ಕರ್ನಾಟಕ

karnataka

ETV Bharat / sukhibhava

ಲೈಂಗಿಕ ಕ್ರಿಯೆಯ ಬಳಿಕ ಗಾಢ ನಿದ್ರೆಗೆ ಜಾರುತ್ತಾರಂತೆ ಸ್ತ್ರೀಯರು - Women Get Quality Sleep

ಲೈಂಗಿಕತೆ ಕ್ರಿಯೆಯ ನಂತರ ನಿದ್ರಿಸುವುದು ತುಂಬಾ ಸಾಮಾನ್ಯ ಪ್ರಕ್ರಿಯೆಯಾಗಿದೆ. ಮಹಿಳೆಯರಿಗೆ ಹೋಲಿಸಿದರೆ ಪುರುಷರು ಬೇಗನೆ ನಿದ್ರಿಸುತ್ತಾರೆ ಎಂದು ನಂಬಲಾಗಿದೆ. ಆದರೆ ಸಂಶೋಧನೆಯ ಪ್ರಕಾರ, ಸಂಭೋಗದ ನಂತರ ಮಹಿಳೆಯರು ಉತ್ತಮ ಗುಣಮಟ್ಟದ ನಿದ್ರೆಯನ್ನು ಆನಂದಿಸುತ್ತಾರೆ ಎಂಬುದು ದೃಢವಾಗಿದೆ.

women-get-quality-sleep-after-sexual-activity
ಲೈಂಗಿಕ ಕ್ರಿಯೆಯ ಬಳಿಕ ಗುಣಮಟ್ಟದ ನಿದ್ದೆಗೆ ಜಾರುತ್ತಾರಂತೆ ಸ್ತ್ರೀಯರು

By

Published : Aug 22, 2021, 12:31 PM IST

ಲೈಂಗಿಕ ಸಂಭೋಗದ ನಂತರ ಒಬ್ಬ ವ್ಯಕ್ತಿಯು ಬೇಗನೆ ನಿದ್ರಿಸುವ ಸಾಧ್ಯತೆಯಿದೆ, ಏಕೆಂದರೆ ಲೈಂಗಿಕ ಕ್ರಿಯೆಯ ಸಮಯ ದೇಹದಲ್ಲಿ ಹಲವು ಹಾರ್ಮೋನುಗಳು ಬಿಡುಗಡೆಯಾಗುತ್ತವೆ, ಇದು ದೇಹವನ್ನು ಸರಿಯಾಗಿ ವಿಶ್ರಾಂತಿ ಪಡೆಯಲು ಅನುವು ಮಾಡಿಕೊಡುತ್ತದೆ. ಲೈಂಗಿಕ ಸಂಭೋಗದ ನಂತರ ಪುರುಷರು ಮಾತ್ರವಲ್ಲ, ಮಹಿಳೆಯರೂ ನಿದ್ರೆಗೆ ಜಾರುತ್ತಾರೆ. ಸಂಭೋಗದ ನಂತರ ಪುರುಷರು ಮಹಿಳೆಯರಿಗಿಂತ ಬಹುಬೇಗ ಮಲಗುತ್ತಾರೆ. ಆದರೆ ನಿದ್ರೆಯ ಗುಣಮಟ್ಟ ಮಹಿಳೆಯರಲ್ಲೇ ಉತ್ತಮವಾಗಿರುತ್ತದೆ.

