ಬೆಂಗಳೂರು: ವಿಶ್ವದಾದ್ಯಂತ ಒಮ್ಮೆ ಮಾತ್ರ ಬಳಕೆ ಮಾಡಿದ ಸುಮಾರು 400 ಮಿಲಿಯನ್ ಟನ್ ಪ್ಲಾಸ್ಟಿಕ್ ಅನ್ನು ಅಂದರೆ 2000 ಪ್ಲಾಸ್ಟಿಕ್ ಕಸದ ಟ್ರಕ್ ಲೋಡ್ ಅನ್ನು ನಾವು ನೀರಿಗೆ ಸೇರಿಸುತ್ತಿದ್ದೇವೆ ಎಂದು ವಿಶ್ವ ಸಮಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರ್ರಸ್ ತಿಳಿಸಿದ್ದಾರೆ. ವಿಶ್ವ ಪರಿಸರ ದಿನಚಾರಣೆ ಹಿನ್ನೆಲೆ ಅವರು ಪರಿಸರದ ಮಾಲಿನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರತಿನಿತ್ಯ 2000 ಕಸದ ಟ್ರಕ್ ರಾಶಿಗೆ ಸಮವಾದ ಪ್ಲಾಸ್ಟಿಕ್ ಅನ್ನು ನಾವು ಸಮುದ್ರ, ನದಿ ಮತ್ತು ಕೆರೆಗಳಿಗೆ ಸೇರಿಸುತ್ತಿದ್ದೇವೆ. ನಾವು ತಿನ್ನುವ ಆಹಾರ, ಕುಡಿಯುವ ನೀರಿನಲ್ಲಿ ಮೈಕ್ರೋಪ್ಲಾಸ್ಟಿಕ್ಗಳು ಪತ್ತೆಯಾಗುತ್ತಿವೆ. ಅಷ್ಟೇ ಅಲ್ಲದೇ, ನಾವು ಉಸಿರಾಡುವ ಗಾಳಿಯಲ್ಲೀ ಇದೇ ಇದೆ. ಪ್ಲಾಸ್ಟಿಕ್ ಅನ್ನು ಪಳೆಯುಳಿಕೆಯ ಇಂಧನಗಳಿಂದ ಮಾಡಲಾಗುತ್ತಿದೆ. ನಾವು ಹೆಚ್ಚು ಉತ್ಪಾದನೆ ಮಾಡಿದಂತೆ, ಹೆಚ್ಚು ಪಳೆಯುಳಿಕೆ ಇಂಧನವನ್ನು ನಾವು ಸುಡುತ್ತೇವೆ. ಇದರಿಂದ ಪರಿಸರದ ಬಿಕ್ಕಟ್ಟನ್ನು ನಾವು ಸೃಷ್ಟಿಸುತ್ತಿದ್ದೇವೆ ಎಂದರು.
ಪರಿಹಾರ ಇದೆ: ವಿಶ್ವಸಂಸ್ಥೆ ಮುಖ್ಯಸ್ಥರ ಪ್ರಕಾರ, ಕಳೆದ ವಾರ 130 ಕ್ಕೂ ಹೆಚ್ಚು ರಾಷ್ಟ್ರಗಳನ್ನು ಒಳಗೊಂಡ ಐದು ದಿನಗಳ ಸಭೆಗಳ ನಂತರ ಕಾನೂನುಬದ್ಧ ಒಪ್ಪಂದ ಸೇರಿದಂತೆ ಪರಿಹಾರಗಳು ಕೈಯಲ್ಲಿವೆ ಎಂದು ತಿಳಿಸಲಾಗಿದೆ. ಇದು ಭರವಸೆಯ ಮೊದಲ ಹೆಜ್ಜೆಯಾಗಿದೆ. ಆದರೆ ನಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದು ಗುಟೆರ್ರಸ್ ಹೇಳಿದರು.
ಹೊಸ ವರದಿ ವಿಶ್ವಸಂಸ್ಥೆ ಪರಿಸರ ಕಾರ್ಯಕ್ರಮ (ಯುಎನ್ಇಪಿ), ಪ್ಲಾಸ್ಟಿಕ್‌ನಿಂದ ಮರುಬಳಕೆ, ಮರುಬಳಕೆ ಮತ್ತು ಪಿವೋಟ್ ಮಾಡಲು ಕಾರ್ಯನಿರ್ವಹಿಸಿದರೆ, 2040 ರ ವೇಳೆಗೆ ಪ್ಲಾಸ್ಟಿಕ್ ಮಾಲಿನ್ಯವನ್ನು 80 ಪ್ರತಿಶತದಷ್ಟು ಕಡಿಮೆ ಮಾಡಬಹುದು ಎಂದು ಅಧ್ಯಯನವು ತಿಳಿಸಿದೆ ಎಂದು ಗುಟೆರ್ರಸ್ ತಿಳಿಸಿದ್ದಾರೆ. ನಾವು ಒಟ್ಟಾಗಿ ಕಾರ್ಯ ನಿರ್ವಹಿಸಬೇಕಿದೆ. ಸರ್ಕಾರ, ಕಂಪನಿಗಳು ಮತ್ತು ಗ್ರಾಹಕರು ಸೇರಿದಂತೆ ನಮ್ಮ ಪ್ಲಾಸ್ಟಿಕ್ ಬಳಕೆಯನ್ನು ಬಿಟ್ಟು, ಜಿರೋ ತ್ಯಾಜ್ಯಕ್ಕೆ ನಾವು ಮುಂದಾಬೇಕಿದೆ. ಈ ಮೂಲಕ ನಿಜವಾದ ಆರ್ಥಿಕತೆ ರೂಪಿಸಬೇಕಿದೆ. ಒಟ್ಟಾಗಿ ನಾವು ಶುಚಿಗೊಳಿಸಿ, ಆರೋಗ್ಯಯುತ ಮತ್ತು ಸುಸ್ಥಿರ ಭವಿಷ್ಯವನ್ನು ನಮಗಾಗಿ ರೂಪಿಸಬೇಕಿದೆ.