ಪೆರುಗ್ವೆ: ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳೆಯರು ಹೃದಯಾಘಾತದಿಂದ ಸಾವನ್ನಪ್ಪುವ ಸಂಭವ ಎರಡು ಪಟ್ಟು ಹೆಚ್ಚಿರುತ್ತದೆ ಎಂದು ಹೊಸ ಸಂಶೋಧನೆ ತಿಳಿಸಿದೆ. ಈ ಕುರಿತು ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಾಜಿಯ ಸೈಂಟಿಫಿಕ್ ಕಾಂಗ್ರೆಸ್ ಹಾರ್ಟ್ ಫೇಲ್ಯೂರ್ 2023ರಲ್ಲಿ ವಿವರಿಸಲಾಗಿದೆ. ಮಹಿಳೆಯರು ಮಯೋಕಾರ್ಡಿಯಲ್ ಇನ್ಫ್ರಾಕ್ಷನ್ ಕಳಪೆ ಅಪಾಯವನ್ನು ಹೊಂದಿರುತ್ತಾರೆ ಎಂದು ಪೋರ್ಚುಗಲ್ನ ಅಲ್ಮಾಡಾ ಆಸ್ಪತ್ರೆಯ ಗಾರ್ಸಿಯಾ ಡಿ ಒರ್ಟಾ ಅಧ್ಯಯನ ಲೇಖಕಿ ಡಾ ಮರಿಯಾನಾ ಮಾರ್ಟಿನ್ಹೋ ತಿಳಿಸಿದ್ದಾರೆ.
ಈ ಮಹಿಳೆಯರು ಹೃದಯ ಸಮಸ್ಯೆ ಬಳಿಕ ಅಧಿಕ ರಕ್ತದೊತ್ತಡ ನಿಯಂತ್ರಣ, ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಮತ್ತು ಮಧುಮೇಹದಂತಹ ಚಿಕಿತ್ಸೆಗಳ ನಿರ್ವಹಣೆಗೆ ನಿಯಮಿತವಾಗಿ ಒಳಗಾಗಬೇಕು. ಯುವ ಮಹಿಳೆಯರಲ್ಲಿ ಧೂಮಪಾನ ಹೆಚ್ಚಿನ ಮಟ್ಟದಲ್ಲಿದ್ದು, ಇದನ್ನು ದೈಹಿಕ ಚಟುವಟಿಕೆ ಮತ್ತು ಆರೋಗ್ಯಯುತ ಜೀವನದೊಂದಿಗೆ ನಿರ್ವಹಣೆ ಮಾಡಬೇಕಿದೆ.
ಈ ಹಿಂದಿನ ಅಧ್ಯಯನಗಳು ಮಹಿಳೆ ಜೊತೆಗೆ ಎಸ್ಟಿ ಎಲೆವೇಷನ್ ಮಯೋಕಾರ್ಡಿಯಲ್ ಇನ್ಫ್ಟ್ರಾಕ್ಷನ್ ಪುರುಷರಿಗೆ ಹೋಲಿಕೆ ಮಾಡಿದಾಗ ಕೆಟ್ಟದಾಗಿದೆ. ಇದು ಅಧಿಕ ವಯಸ್ಸಿನ ಕಾರಣದಿಂದಲೂ ಮತ್ತು ಇತರೆ ಪರಿಸ್ಥಿತಿಗಳ ಹೆಚ್ಚಳ, ಸ್ಟೆಂಟ್ಗಳ ಕಡಿಮೆ ಬಳಕೆ ಅಪಧಮನಿಯ ಬ್ಲಾಕೇಜ್ಗಳ ಕಾರಣದಿಂದಲೂ ಇರಬಹುದು. ಈ ಅಧ್ಯಯನವೂ ಎಸ್ಟಿಇಎಂಐನಲ್ಲಿನ ಮಹಿಳೆ ಮತ್ತು ಪುರುಷರ ಕಡಿಮೆ ಮತ್ತು ದೀರ್ಘಕಾಲಿಕ ಫಲಿತಾಂಶಗಳನ್ನು ಹೋಲಿಸಿದಾಗ 55 ವರ್ಷದ ಋತುಚಕ್ರದ ಕೆಳಗಿನ ಮತ್ತು ಅದಕ್ಕೆ ಮೇಲಿನ ಮಹಿಳೆಯರಲ್ಲಿ ಯಾವುದೇ ಲೈಂಗಿಕ ವ್ಯತ್ಯಾಸಗಳು ಸ್ಪಷ್ಟವಾಗಿದೆಯಾ ಎಂಬುದನ್ನು ಪರಿಶೀಲಿಸಲಾಯಿತು.