಯಾ: ರಕ್ತ ಸಂಬಂಧಿ ಸಮಸ್ಯೆಯಾಗಿರುವ ಈ ಹಿಮೋಫಿಯಾ ಅನುವಂಶಿಕ ರಕ್ತದ ಕಾಯಿಲೆಯಾಗಿದೆ. ಈ ಸಮಸ್ಯೆ ಹೊಂದಿರುವ ರೋಗಿಯ ದೇಹದಲ್ಲಿ ರಕ್ತ ಪರಿಚಲನೆಯಲ್ಲಿ ತೊಡಗು ಕಾಣಬಹುದು. ದೇಹದಲ್ಲಿನ ಸಾಮಾನ್ಯ ರಕ್ತ ಹೆಪ್ಪುಗಟ್ಟುವಿಕೆ ಪ್ರೋಟಿನ್ಗಳ ಕೊರತೆಯುಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ರಕ್ತ ಹೆಪ್ಪುಗಟ್ಟುವಿಕೆಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಜೊತೆಗೆ ಮೊಣಕೈ, ಮೊಣಕಾಲಿ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿನ ರಕ್ತ ಸ್ರಾವ ಸಂಭವಿಸುತ್ತದೆ. ಜೊತೆಗೆ ರಕ್ತ ಕಣಗಳ ಮೇಲೆ ಇದು ಆಳವಾದ ಪರಿಣಾಮ ಹೊಂದಿರುತ್ತದೆ. ಈ ಸಮಸ್ಯೆಯನ್ನು ಬ್ರಿಟಿಷ್ ರಾಯಲ್ ಡಿಸೀಸ್ ಎಂದು ಕೂಡ ಕರೆಯಲಾಗುವುದು.
ರಕ್ತದಲ್ಲಿನ ಫ್ಯಾಕ್ಟರ್-8ರ ಕೊರತೆಯಿಂದ ಹಿಮೋಫಿಲಿಯಾ ಉಂಟಾಗುತ್ತದೆ. ಇದರಲ್ಲಿ ಎರಡು ವಿಧ ಇದ್ದು. ಹಿಮೋಫಿಲಿಯಾ ಎ ಮತ್ತು ಬಿ ಎಂದು ಗುರುತಿಸಲಾಗಿದೆ. ಹಿಮೋಫಿಲಿಯಾ ಎನಲ್ಲಿ, ಫ್ಯಾಕ್ಟರ್-8 ಮಟ್ಟಗಳು ಕಡಿಮೆ ಇರುತ್ತದೆ. ಇಲ್ಲ. ದೇಹದಲ್ಲಿ ಫ್ಯಾಕ್ಟರ್ 9 ಕೊರತೆಯಿಂದ ಹಿಮೋಫಿಲಿಯಾ ಬಿ ಸಂಭವಿಸುತ್ತದೆ. ಬಹುತೇಕರಲ್ಲಿ ಕಾಡುವುದು ಹಿಮೋಫಿಲಿಯಾ ಎ ಸಮಸ್ಯೆ. ಇದರಲ್ಲಿ ದೇಹದಲ್ಲಿನ ಕ್ರೋಮೋಸೋಮ್ ವ್ಯವಸ್ಥೆ ಕ್ಷೀಣಿಸುತ್ತದೆ. ಈ ರೋಗ ಹೊಂದಿರುವವರಿಗೆ ಗಾಯವಾದಾಗ ಅದರ ರಕ್ತಸ್ರಾವ ನಿಲ್ಲುವುದಿಲ್ಲ. ಅಲ್ಲದೇ ಇವರಲ್ಲಿ ರಕ್ತದ ಪ್ಲೇಟ್ಲೆಟ್ ಸಂಖ್ಯೆ, ಪ್ರೋಥ್ರೋಂಬಿನ್, ಪ್ಲೇಟ್ಲೆಟ್ ಕಾಯಿಲೆ ಕಾಣಬಹುದು.