ಹೈದರಾಬಾದ್:ಪ್ರತಿ ವರ್ಷ ನವೆಂಬರ್ 18 ರಿಂದ 24 ರವರೆಗೆ ವಿಶ್ವ ಆಂಟಿಮೈಕ್ರೊಬಿಯಲ್ ಜಾಗೃತಿ ಸಪ್ತಾಹವನ್ನು ಆಚರಿಸಲಾಗುತ್ತದೆ. ಇದು ಆಂಟಿಮೈಕ್ರೊಬಿಯಲ್ ಪ್ರತಿರೋಧಗಳಿಂದ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಪ್ರಪಂಚದಾದ್ಯಂತದ ಸಾಮಾನ್ಯ ಜನರಿಗೆ ತಿಳಿಸಲು ವಿವಿಧ ಚರ್ಚೆಗಳು ಮತ್ತು ಅಭಿಯಾನಗಳನ್ನು ಆಯೋಜಿಸಲಾಗುತ್ತದೆ.
ಕೆಲವು ರೀತಿಯ ಬ್ಯಾಕ್ಟೀರಿಯಾದ ಸೋಂಕುಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಆಂಟಿಬಯೋಟಿಕ್ಸ್ ಶಿಫಾರಸು ಮಾಡುತ್ತಾರೆ. ಇಂತಹ ಆ್ಯಂಟಿಬಯೋಟಿಕ್ಸ್ ಅನ್ನು ವೈದ್ಯರ ಸಲಹೆ ಮೇಲೆ ಬಳಸಬೇಕು ಎಂಬುದು ಎಲ್ಲರಿಗೂ ತಿಳಿಸಿದೆ. ಅನಗತ್ಯ ಮತ್ತಿ ಪದೇ ಪದೆ ಇಂತಹ ಆ್ಯಂಟಿಬಯೋಟಿಕ್ಸ್ ಬಳಕೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಲ್ಲದೇ, ಪದೇ ಪದೆ ಈ ಔಷಧ ಬಳಕೆಯೂ ಪ್ರತಿರೋಧವನ್ನು ಹೆಚ್ಚಿಸುತ್ತದೆ. ಗಂಭೀರ ಕಾಯಿಲೆಗಳ ಸಮಯದಲ್ಲಿ ಇದು ಹೆಚ್ಚು ಪರಿಣಾಮಕ್ಕೆ ಕಾರಣವಾಗುತ್ತದೆ.
ಆಂಟಿಬಯೋಟಿಕ್ಸ್ ಬಳಕೆಯನ್ನು ಸರ್ಮಕವಾಗಿ ಬಳಕೆ ಮಾಡಿವ ಕುರಿತು ವಿಶ್ವ ಆಂಟಿಮೈಕ್ರೊಬಿಯಲ್ ಜಾಗೃತಿ ಸಪ್ತಾಹವನ್ನು ನ. 18ರಿಂದ 24ರವರೆಗೆ ಆಚರಿಸಲಾಗುವುದು. ಸಾಮಾನ್ಯ ಜನರು ಮತ್ತು ಕಾರ್ಯಕರ್ತರಿಗೆ ಸೋಂಕು ನಿವಾರಕ ನಿಯಂತ್ರಣ ಕುರಿತು ಅರಿವು ಮೂಡಿಸಲಾಗುವುದು. ಆ್ಯಂಟಿಬಯೋಟಿಕ್ಸ್ ಸರಿಯಾದ ಬಳಕೆ ಮತ್ತು ಜಾರಿಗೆ ತರುವ ಸಂಬಂಧ ವೇದಿಕೆ ಸೃಷ್ಟಿಸಲಾಗಿದೆ.
ಈ ಬಾರಿ 2022ರಲ್ಲಿ ಆಂಟಿ ಮೈಕ್ರೊಬಿಯಲ್ ಜಾತೃತಿ ಸಪ್ತಾಹದ ಥೀಮ್ ಆಂಟಿಮೈಕ್ರೊಬಿಯಲ್ ಪ್ರತಿರೋಧವನ್ನು ಒಟ್ಟಿಗೆ ತಡೆಗಟ್ಟುವುದು. ಜೊತೆಗೆ ಡಬ್ಲ್ಯೂಎಒನ ಬ್ಲೂ ಅಭಿಯಾನವಾಗಿದೆ. ಆಂಟಿಬಯೋಟಿಕ್ ಅನೇಕ ಜನರ ಜೀವ ರಕ್ಷಣೆ ಮಾಡಿದ್ದು, ಅವರ ಆರೋಗ್ಯ ಸುಧಾರಣೆ ಮಾಡಿದೆ. ಈ ಔಷಧಗಳಿಂದ ಜನರಲ್ಲಿ ಪ್ರತಿರೋಧವು ಹೆಚ್ಚುತ್ತಿದೆ.