ಲೈಂಗಿಕತೆಯ ನಂತರ ನಿದ್ರಿಸುವುದು ತುಂಬಾ ಸಾಮಾನ್ಯ ಪ್ರಕ್ರಿಯೆಯಾಗಿದೆ. ಮಹಿಳೆಯರಿಗೆ ಹೋಲಿಸಿದರೆ ಪುರುಷರು ಬೇಗನೆ ನಿದ್ರಿಸುತ್ತಾರೆ ಎಂದು ನಂಬಲಾಗಿದೆ. ಆದರೆ ಸಂಶೋಧನೆಯ ಪ್ರಕಾರ, ಸಂಭೋಗದ ನಂತರ ಮಹಿಳೆಯರು ಉತ್ತಮ ಗುಣಮಟ್ಟದ ನಿದ್ರೆಯನ್ನು ಆನಂದಿಸುತ್ತಾರೆ. ಅಲ್ಬನಿ ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್​​​​​ನಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಪುರುಷರಿಗಿಂತ ಮಹಿಳೆಯರು ಲೈಂಗಿಕತೆಯ ನಂತರ ಉತ್ತಮ ಗುಣಮಟ್ಟದ ನಿದ್ರೆ ಮಾಡುತ್ತಾರೆ.

ಈ ಅಧ್ಯಯನದಲ್ಲಿ, ಲೈಂಗಿಕತೆಯ ನಂತರ ನಿದ್ರೆಯ ಗುಣಮಟ್ಟದ ಕುರಿತು ಸಂಶೋಧನೆ ನಡೆಸಲಾಗಿದೆ.

ಅಧ್ಯಯನ ಹೇಳೋದೇನು..?

ಸಂಶೋಧಕರು ಪೋಸ್ಟ್ ಕಾಪ್ಯುಲೇಟರಿ ನಿದ್ರಾಹೀನತೆಯು ಮಹಿಳೆಯರು ಮತ್ತು ಪುರುಷರಲ್ಲಿ ಹೆಚ್ಚಾಗಿರುತ್ತದೆ. ಆದಾಗ್ಯೂ, ಸಂಭೋಗದ ನಂತರ ಅಥವಾ ಇಲ್ಲದೆಯೂ ಮಹಿಳೆಯರು ಪುರುಷರಿಗಿಂತ ಗುಣಮಟ್ಟದ ನಿದ್ರೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಅಧ್ಯಯನವು 128 ಮಹಿಳೆಯರು ಹಾಗೂ 98 ಮಂದಿ ಪುರುಷರ ಮೇಲೆ ನಡೆಸಲಾಗಿದ್ದು, ಎವಲ್ಯೂಷನರಿ ಬಿಹೇವಿಯರಲ್ ಸೈನ್ಸಸ್‌ನಲ್ಲಿ ಪ್ರಕಟಿಸಲಾಗಿದೆ.

ಸಂಭೋಗದ ಬಳಿಕ ನಿದ್ರೆಗೆ ಜಾರುವ ಪುರುಷ

ಹಲವು ಅಧ್ಯಯನಗಳ ಪ್ರಕಾರ ಲೈಗಿಕ ಕ್ರಿಯೆಯ ಬಳಿಕ ಪುರುಷರು ಬಹುಬೇಗ ನಿದ್ರೆಗೆ ಜಾರುತ್ತಾರೆ. ಸಂಭೋಗದ ಬಳಿಕ ಅವರು ತನ್ನ ಸಂಗಾತಿಯೊಂದಿಗೆ ಮಾತನಾಡಲು ಇಚ್ಛಿಸುವುದಿಲ್ಲ. ಇದಕ್ಕೆ ವಿಜ್ಞಾನ, ಆರೋಗ್ಯ ಮತ್ತು ಪರಿಸರ ನ್ಯೂಯಾರ್ಕ್ ವಿಶ್ವವಿದ್ಯಾಲಯವು ಕಾರಣಗಳ ಬಗ್ಗೆ ವರದಿಯನ್ನು ಪ್ರಕಟಿಸಿದೆ, ಅವುಗಳೆಂದರೆ:

