ಪ್ರೆಸ್ಟೊನ್ (ಯುಕೆ): ಮಹಿಳೆಯರ ಸಂತೋಷದ ಕುರಿತು ವಿಚಿತ್ರ ಅಧ್ಯಯನವೊಂದು ನಡೆಸಲಾಗಿದೆ. ಮಹಿಳೆ ಸ್ವಾತಂತ್ರ್ಯ ಮತ್ತು ಉದ್ಯೋಗ ಅವಕಾಶವನ್ನು ಹೊಂದಿದ್ದರೂ, ಆಕೆಯಲ್ಲಿ ಆತಂಕ ಮತ್ತು ಮಾನಸಿಕ ಆರೋಗ್ಯ ಸವಾಲುಗಳಾದ ಖಿನ್ನತೆ, ಕೋಪ, ಒಂಟಿತನ ಮತ್ತು ನಿದ್ರೆ ಕೊರತೆ ಹೆಚ್ಚಿರುತ್ತದೆ. ಈ ಅಧ್ಯಯನದ ಫಲಿತಾಂಶವೂ ಅನೇಕ ದೇಶ ಮತ್ತು ವಿವಿಧ ವಯೋಮಿತಿಯ ಮಹಿಳೆಯರನ್ನು ಒಳಗೊಂಡಿದೆ. ಅಮೆರಿಕನ್ ಸೈಕಾಲಾಜಿ ಅಸೋಸಿಯೇಷನ್ ಇತ್ತೀಚೆಗೆ ಒಂದು ಅಧ್ಯಯನ ನಡೆಸಿದ್ದು, ಫಲಿತಾಂಶದಲ್ಲಿ ಅಮೆರಿಕದ ಮಹಿಳೆಯರು ಸಮಾಜ ತಮ್ಮನ್ನು ಹೇಗೆ ಪರಿಗಣಿಸುತ್ತದೆ ಎಂಬ ಬಗ್ಗೆ ಅಸಂತೋಷವನ್ನು ಹೊಂದಿರುವುದು ಪತ್ತೆ ಆಗಿದೆ.
ಮಕ್ಕಳು ಮತ್ತು ಹಿರಿಯ ಸಂಬಂಧಿಗಳ ಆರೈಕೆಯನ್ನು ಅನೇಕ ಮಹಿಳೆಯರೂ ನಿರ್ವಹಿಸುತ್ತಿದ್ದಾರೆ. ಅನೇಕರು ಮನೆ ಮತ್ತು ಕುಟುಂಬದ ವ್ಯವಸ್ಥೆಯನ್ನು ನಿರ್ವಹಣೆ ಜವಾಬ್ದಾರಿಯ ಒತ್ತಡವನ್ನು ಹೊಂದಿದ್ದಾರೆ. ಉದ್ಯೋಗ ಸ್ಥಳದಲ್ಲಿ ಐದರಲ್ಲಿ ಮೂರು ಮಹಿಳೆ ಲೈಂಗಿಕ ಕಿರುಕುಳ ಅಥವಾ ಬೈಗುಳ ಅಥವಾ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ.
ಸಾಂಕ್ರಾಮಿಕತೆ ಸಮಯದಲ್ಲಿ ಲಿಂಗ ತಾರತಮ್ಯವನ್ನು ಸರಿಯಾಗಿ ದಾಖಲಾಗಿದೆ. ಅನೇಕ ಮಹಿಳೆಯರಿಗೆ ಮನೆ ಮತ್ತು ಆರೈಕೆ ಜವಾಬ್ದಾರಿಯನ್ನು ಹೊಂದಿದ್ದರು. ಈ ವೇಳೆ ಇದು ಆಕೆಯ ಆರೋಗ್ಯ ಕಾಳಜಿ ಮೇಲೆ ಹೆಚ್ಚಿನ ಪರಿಣಾಮ ಬೀರಿತು ಎಂಬುದು ಅರಿಯಬೇಕಾದ ವಿಷಯವಾಗಿದೆ. ಮಹಿಳೆ ಪುರುಷರಿಗಿಂತ ಹೆಚ್ಚಿ ಭಾವನಾತ್ಮಕ ಚೇತರಿಸಿಕೊಳ್ಳುತ್ತಾರೆ.
