ಹೈದರಾಬಾದ್: ಸ್ತನ ರೋಗದ ಕುರಿತು ಅರಿವಿನ ಕೊರತೆ ಮತ್ತು ಸಾರ್ವಜನಿಕರ ಪತ್ತೆ ಕಾರ್ಯಕ್ರಮಗಳು ನಡೆಯದಿರುವುದರಿಂದ ಶೇ 60ರಷ್ಟು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಭಿವೃದ್ಧಿ ಹೊಂದಿದ ಹಂತದಲ್ಲಿದೆ ಎಂದು ಪ್ರಮುಖ ಸ್ತನ ಕ್ಯಾನ್ಸರ್ ಸರ್ಜನ್ ಆಗಿರುವ ಡಾ ಪಿ. ರಘುರಾಮ್ ತಿಳಿಸಿದ್ದಾರೆ.
ಪ್ರತಿ ವರ್ಷ ಸ್ತನ ಕ್ಯಾನ್ಸರ್ನಿಂದ 2,00,000 ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಸ್ತನ ಕ್ಯಾನ್ಸರ್ ಎಂಬುದು ಭಾರತದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಮಹಿಳೆಯರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ.
ಹೈದರಾಬಾದ್ನಲ್ಲಿ ಎಐಸಿಒಜಿ -2024 - 66ನೇ ವಾರ್ಷಿಕ ಸಮಾವೇಶದಲ್ಲಿ ಬ್ರೆಸ್ಟ್ ಕ್ಯಾನ್ಸರ್ ಅಡ್ವಾಕಸಿ ಮತ್ತು ಸ್ಕ್ರೀನಿಂಗ್ ವಿಷಯದ ಕುರಿತು ಮಾತನಾಡಿರುವ ಉಶಾಲಕ್ಷ್ಮೀ ಬ್ರೆಸ್ಟ್ ಕ್ಯಾನ್ಸರ್ ಫೌಂಡೇಷನ್ ಸಿಇಒ ಮತ್ತು ನಿರ್ದೇಶಕ ಡಾ ಪಿ ರಘುರಾಮ್, ಭಾರತದಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳ ಕುರಿತು ಅರಿವು ಮೂಡಿಸಿದರು.
ಎಐಸಿಒಜಿ 2024ನ ಅಧ್ಯಕ್ಷ ಡಾ ಶಾಂತಾ ಕುಮಾರಿ ಮಾತನಾಡಿ, ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವಂತ ಮತ್ತು ಸಬಲೀಕರಣಗೊಳಿಸುವಲ್ಲಿ ಸ್ತ್ರೀರೋಗತಜ್ಞರು ಮುಂದಾಗಬೇಕಿದೆ. ಸ್ತ್ರೀರೋಗ ತಜ್ಞರು ಆರಂಭದಲ್ಲಿ ರೋಗ ಪತ್ತೆ ಮಾಡುವ ಮತ್ತು ಈ ಕುರಿತು ಉತ್ತಮ ತಜ್ಞರಿಗೆ ತೋರಿಸುವ ಕುರಿತು ಜಾಗೃತಿ ಮೂಡಿಸುವುದರಿಂದ ಆರಂಭಿಕ ಹಂತದಲ್ಲೇ ಇದನ್ನು ತಡೆಯಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ತಮ್ಮ ಬಳಿ ಆಗಮಿಸುವ ರೋಗಿಗಳಲ್ಲಿ ಆರಂಭದಲ್ಲಿ ಸ್ತನ ಕ್ಯಾನ್ಸರ್ ಪತ್ತೆ ಭರವಸೆ ನೀಡುವಲ್ಲಿ ಸ್ತ್ರೀರೋಗ ತಜ್ಞರ ಪಾತ್ರ ಪ್ರಮುಖವಾಗಿದೆ. ಸ್ತ್ರೀರೋಗ ತಜ್ಞರು ಇತರೆ ಸಮಸ್ಯೆಗಳೊಂದಿಗೆ ತಮ್ಮ ಬಳಿ ಬರುವ ಮಹಿಳಾ ರೋಗಿಗಳಲ್ಲಿ ಸ್ತನದ ಯಾವುದೇ ಸಮಸ್ಯೆ ಇಲ್ಲವಾದರೂ ಸ್ತನ ಪರೀಕ್ಷೆಯನ್ನು ಮಾಡಿಸಬೇಕು. ಕಾರಣ ನಿಖರವಾದ ವಿಧಾನವೂ ಸ್ತನ ಕ್ಯಾನ್ಸರ್ ಪತ್ತೆ ಮಾಡಲು ಸಹಾಯ ಮಾಡುತ್ತದೆ. ಕೆಲವು ಮಾರಣಾಂತಿಕವಾಗಿರುವ ಹಿನ್ನೆಲೆ ಇದರ ಆರಂಭಿಕ ಪತ್ತೆ ಅವಶ್ಯವಾಗಿದೆ.