ಹೈದರಾಬಾದ್:ಎಲ್ಲೆಡೆ ಚಳಿ ತೀವ್ರತೆ ಹೆಚ್ಚಿದ್ದು, ಎಲ್ಲೆಡೆ ಕಡಿಮೆ ತಾಪಮಾನ ದಾಖಲಾಗಿದೆ. ಈ ಹವಾಮಾನ ಮಕ್ಕಳು ಮತ್ತು ವೈದ್ಯರ ಮೇಲೆ ಪರಿಣಾಮ ಬೀರುವ ಹಿನ್ನಲೆ ವೈದ್ಯರು ಕೂಡ ಎಚ್ಚರಿಕೆ ನೀಡಿದ್ದಾರೆ. ಕಾರಣ ಈ ಹಿರಿಯ ನಾಗರಿಕರಲ್ಲಿ ರೋಗ ನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ಈ ಹಿನ್ನೆಲೆ 60 ವರ್ಷ ಮೇಲ್ಪಟ್ಟವರು ಹೆಚ್ಚು ಜಾಗ್ರತೆಯಿಂದ ಇರಬೇಕು. ಅದರಲ್ಲೂ ರಕ್ತದೊತ್ತಡ, ಮಧುಮೇಹ ಮುಂತಾದ ದೀರ್ಘಕಾಲದ ಸಮಸ್ಯೆ ಹೊಂದಿರುವವರಿಗೆ ಚಳಿಗಾಲದ ಸೋಂಕು ತಗುಲಿದರೆ ಅವರಿಗೆ ಅನೇಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ಚಳಿಗಾಲದಲ್ಲಿ ದೇಹದ ರಕ್ತನಾಳಗಳ ಸಂಕುಚಿತಗೊಳ್ಳುವ ಸಾಧ್ಯತೆ ಇದೆ. ರಕ್ತನಾಳದಲ್ಲಿ ಸಣ್ಣ ಬ್ಲಾಕ್ ಇದ್ದರೂ ಅದು ಹೃದಯಾಘಾತ ಅಥವಾ ಪಾರ್ಶ್ವವಾಯುಗೆ ಕಾರಣವಾಗುತ್ತದೆ. ಚಳಿಗಾಲದಲ್ಲಿ ಬಹುತೇಕ ಮಂದಿ ಬೆಳಗಿನ ಜಾಗ ಹೆಚ್ಚು ಸಮಸ್ಯೆಗೆ ಒಳಗಾಗುತ್ತಾರೆ. ಈ ಚಳಿ ಜನವರಿ ಮತ್ತು ಫೆಬ್ರವರಿ ವರೆಗೆ ಮುಂದುವರೆಯಲಿದೆ. ಈ ಹಿನ್ನೆಲೆಯಲ್ಲಿ ವಯಸ್ಸಾದವರು ಬೆಳಗಿನ ಹೊತ್ತು ಹೊರಗೆ ಹೋಗುವುದನ್ನು ತಪ್ಪಿಸಬೇಕು ಎನ್ನುತ್ತಾರೆ ಗಾಂಧಿ ಆಸ್ಪತ್ರೆಯ ಸೂಪರಿಟೆಂಡೆಂಟ್ ಡಾ ರಾಜಾ ರಾವ್.
ಚಳಿಯಿಂದ ಹೆಚ್ಚು ಸಮಸ್ಯೆಗೆ ಒಳಗಾಗುವವರು ವಯಸ್ಸಾದವರು. ಈ ಅವರಿಯಲ್ಲಿ ಅವರು ವೈರಲ್ ಸೋಂಕಿಗೆ ಒಳಗಾಗುತ್ತಾರೆ. ಈಗಾಗಲೇ ದೀರ್ಘಕಾಲದ ಶ್ವಾಸಕೋಶ ಸಮಸ್ಯೆ (ಸಿಒಪಿಡಿ), ಬ್ರಾಂಕಯಿಟಿಸ್, ನ್ಯೂಮೋನಿಯಾ ಮುಂತಾದ ಸಮಸ್ಯೆ ಹೊಂದಿರುವವರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುತ್ತಾರೆ. ಈ ಅವಧಿಯಲ್ಲಿ ಚರ್ಮವೂ ಶುಷ್ಕಗೊಂಡು ಬಿರಿತದಂತಹ ಸಮಸ್ಯೆ ಅನುಭವಿಸುತ್ತಾರೆ. ಇದು ಕೆರೆತಕ್ಕೆ ಕಾರಣವಾಗಿ ಗಾಯವಾಗುವ ಸಾಧ್ಯತೆ ಇದೆ. ಇದು ಚರ್ಮದ ಸೋಂಕಿಗೂ ಕಾರಣವಾಗುತ್ತದೆ. ಚಳಿ ಹೆಚ್ಚಿದ್ದಾಗ ಮನೆಯಲ್ಲಿದ್ದರೂ ಸ್ವೆಟರ್ ಮತ್ತು ಮಂಕಿ ಕ್ಯಾಪ್ ಧರಿಸುವುದು ಅಗತ್ಯ. ಜೊತೆಗೆ ಆಹಾರದಲ್ಲಿ ಸಮತೋಲನ ಕಾಯ್ದುಕೊಳ್ಳಿ. ತಾಜಾತನದಿಂದ ಕೂಡಿದ ಬಿಸಿ ಆಹಾರ ಸೇವಿಸಿ. ಸಿಒಪಿಡಿ ಮತ್ತು ಬ್ರಾಂಕಯಿಟಿಸ್ ಸಮಸ್ಯೆ ಹೊಂದಿರುವವರು ಧೂಮಪಾನ ಮಾಡಬಾರು. ಬೆಳಗಿನ ವಾಕ್ ಹೋಗುವವರು ಸೂರ್ಯ ಬಂದ ಬಳಿಕ ಹೋಗುವುದು ಉತ್ತಮ ಈ ಸಮಯದಲ್ಲಿ ಚಳಿ ಎಂದು ವ್ಯಾಯಾಮ ನಿಲ್ಲಿಸಬೇಡಿ ಎಂದು ಸಲಹೆ ನೀಡಿದ್ದಾರೆ