ಕರ್ನಾಟಕ

karnataka

ETV Bharat / sukhibhava

ಹೃದಯ ಆರೋಗ್ಯ ಕಾಪಾಡಲು ಮಹಿಳೆಯರೇ ಈ ಸಲಹೆಗಳನ್ನು ಪಾಲಿಸಿ - ಹೃದಯದ ಆರೋಗ್ಯದ ಬಗ್ಗೆ ಕೂಡ

ಹೃದಯದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ - ಉತ್ತಮ ಆಹಾರ ಶೈಲಿ, ವ್ಯಾಯಾಮ ದೇಹಕ್ಕೆ ಅಗತ್ಯ - ಮಾನಸಿಕ ಆರೋಗ್ಯದ ಬಗ್ಗೆ ಇರಲಿ ಗಮನ

ಹೃದಯ ಆರೋಗ್ಯ ಕಾಪಾಡಲು ಮಹಿಳೆಯರೇ ಈ ಸಲಹೆಗಳನ್ನು ಪಾಲಿಸಿ
women-follow-these-tips-to-maintain-heart-health

By

Published : Jan 19, 2023, 4:02 PM IST

ಮಹಿಳೆಯರಲ್ಲಿ ಆರೋಗ್ಯಕ್ಕೆ ಗಮನ ನೀಡುವವರ ಸಂಖ್ಯೆ ಕಡಿಮೆ. ತಿಂಗಳ ಸಮಸ್ಯೆ ಜೊತೆಗೆ ಪಿಸಿಒಎಸ್​ ಸಮಸ್ಯೆ ನಿಯಂತ್ರಣಕ್ಕೆ ಅವರು ಹೆಚ್ಚಿನ ಜಾಗೃತಿ ನೀಡಬೇಕು. ಈ ನಡುವೆ ಅವರು ಹೃದಯದ ಆರೋಗ್ಯದ ಬಗ್ಗೆ ಕೂಡ ಗಮನಹರಿಸಬೇಕಿದೆ. ಇದಕ್ಕಾಗಿ ತಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆ ನಡೆಸಬೇಕಿದೆ.

ತೂಕತೂಕದ ವಿಚಾರದಲ್ಲಿರಲಿ ಗಮನ

ವ್ಯಾಯಾಮ ಎಂತಹ ಸಮಸ್ಯೆಗೂ ಪರಿಹಾರ. ವ್ಯಾಯಾಮ ಹೃದಯದ ಬಡಿತವನ್ನು ಹೆಚ್ಚಿಸುತ್ತದೆ. ಇದು ಹೃದಯದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬುದನ್ನು ಕೆಲವು ಅಧ್ಯಯನಗಳು ತಿಳಿಸುತ್ತದೆ. ಇದೇ ಕಾರಣಕ್ಕೆ ನಿತ್ಯ ಕೆಲವರು ವ್ಯಾಯಾಮಗಳನ್ನು ಮಾಡುವುದು ಅವಶ್ಯಕವಾಗಿದೆ. ಕನಿಷ್ಠ ಪಕ್ಷ ದಿನಕ್ಕೆ 10 ಸಾವಿರ ಮೆಟ್ಟಿಲುಗಳನ್ನಾದರೂ ಹತ್ತುವ ಊಟವಾದ ನಡೆಯುವ ಅಭ್ಯಾಸ ಮಾಡಿಕೊಳ್ಳಬೇಕು.

ತೂಕದ ವಿಚಾರದಲ್ಲಿರಲಿ ಗಮನ: ಹೃದಯ ಆರೋಗ್ಯಕ್ಕೆ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅವಶ್ಯ. ಈ ಹಿನ್ನೆಲೆ ಎತ್ತರಕ್ಕೆ ಅನುಗುಣವಾದ ತೂಕವನ್ನು ಹೊಂದುವತ್ತ ಗಮನಹರಿಸಬೇಕಿದೆ. ಇದರ ಅನುಸಾರ ತೂಕದ ನಷ್ಟಕ್ಕೆ ಮುಂದಾಗಬೇಕು. ಇದಕ್ಕಾಗಿ ಯಾವ ವ್ಯಾಯಾಮ ಮತ್ತು ಡಯಟ್​ ಅನುಸರಿಸಬೇಕು ಎಂಬುದರ ಕುರಿತು ತಜ್ಞರ ಸಲಹೆಯನ್ನು ಪಡೆಯುವುದು ಅವಶ್ಯವಾಗಿದೆ. ದೇಹದ ತೂಕವನ್ನು (ಬಿಎಂಐ) ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರಿಂದ ಶೇ 32ರಷ್ಟು ಮಂದು ಹೃದಯದ ಸಮಸ್ಯೆ ಅಪಾಯದಿಂದ ಪಾರಾಗಬಹುದು.

