ವಾಯುಮಾಲಿನ್ಯದಿಂದಾಗಿ ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (ಸಿಒಪಿಡಿ – ಕ್ರೋನಿಕ್ ಅಬ್ಸಟ್ರಕ್ಟಿವ್ ಪಲ್ಯುಮಿನರಿ ಡಿಸೀಸ್) ಹೆಚ್ಚುತ್ತಿದೆ. ಶ್ವಾಸಕೋಶದಲ್ಲಿ ಗಾಳಿಯ ಹರಿವಿಗೆ ಉಂಟಾಗುವ ಸಮಸ್ಯೆಯೇ ಈ ರೋಗ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ 10 ಸೆಕೆಂಡಿಗೆ ಒಬ್ಬ ವ್ಯಕ್ತಿಯಂತೆ ಈ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ. ತಂಬಾಕು ಸೇವನೆ, ಜೈವಿಕ ಇಂಧನದ ಹೊಗೆ, ಇತರ ಹೊಗೆ ಮತ್ತು ವಾಯುಮಾಲಿನ್ಯವೇ ಈ ಕಾಯಿಲೆಗೆ ಪ್ರಮುಖ ಕಾರಣಗಳು.
ಶ್ವಾಸಕೋಶದ ಕಾಯಿಲೆ ಕುರಿತು ಅರಿವು ಮೂಡಿಸುವ ಅಲುವಾಗಿ ಪ್ರತಿವರ್ಷ ವಿಶ್ವ ಸಿಒಪಿಡಿ ದಿನವನ್ನು ಗ್ಲೋಬಲ್ ಇನಿಶಿಯೇಟಿವ್ ಫಾರ್ ಕ್ರೋನಿಕ್ ಅಬ್ಸ್ಟ್ರಕ್ಟಿವ್ ಶ್ವಾಸಕೋಶದ ಕಾಯಿಲೆ (ಗೋಲ್ಡ್) ಜೊತೆಗೆ ಆರೋಗ್ಯ ವೃತ್ತಿಪರರು ಮತ್ತು ವಿಶ್ವದಾದ್ಯಂತ ಸಿಒಪಿಡಿ ರೋಗಿಗಳು ಆಯೋಜಿಸುತ್ತಾರೆ. ಈ ದಿನವನ್ನು ನವೆಂಬರ್ 18 ರಂದು ಆಚರಿಸಲಾಗುವುದು. “ಎಲ್ಲರೂ, ಎಲ್ಲೆಡೆ-ಲಿವಿಂಗ್ ವೆಲ್ ವಿಥ್ ಸಿಒಪಿಡಿ” ಎಂಬುದೇ ಈ ವರ್ಷದ ಥೀಮ್ ಆಗಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್ಒ) ಅಂದಾಜಿನ ಪ್ರಕಾರ 65 ದಶಲಕ್ಷ ಮಧ್ಯಮ ವಯಸ್ಕರು ತೀವ್ರವಾದ ಶ್ವಾಸಕೋಶದ ಕಾಯಿಲೆಯನ್ನು (ಸಿಒಪಿಡಿ) ಹೊಂದಿದ್ದಾರೆ. ಜಾಗತಿಕವಾಗಿ, 2015ರಲ್ಲಿ ಈ ಕಾಯಿಲೆಯಿಂದ 3.17 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ.
ಶೇ.90ಕ್ಕಿಂತ ಹೆಚ್ಚು ಸಿಒಪಿಡಿ ಸಾವುಗಳು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಸಂಭವಿಸುತ್ತವೆ. ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿ ಪ್ರಕಾರ 2016ರಲ್ಲಿ ಜಾಗತಿಕವಾಗಿ 251 ಮಿಲಿಯನ್ ಸಿಒಪಿಡಿ ಪ್ರಕರಣಗಳು ಇವೆ ಎಂದು ಹೇಳಲಾಗಿದೆ.
ಶ್ವಾಸಕೋಶದ ಕಾಯಿಲೆ ಎಂದರೇನು?
