ಹೈದ್ರಾಬಾದ್: ಅನೇಕ ಮಂದಿ ಹೃದಯದ ಸಮಸ್ಯೆಗಳು ಕೇವಲ ಪುರುಷರಲ್ಲಿ ಕಂಡು ಬರುತ್ತದೆ ಎಂದು ಯೋಚಿಸುತ್ತಾರೆ. ಆದರೆ, ಅಧ್ಯಯನಗಳ ಪ್ರಕಾರ, ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಕಂಡು ಬರುತ್ತಿವೆ. ಇದಕ್ಕೆ ಪ್ರಮುಖ ಕಾರಣ ಜೀವನಶೈಲಿ ಬದಲಾವಣೆ ಮತ್ತು ಆಹಾರವಾಗಿದೆ. ಮಹಿಳೆಯರು ತಮ್ಮ ಹೃದಯದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕೆಲವು ಮುಂಜಾಗ್ರತೆ ವಹಿಸಬೇಕಿದೆ ಎಂಬ ಸಲಹೆಯನ್ನು ನೀಡಲಾಗಿದೆ.
ಹದಿ ವಯಸ್ಸಿನವರಲ್ಲಿ ಅಧಿಕ ತಿನ್ನುವಿಕೆ ಅಭ್ಯಾಸ ಮತ್ತು ದೈಹಿಕ ಚಟುವಟಿಕೆ ಕೊರತೆಯುವ ಸ್ಥೂಲಕಾಯಕ್ಕೆ ಕಾರಣವಾಗುತ್ತದೆ. ಇದು ನಿಧಾನವಾಗಿ ಋತುಚಕ್ರದ ಸಮಸ್ಯೆ, ಪಿಸಿಒಡಿ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸಮತೋಲಿತ ಆಹಾರ ಆಭ್ಯಾಸಗಳನ್ನು ಆರಂಭದಿಂದ ರೂಢಿಸಿಕೊಳ್ಳುವ ಮೂಲಕ ಆರೋಗ್ಯಕ್ಕೆ ಗಮನ ನೀಡಬಹುದು. ಜೊತೆಗೆ ಕನಿಷ್ಠ ಅರ್ಧಗಂಟೆ ಕ್ರೀಡೆ, ಡ್ಯಾನ್ಸ್ ಅಥವಾ ಮನೆಯಲ್ಲಿಯೇ ವ್ಯಾಯಾಮದಂತಹ ದೈಹಿಕ ಚಟುವಟಿಕೆ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಅವಶ್ಯ. ಹೀಗಿದ್ದಾಗ ಮಾತ್ರವೇ ನೀವು ಅಪಾಯದಿಂದ ಪಾರಾಗಲು ಸಾಧ್ಯ.
ಅನೇಕ ಮಹಿಳೆಯರು ಕಚೇರಿ ಮತ್ತು ಮನೆಯ ಕೆಲಸದ ನಿರ್ವಹಣೆಯ ಎರಡು ಜವಾಬ್ದಾರಿಯಲ್ಲಿ ಬ್ಯುಸಿಯಾಗಿರುತ್ತಾರೆ. ಈ ಕೆಲಸಗಳ ನಿರ್ವಹಿಸುವ ಒತ್ತಡದಿಂದ ಬೆಳಗಿನ ಹೊತ್ತು ತಿಂಡಿಯನ್ನು ತಿನ್ನುವುದಿಲ್ಲ. ಒಂದು ವೇಳೆ ತಿಂದರೂ ಅದರಲ್ಲಿ ಸರಿಯಾಗಿ ಪೋಷಣೆ ಇರುವುದಿಲ್ಲ. ಇದರಿಂದ ಈ ಹಸಿವು ಮಧ್ಯಾಹ್ನದ ಊಟದ ಮೇಲೆ ಬೀರುತ್ತದೆ. ಹೆಚ್ಚಾಗಿ ಊಟ ಸೇವನೆ ಮಾಡುವಂತೆ ಆಗುತ್ತದೆ. ಈ ಅಭ್ಯಾಸವೂ ಕ್ಯಾಲೋರಿ ಹೆಚ್ಚಳಕ್ಕೆ ಕಾರಣವಾಗಲಿದ್ದು, ಅಧಿಕ ತೂಕವೂ ಹೃದಯಕ್ಕೆ ಭಾರವಾಗುತ್ತದೆ.