ಹೈದರಾಬಾದ್:ವಿಶ್ವ ಏಡ್ಸ್ ದಿನವನ್ನು ಪ್ರತಿ ವರ್ಷ ಡಿಸೆಂಬರ್ 1ರಂದು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಬಳಸಲಾಗುವ ಕೆಂಪು ರಿಬ್ಬನ್ ಚಿಹ್ನೆಯು ಏಡ್ಸ್ ಕುರಿತ ಜಾಗೃತಿಯನ್ನು ಸಂಕೇತಿಸುತ್ತದೆ. ಜಗತ್ತಿನಾದ್ಯಂತ ಎಚ್‌ಐವಿ ಪೀಡಿತರ ಬೆಂಬಲಕ್ಕೆ ನಿಲ್ಲಲು ಈ ದಿನವನ್ನು ಸಮರ್ಪಿಸಲಾಗಿದೆ.
ಹೆಚ್ಐವಿ ಎಂದರೇನು?: ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ ಅಥವಾ ಹೆಚ್ಐವಿ ಸೋಂಕು. ಇದು ದೇಹದಲ್ಲಿನ ಪ್ರತಿರಕ್ಷಣಾ-ಪೋಷಕ ಕೋಶಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತದೆ. ನಂತರದ ಸೋಂಕು ಹೆಚ್ಚಾಗಿ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಸೋಂಕಿತ ವ್ಯಕ್ತಿಯೊಂದಿಗೆ ಸಂಭೋಗ, ಚುಚ್ಚುಮದ್ದಿನ ಉಪಕರಣಗಳನ್ನು ಹಂಚಿಕೊಳ್ಳುವುದು ಅಥವಾ ಅಸುರಕ್ಷಿತ ಲೈಂಗಿಕತೆಯ ಮೂಲಕ ಹೆಚ್ಐವಿ ಹರಡಬಹುದು.
ಡಬ್ಯ್ಲೂಹೆಚ್ಒ ಪ್ರಕಾರ, 'ಸಮುದಾಯಗಳು ಮುನ್ನಡೆಸಲಿ' ಎನ್ನುವುದು ಈ ವರ್ಷದ ವಿಶ್ವ ಏಡ್ಸ್ ದಿನದ ಧ್ಯೇಯವಾಕ್ಯ. ಹೆಚ್ಐವಿ ರೋಗವನ್ನು ನಿರ್ಧರಿಸುವಲ್ಲಿ ಸಮುದಾಯಗಳು ಹೊಂದಿರುವ ಗಮನಾರ್ಹ ಪ್ರಭಾವ ಗುರುತಿಸಲು ಈ ಥೀಮ್ ಆಯ್ಕೆ ಮಾಡಲಾಗಿದೆ.
ವಿಶ್ವ ಏಡ್ಸ್ ದಿನದ ಇತಿಹಾಸ: 1988ರಲ್ಲಿ ವಿಶ್ವ ಏಡ್ಸ್ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆಯ (WHO) ಇಬ್ಬರು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಜಾಗತಿಕ ಆರೋಗ್ಯಕ್ಕಾಗಿ ಅಂತರರಾಷ್ಟ್ರೀಯ ದಿನವಾಗಿ ಆಚರಿಸಲು ಪ್ರಾರಂಭಿಸಲಾಯಿತು. ವಿಶ್ವ ಏಡ್ಸ್ ದಿನದಂದು, ಹೆಚ್ಐವಿ ವಿರುದ್ಧ ಹೋರಾಡಲು, ಸೋಂಕುಪೀಡಿತರನ್ನು ಬೆಂಬಲಿಸಲು ಮತ್ತು ರೋಗದಿಂದ ತಮ್ಮ ಜೀವನವನ್ನು ಕಳೆದುಕೊಂಡವರನ್ನು ನೆನಪಿಟ್ಟುಕೊಳ್ಳಲು ಪ್ರಪಂಚದಾದ್ಯಂತ ಜನರು ಒಟ್ಟಾಗಿ ಸೇರುತ್ತಾರೆ. ನವೀನ ಮತ್ತು ಯಶಸ್ವಿ ಹೆಚ್‌ಐವಿಯ ಕಾರ್ಯಕ್ರಮಗಳನ್ನು ಉತ್ತೇಜಿಸಲು ಈ ದಿನವನ್ನು ನಿಗದಿಪಡಿಸಲಾಗಿದೆ. ವಾರ್ಷಿಕವಾಗಿ, ಯುನೈಟೆಡ್ ನೇಷನ್ಸ್, ಫೆಡರಲ್ ಏಜೆನ್ಸಿಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ನಿರ್ದಿಷ್ಟ ಹೆಚ್ಐವಿ ಸಂಬಂಧಿತ ವಿಷಯಗಳನ್ನು ಉತ್ತೇಜಿಸಲು ಸಹಕರಿಸುತ್ತವೆ.