ದೀರ್ಘಕಾಲದ ಪ್ರತಿರೋಧದ ಶ್ವಾಸಕೋಶದ ಉಸಿರಾಟದ ತೊಂದರೆಯೇ ಶ್ವಾಸಕೋಶದ ಕಾಯಿಲೆಯಾಗಿದ್ದು, ಇದು ಗಾಳಿಯ ಹರಿವನ್ನು ನಿರಂತರವಾಗಿ ಕಡಿಮೆ ಮಾಡುತ್ತದೆ ಎಂದು ಡಬ್ಲ್ಯುಹೆಚ್ಒ ಹೇಳುತ್ತದೆ. ಇದು ಹೆಚ್ಚು ರೋಗಗಳು ಬರಲು ಕಾರಣವಾಗುತ್ತದೆ ಮತ್ತು ಜೀವಕ್ಕೆ ಅಪಾಯಕಾರಿಯಾಗಿದೆ. "ದೀರ್ಘಕಾಲದ ಬ್ರಾಂಕೈಟಿಸ್" ಮತ್ತು "ಎಂಫಿಸೆಮಾ" ಎಂಬ ಹೆಚ್ಚು ಪರಿಚಿತ ಪದಗಳನ್ನು ಈ ಸ್ಥಿತಿಗೆ ಲೇಬಲ್ಗಳಾಗಿ ಬಳಸಲಾಗುತ್ತದೆ.
ಶ್ವಾಸಕೋಶ ಕಾಯಿಲೆಯ ಸಾಮಾನ್ಯ ಲಕ್ಷಣಗಳು:
- ಉಸಿರಾಟದ ತೊಂದರೆ
- ದೀರ್ಘಕಾಲದ ಕೆಮ್ಮು
- ಉಬ್ಬಸ ಬರುವುದು
- ಕಫ ಅಥವಾ ಹೆಚ್ಚೆಚ್ಚು ಕಫ ಉತ್ಪಾದನೆ ಆಗುವುದು
- ಆಗಾಗ್ಗೆ ಉಸಿರಾಡುವಾಗ ನೋವಾಗುವುದು
- ಆಯಾಸ
ಸಿಒಪಿಡಿಯ ಪರಿಣಾಮಗಳು :
- ಜಾಸ್ತಿ ನಡೆಯಲು ಅಥವಾ ಹೆಚ್ಚು ಮೆಟ್ಟಿಲುಗಳನ್ನು ಹತ್ತಲು ಆಗುವುದಿಲ್ಲ.
- ಹೆಚ್ಚು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.
- ಪೋರ್ಟಬಲ್ ಆಮ್ಲಜನಕ ಟ್ಯಾಂಕ್ಗಳಂತಹ ವಿಶೇಷ ಉಪಕರಣಗಳು ಬೇಕಾಗುತ್ತವೆ.
- ಊಟ ಮಾಡುವುದು, ಪೂಜಾ ಸ್ಥಳಗಳಿಗೆ ಹೋಗುವುದು, ಗುಂಪು ಕಾರ್ಯಕ್ರಮಗಳಿಗೆ ಹೋಗುವುದು ಅಥವಾ ಸ್ನೇಹಿತರು, ನೆರೆಹೊರೆಯವರೊಂದಿಗೆ ಒಗ್ಗೂಡಿಸುವುದು ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಡಿ.
- ಗೊಂದಲ ಹೆಚ್ಚಾಗುವುದು ಅಥವಾ ಮೆಮೊರಿ ಲಾಸ್
- ತುರ್ತು ಕೊಠಡಿಗಳನ್ನು ಮತ್ತು ರಾತ್ರಿಯ ಹೊತ್ತು ಆಸ್ಪತ್ರೆಯಲ್ಲಿ ಇರುವುದು ಒಳಿತು.
- ಸಂಧಿವಾತ, ರಕ್ತ ಕಟ್ಟಿ ಹೃದಯ ಸ್ಥಂಭನ, ಮಧುಮೇಹ, ಪರಿಧಮನಿಯ ಹೃದಯ ಕಾಯಿಲೆ, ಪಾರ್ಶ್ವವಾಯು ಅಥವಾ ಆಸ್ತಮಾದಂತಹ ಇತರ ದೀರ್ಘಕಾಲದ ಕಾಯಿಲೆಗಳನ್ನು ಹೊಂದಬಹುದು.
- ಖಿನ್ನತೆ ಅಥವಾ ಇತರ ಮಾನಸಿಕ ಅಥವಾ ಭಾವನಾತ್ಮಕ ಸ್ಥಿತಿಗಳನ್ನು ಹೊಂದಬಹುದು.