ಮಹಿಳೆಯ ಸ್ಥಿತಿಸ್ಥಾಪಕತ್ವವೂ ಸಾಮಾಜಿಕ ಸಂಪರ್ಕಕ್ಕೆ ಹೆಚ್ಚಿನ ಕೊಡುಗೆ ನೀಡುವ ಅಂಶವಾಗಿದೆ. 2019ರಲ್ಲಿ ಸಂಶೋಧಕರು ಪತ್ತೆ ಮಾಡಿದಂತೆ ಪುರುಷರಿಗಿಂತ ಮಹಿಳೆಯರು ಸಕಾರಾತ್ಮಕ ಸಂಬಂಧ ಮತ್ತು ವೈಯಕ್ತಿಕ ಬೆಳವಣಿಗೆ ಸಾಮರ್ಥ್ಯವನ್ನು ಹೊಂದಿದ್ದಾರೆ. ಮಹಿಳೆ ಪುರುಷರಿಗಿಂತ ಹೆಚ್ಚಿನ ಬೆಂಬಲವನ್ನು ಪಡೆಯುತ್ತಾಳೆ. ಆಕೆ ಬೇಗ ಸಹಾಯವನ್ನು ಕೇಳುತ್ತಾಳೆ ಮತ್ತು ಅದರಿಂದ ಬೇಗ ಹೊರ ಬರುತ್ತಾಳೆ.
ಪುರುಷರಿಗಿಂತ ಮಹಿಳೆ ಹೆಚ್ಚಿನ ಸಾಮಾಜಿಕ ಸಂಬಂಧದ ಮೌಲ್ಯವನ್ನು ಹೊಂದಿರುತ್ತಾಳೆ. ಅಧ್ಯಯನವು ತಿಳಿಸುವಂತೆ ಮಹಿಳಾ ಸ್ನೇಹವೂ ಹೆಚ್ಚು ನಿಕಟವಾಗಿದ್ದು, ಅವರು ಹೆಚ್ಚು ಮುಖಾಮುಖಿ ಸಂವಹನವನ್ನು ಬೆಂಬಲಿಸುತ್ತಾರೆ. ಭಾವನಾತ್ಮಕ ಬೆಂಬಕವನ್ನಯ ಹೊಂದುತ್ತಾರೆ. ಆದರೆ, ಪುರುಷರ ಸಂಬಂಧವೂ ಹೆಚ್ಚು ಅಕ್ಕ-ಪಕ್ಕದಲ್ಲಿರುತ್ತದೆ. ಅಂದರೆ, ಫುಟ್ಬಾಲ್ ಮ್ಯಾಚ್ ಜೊತೆಗೆ ಕಾಫಿ ಹೀರಲು ಜೊತೆ ಸೇರುವಂತೆ.
ಸಂತೋಷ ವರ್ಸಸ್ ಉದ್ದೇಶ..ಪುರುಷರಂತೆ ಮಹಿಳೆ ಆ ಕ್ಷಣಕ್ಕೆ ಸಂತೋಷವಾಗಿರುವುದಿಲ್ಲ. ಆಕೆ ಅನೇಕ ಸಾಮಾಜಿಕ ಅಸಮಾನತೆ ಎದುರಿಸುತ್ತಾಳೆ ಎಂದು ಇತ್ತೀಚಿನ ಅಧ್ಯಯನ ತಿಳಿಸಿದೆ. ಮಹಿಳೆ ಜೀವಿಸಲು ಉದ್ದೇಶವನ್ನು ಹೊಂದಿರುತ್ತಾಳೆ. ಜೀವನದಲ್ಲಿನ ಅರ್ಥ ಮತ್ತು ಉದ್ದೇಶವೂ ಉತ್ತಮ ಆರೋಗ್ಯ ಮತ್ತು ಹೆಚ್ಚು ಜೀವಿಸುವುದರೊಂದಿಗೆ ಸಂಬಂಧ ಹೊಂದಿದೆ.