ಮಧ್ಯ ಆಫ್ರಿಕಾದಲ್ಲಿ ಚಿಂಪಾಂಜಿಯಲ್ಲಿ ಹೆಚ್ಐವಿ ಸೋಂಕು ಮೊದಲು ಕಂಡುಬಂದಿತ್ತು. 1800ರ ದಶಕದ ಉತ್ತರಾರ್ಧದಲ್ಲಿ ಹೆಚ್ಐವಿ ಸೋಂಕು ಚಿಂಪಾಂಜಿಗಳಿಂದ ಮನುಷ್ಯರನ್ನು ಹರಡಿದೆ ಎಂದು ಸಂಶೋಧನೆಯಿಂದ ತಿಳಿದುಬರುತ್ತದೆ. ಸಿಮಿಯನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ ಎಂದು ಕರೆಯಲ್ಪಡುವ ವೈರಸ್ ಮೊದಲು ಚಿಂಪಾಂಜಿಗಳಲ್ಲಿ ಕಾಣಿಸಿತು. ಜನರು ಆಹಾರಕ್ಕಾಗಿ ಈ ಚಿಂಪಾಂಜಿಗಳನ್ನು ಕೊಂದಾಗ, ರೋಗ ಹೆಚ್ಚಾಗಿ ಮನುಷ್ಯರಿಗೆ ಹರಡಿತು. ಹೆಚ್ಐವಿ ಕ್ರಮೇಣ ಆಫ್ರಿಕಾದಾದ್ಯಂತ ಹಲವು ವರ್ಷಗಳವರೆಗೆ ವಿಸ್ತರಿಸಿತು. ನಂತರ ಪ್ರಪಂಚದ ಇತರ ಭಾಗಗಳಿಗೂ ವ್ಯಾಪಿಸಿತು. 1970ರ ದಶಕದ ಮಧ್ಯದಿಂದ ಅಂತ್ಯದವರೆಗೆ ಅಮೆರಿಕದಲ್ಲಿ ವೈರಸ್ ಕಂಡುಬಂದಿದೆ.
ರೋಗ ಲಕ್ಷಣಗಳು:ಪ್ರತಿರಕ್ಷಣಾ ವ್ಯವಸ್ಥೆಯ ಕುಸಿತ ಮತ್ತು ಸಿಡಿ4+ಟಿ ಜೀವಕೋಶಗಳಿಗೆ ಹಾನಿ ಉಂಟು ಮಾಡುತ್ತದೆ. ಏಡ್ಸ್ ದೇಹವನ್ನು ಪ್ರವೇಶಿಸಿದ ತಕ್ಷಣ ಈ ಜೀವಕೋಶಗಳನ್ನು ನಾಶಮಾಡಲು ಪ್ರಾರಂಭ ಮಾಡುತ್ತದೆ.