ಹಾರ್ಮೋನ್​ಗಳು ಸಕ್ರಿಯ

ವರದಿಯ ಪ್ರಕಾರ, ಆಕ್ಸಿಟೋಸಿನ್ ಹಾರ್ಮೋನ್ ಮತ್ತು ಪ್ರೊಲ್ಯಾಕ್ಟಿನ್ ಹಾರ್ಮೋನ್ ಲೈಂಗಿಕತೆಯ ನಂತರ ದೇಹದಿಂದ ಬಿಡುಗಡೆಯಾಗುತ್ತದೆ. ಲೈಂಗಿಕ ಕ್ರಿಯೆ ಸಮಯದಲ್ಲಿ, ಈ ಹಾರ್ಮೋನುಗಳು ಮಹಿಳೆಯರಿಗಿಂತ ಪುರುಷರ ದೇಹದಲ್ಲಿ ಹೆಚ್ಚು ಸಕ್ರಿಯವಾಗುತ್ತವೆ, ಈ ಕಾರಣದಿಂದಾಗಿ ಸಂಭೋಗದ ನಂತರ ಪುರುಷರು ನಿದ್ರೆ ಮಾಡಲು ಪ್ರಾರಂಭಿಸುತ್ತಾರೆ. ಅದೇ ಸಮಯದಲ್ಲಿ ಮಹಿಳೆಯರಲ್ಲಿ, ಹಾರ್ಮೋನುಗಳ ಬದಲಾವಣೆಗಳು ಶೀಘ್ರವಾಗಿರುತ್ತವೆ, ಈ ಕಾರಣದಿಂದಾಗಿ ಲೈಂಗಿಕತೆಯ ನಂತರ ಅವರೂ ಆಲಸ್ಯವನ್ನು ಅನುಭವಿಸುತ್ತಾರೆ.

ಶಕ್ತಿ ಕುಂದುವುದು

ಅಧ್ಯಯನಗಳ ಪ್ರಕಾರ ಸಂಭೋಗ ಕ್ರಿಯೆಯ ಬಳಿಕ ಪುರುಷರಲ್ಲಿ ಕ್ಯಾಲೋರಿ ಬರ್ನ್ ಆಗಲಿದ್ದು, ಇದರಿಂದಾಗಿ ಸುಸ್ತು ಮತ್ತು ನಿಶಕ್ತಿಯ ಕಾರಣ ಬಹುಬೇಗ ನಿದ್ರೆಗೆ ಜಾರಲಿದ್ದಾರೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

ಪ್ರೊಲ್ಯಾಕ್ಟಿನ್ ಹಾರ್ಮೋನ್​​​ ನಿದ್ರೆಗೆ ಕಾರಣ

ಸಂಭೋಗದ ಸಮಯದಲ್ಲಿ ಪುರುಷರ ದೇಹವು ಪ್ರೊಲ್ಯಾಕ್ಟಿನ್ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ, ಇದು ನಿದ್ರೆಗೆ ಕಾರಣವಾಗುತ್ತದೆ.

ಒತ್ತಡಕ್ಕೊಂದು ಪರಿಹಾರ

ಉತ್ತಮ ಲೈಂಗಿಕ ಸಂಭೋಗವು ಒತ್ತಡವನ್ನು ನಿವಾರಿಸುವುದಲ್ಲದೆ, ಒಬ್ಬ ವ್ಯಕ್ತಿಯನ್ನು ಶಾಂತ ಮತ್ತು ಸಂತೋಷವನ್ನು ಅನುಭವಿಸುವಂತೆ ಮಾಡುತ್ತದೆ. ಲೈಂಗಿಕ ಸಮಯದಲ್ಲಿ ಬಿಡುಗಡೆಯಾಗುವ ಪ್ರೀತಿಯ ಹಾರ್ಮೋನ್ ಆಕ್ಸಿಟೋಸಿನ್ ಕೂಡ ದೇಹವನ್ನು ಸಡಿಲಗೊಳಿಸುತ್ತದೆ. ಇದು ಪುರುಷರಲ್ಲಿ ಸ್ನಾಯುವಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಅವರಿಗೆ ನಿದ್ರೆ ಬರುವಂತೆ ಮಾಡುತ್ತದೆ.

ABOUT THE AUTHOR

...view details