ಆಹಾರ ಶೈಲಿ ಬಗ್ಗೆ ನಿರ್ಲಕ್ಷ್ಯ ಬೇಡ

ಬಿಪಿ ಮತ್ತು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವುದು ಅವಶ್ಯಕವಾಗಿದೆ. ಬಿಪಿ ಮತ್ತು ಡಯಾಬೀಟಿಸ್​ ಹೃದಯ ಸೇರಿದಂತೆ ಇನ್ನಿತರ ಸಮಸ್ಯೆಗೆ ಕಾರಣವಾಗುತ್ತದೆ. ಇದರಲ್ಲಿ ಯಾವುದೇ ಏರಿಳಿತ ಕಂಡು ಬಂದರೂ ವೈದ್ಯರ ಸಲಹೆ ಪಡೆದು ನಿಯಂತ್ರಣಕ್ಕೆ ಬರಬೇಕಿದೆ.

ಆಹಾರ ಶೈಲಿ ಬಗ್ಗೆ ನಿರ್ಲಕ್ಷ್ಯ ಬೇಡ: ಕರಿದ ಪದಾರ್ಥಗಳು, ಕುರುಕಲು ತಿಂಡಿಗಳು ಪ್ರತಿಯೊಬ್ಬರಿಗೂ ಇಷ್ಟ. ಆದರೆ, ಇದನ್ನು ಅತಿಹೆಚ್ಚು ತಿನ್ನುವುದು ಕೂಡ ತೂಕದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ಹೃದಯ ಆರೋಗ್ಯಕ್ಕೆ ಅಪಾಯವನ್ನು ತರುತ್ತದೆ. ಈ ಹಿನ್ನೆಲೆ ಇವುಗಳ ಸೇವನೆಯಲ್ಲಿ ನಿಯಂತ್ರಣ ಅಥವಾ ಸಂಪೂರ್ಣವಾಗಿ ನಿರ್ಲಕ್ಷ್ಯವಹಿಸುವುದು ಅವಶ್ಯ. ಈ ಹಿನ್ನೆಲೆ ಆರೋಗ್ಯಕರವಾದ ಆಹಾರ ಸೇವನೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು

ಒಂದೇ ಸ್ಥಳದಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಕೂಡ ಹೃದಯ ಸಮಸ್ಯೆ ಮತ್ತು ಡಯಾಬೀಟಿಸ್​ ಸಮಸ್ಯೆಗೆ ಕಾರಣವಾಗುತ್ತದೆ. ಯೋಗ ಹಾಗೂ ದೈನಂದಿನ ಚಟುವಟಿಕೆಯಿಂದಾಗಿ ಹೃದಯ ಸಂಬಂಧಿ ಅಪಾಯ ಕಡಿಮೆ ಮಾಡುತ್ತದೆ. ಈ ಹಿನ್ನೆಲೆ ದಿನನಿತ್ಯ ಕನಿಷ್ಠ 30 ನಿಮಿಷಗಳ ವ್ಯಾಯಾಮ ರೂಢಿಕೊಳ್ಳುವುದು ಅವಶ್ಯಕ. ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆ ಒತ್ತಡ ನಿವಾರಣೆಗೆ ದೈನಂದಿನ ಚಟುವಟಿಕೆ ಅಭ್ಯಾಸ ಅಗತ್ಯವಾಗಿದೆ.

ಮಾನಸಿಕ ಆರೋಗ್ಯದ ಬಗ್ಗೆ ಇರಲಿ ಕಾಳಜಿ: ಮಾನಸಿಕ ಸಮಸ್ಯೆಗಳು ಕೂಡ ಹೃದಯದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಹಿನ್ನೆಲೆ ಯೋಗ, ಧ್ಯಾನ ಮತ್ತು ಉಸಿರಾಟದ ವ್ಯಾಯಾಮ ನಡೆಸುವ ಮೂಲಕ ಮಾನಸಿಕ ಆರೋಗ್ಯ ಶಾಂತಿಯನ್ನು ಕಾಪಾಡಿಕೊಳ್ಳಬೇಕು. ಜೀವನಶೈಲಿಯ ಸಕಾರಾತ್ಮಕ ಬದಲಾವಣೆ ಜೊತೆಗೆ ಹೃದಯ ಸಂಬಂಧಿ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಇದು ಕಾರಣವಾಗಿದೆ.

ಈ ಎಲ್ಲ ಮುನ್ನೆಚ್ಚರಿಕೆಗಳು ಕೇವಲ ಹೃದಯದ ಆರೋಗ್ಯ ಮಾತ್ರವಲ್ಲದೇ ಸಂತಾನೋತ್ಪತ್ತಿ ವ್ಯವಸ್ಥೆ, ಋತುಮಾನದ ಸಮಸ್ಯೆ ಮತ್ತು ಇತರ ಸಮಸ್ಯೆಗಳಿಂದ ಮುಕ್ತವಾಗಬಹುದು. ಇದನ್ನು ಮನಸಿನಲ್ಲಿಟ್ಟುಕೊಂಡು ಹೃದಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಬಾಯಾರಿಕೆ ಆಗಲ್ಲ ಅಂತ ನೀರು ಕಡಿಮೆ ಕುಡಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ

ABOUT THE AUTHOR

...view details