- ದೀರ್ಘಕಾಲದ ಅತಿಸಾರವು ಒಂದು ವಾರಕ್ಕಿಂತ ಹೆಚ್ಚು ಕಾಲ ಇರುತ್ತದೆ
- ಒಣ ಕೆಮ್ಮು
- ಖಿನ್ನತೆ, ನರ ವ್ಯವಸ್ಥೆ ಅಸ್ವಸ್ಥತೆ ಮತ್ತು ನೆನಪಿನ ಶಕ್ತಿ ಹಾನಿ
- ನ್ಯುಮೋನಿಯಾ
- ತ್ವರಿತ ತೂಕ ನಷ್ಟ
- ಆಗಾಗ್ಗೆ ಜ್ವರ ಅಥವಾ ರಾತ್ರಿಯಲ್ಲಿ ಅತಿಯಾದ ಬೆವರುವುದು
- ಚರ್ಮದ ಮೇಲೆ, ಚರ್ಮದ ಕೆಳಗೆ, ಬಾಯಿ, ಮೂಗು ಅಥವಾ ಕಣ್ಣುರೆಪ್ಪೆಗಳ ಒಳಗೆ ಕೆಂಪು, ಕಂದು, ಗುಲಾಬಿ, ಅಥವಾ ನೇರಳೆ ಬಣ್ಣದ ಕಲೆಗಳು
- ಕುತ್ತಿಗೆ, ತೊಡೆಸಂದು ಅಥವಾ ಆರ್ಮ್ಪಿಟ್ಗಳಲ್ಲಿ ವಿಸ್ತರಿಸಿದ ದುಗ್ಧರಸ ಗ್ರಂಥಿಗಳು
- ನಾಲಿಗೆ, ತುಟಿಗಳು, ಗಂಟಲಿನ ಮೇಲೆ ಬಿಳಿ ಅಥವಾ ವಿಚಿತ್ರವಾದ ಕಲೆಗಳು
ಡಬ್ಯ್ಲೂಹೆಚ್ಒ ವರದಿ ಪ್ರಕಾರ, ಎಚ್‌ಐವಿಯು ಇಲ್ಲಿಯವರೆಗೆ 40.4 ಮಿಲಿಯನ್ ಜೀವಗಳನ್ನು ಬಲಿ ಪಡೆದಿದೆ. ವೈರಸ್ ಇನ್ನೂ ಎಲ್ಲಾ ದೇಶಗಳಲ್ಲಿ ಹರಡುತ್ತಿದೆ. ಕೆಲವು ವರ್ಷಗಳ ಕುಸಿತ ಕಂಡಿತ್ತು. ನಂತರ, ಹೊಸ ಸೋಂಕುಗಳಲ್ಲಿ ಹೆಚ್ಚಳ ಕಂಡುಬಂದಿದೆ. 2021ರಲ್ಲಿ 2.4 ಮಿಲಿಯನ್ ಜನರು ಎಚ್ಐವಿ ಕಾಣಿಸಿಕೊಂಡಿದೆ. ಶೇ 0.2ರಷ್ಟು ವಯಸ್ಕರಲ್ಲಿ ಹೆಚ್ಐವಿ ಹರಡಿದೆ. 63,000 ಹೊಸ ಎಚ್‌ಐವಿ ಪ್ರಕರಣಗಳು ಪತ್ತೆಯಾಗಿವೆ. 42,000 ಏಡ್ಸ್ ಸಂಬಂಧಿತ ಸಾವು ಪ್ರಕರಣಗಳ ಸಂಭವಿಸಿವೆ. ಶೇ 65 ರಷ್ಟು ಜನರಿಗೆ ಆ್ಯಂಟಿರೆಟ್ರೋವೈರಲ್ ಚಿಕಿತ್ಸೆ ನೀಡಲಾಗಿದೆ.
2030ರ ವೇಳೆಗೆ ಏಡ್ಸ್ ಕೊನೆಗೊಳಿಸಲು, 95-95-95 ಗುರಿಗಳೆಂದು ಕರೆಯಲ್ಪಡುವ HIV ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಪ್ರಸ್ತುತ ಗುರಿಗಳನ್ನು 2025 ರೊಳಗೆ ಪೂರೈಸಬೇಕು. ಏಡ್ಸ್ ತಡೆಗಟ್ಟುವಿಕೆಯ ಪ್ರಮುಖ ಅಂಶಗಳಲ್ಲಿ ಶಿಕ್ಷಣವು ಒಂದಾಗಿದೆ. ವಿಶ್ವ ಏಡ್ಸ್ ದಿನದ ಅಭಿಯಾನದ ಮುಖ್ಯ ಗುರಿಗಳು ದಿನನಿತ್ಯದ ಪರೀಕ್ಷೆ, ಸುರಕ್ಷಿತ ಅಭ್ಯಾಸಗಳು ಮತ್ತು ನಿಖರವಾದ ಮಾಹಿತಿಯ ಪ್ರಸಾರವನ್ನು ಉತ್ತೇಜಿಸುವುದು. ವೈರಸ್ ಹರಡುವುದನ್ನು ತಡೆಯಲು ಜನರಿಗೆ ಮಾಹಿತಿ ಒದಗಿಸುವುದು ಅತ್ಯಗತ್ಯ.
ಇದನ್ನೂ ಓದಿ:ಚೀನಾದ ಬಳಿಕ ಇದೀಗ ಡೆನ್ಮಾರ್ಕ್, ನೆದರ್ಲ್ಯಾಂಡ್ ಮಕ್ಕಳಲ್ಲಿ ನ್ಯೂಮೋನಿಯಾ ಸೋಂಕು ಏರಿಕೆ