ಇಂದು ಮಾರುಕಟ್ಟೆಯಲ್ಲಿ ನಿಮ್ಮ ಮುಖ ಹಾಗೂ ದೇಹ ಎರಡರ ತ್ವಚೆಯ ರಕ್ಷಣೆಗೆ ಬೇಕಾಗಿರುವ ಉತ್ತಮ ಶ್ರೇಣಿಯ ಪ್ರಾಡಕ್ಟ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ತೈಲದಿಂದ ಸಿರಮ್ವರೆಗೆ ಹಾಗೂ ಕ್ರೀಮ್‌ಗಳಿಂದ ಬಾಮ್ಗಳವರೆಗೆ ಲೆಕ್ಕವಿಲ್ಲದಷ್ಟು ಆಯ್ಕೆಗಳು ಮಾರುಕಟ್ಟೆಯಲ್ಲಿವೆ. ಆದರೆ, ಕೆಲವೊಮ್ಮೆ ಇಷ್ಟೊಂದು ಮಾಯಿಶ್ಚರಸ್ ಆಯ್ಕೆಗಳಿದ್ದರೂ ಅವುಗಳು ನಿಮ್ಮ ನಿರೀಕ್ಷೆಯನ್ನು ನಿರಾಸೆಗೊಳಿಸಬಹುದು.
ಕೆಲವರು ಹೇಗೆಂದರೆ ಒಂದು ಮುಖದ ಕ್ರೀಮ್ ಖರೀದಿಸಿ, ಅದನ್ನೇ ಮುಖ ಹಾಗೂ ದೇಹದ ತ್ವಚೆಗೆ ಅಪ್ಲೈ ಮಾಡುತ್ತಾರೆ. ಇನ್ನೂ ಕೆಲವರು ತ್ವೆಚೆಗೆ ಹೆಚ್ಚು ಪ್ರಾಮುಖ್ಯತೆ ಕೊಡುವವರು ಟೋನರ್ಗಳು, ಮುಖದ ಸಿರಮ್ಗಳು, ಕ್ರೀಮ್ಗಳಂತಹ ಲೇಯರಿಂಗ್ ಉತ್ಮನ್ನಗಳ ಮೇಲೆ ಹೆಚ್ಚು ವ್ಯಯಿಸುತ್ತಾರೆ. ಕಣ್ಣಿನ ಕ್ರೀಮ್‌ಗಳನ್ನು, ಕಣ್ಣಿನ ಕೆಳಭಾಗದ ಕ್ರೀಮ್‌ಗಳನ್ನು ಕಣ್ಣಿನ ಪ್ರದೇಶದ ಸುತ್ತಲೂ ಅಪ್ಲೈ ಮಾಡುತ್ತಾರೆ.
ನಿಜವಾಗಿಯೂ ಕಣ್ಣಿನ ಕ್ರೀಮ್ ಅಗತ್ಯವಿದೆಯಾ? ಅಥವಾ ನಿಮ್ಮ ಸಾಮಾನ್ಯ ಮುಖದ ಸೀರಮ್ ಆ ಕೆಲಸವನ್ನು ಮಾಡುತ್ತದೆಯೇ? ಕಣ್ಣಿನ ಕ್ರೀಮ್ಗಳೆಂದರೆ ತುಂಬಾ ಇಷ್ಟವೇ? ಅಥವಾ ನಿಮ್ಮ ತ್ವಚೆಯ ದಿನಚರಿಯಲ್ಲಿ ಕಡ್ಡಾಯವಾಗಿ ಅವುಗಳು ಇರಲೇಬೇಕೆ? ಈ ಎಲ್ಲ ಪ್ರಶ್ನೆಗಳಿಗೆ ಮುಂಬೈ ಮೂಲದ ಪ್ರಮುಖ ಸೌಂದರ್ಯ ಮತ್ತು ಚರ್ಮರೋಗ ಚಿಕಿತ್ಸಾಲಯವಾದ ಸ್ಕಿನ್‌ವರ್ಕ್ಸ್‌ನ ಸಂಸ್ಥಾಪಕಿ ಡಾ. ಪ್ರೀತಿ ಶೆಣೈ ಸಲಹೆಗಳನ್ನು ನೀಡಿದ್ದಾರೆ.
ಫೇಸ್ ಸೀರಮ್ ಎಂದರೇನು?:ಮುಖದ ಸೀರಮ್‌ಗಳು ನಿಮ್ಮ ಚರ್ಮವನ್ನು ಪೋಷಿಸುತ್ತದೆ, ಹೈಡ್ರೇಟ್ ಮಾಡುತ್ತದೆ ಮತ್ತು ರಕ್ಷಿಸುತ್ತದೆ. ಅವು ತೆಳ್ಳಗಿನ ಸ್ಥಿರತೆಯನ್ನು ಹೊಂದಿರುವುದರಿಂದ ಚರ್ಮ ತ್ವರಿತವಾಗಿ ಅವುಗಳನ್ನು ಹೀರಿಕೊಳ್ಳುತ್ತವೆ.
ಮುಖದ ಕ್ರೀಮ್‌ಗಳಿಂದ ಪ್ರತ್ಯೇಕಿಸುವ ಫೇಸ್ ಸೀರಮ್‌ಗಳ ಮತ್ತೊಂದು ವೈಶಿಷ್ಟ್ಯವೆಂದರೆ ಅವುಗಳು ಹೆಚ್ಚಿನ ಸಕ್ರಿಯ ಪದಾರ್ಥಗಳಾದ ಸ್ಕಿನ್ ಲೈಟ್ನಿಂಗ್ ಏಜೆಂಟ್‌ಗಳು, ಎಕ್ಸ್‌ಫೋಲಿಯೇಟಿಂಗ್ ಆಸಿಡ್‌ಗಳು, ವಿಟಮಿನ್‌ಗಳು ಇತ್ಯಾದಿಗಳನ್ನು ಹೊಂದಿರುತ್ತವೆ. ಆದ್ದರಿಂದ, ಫೇಸ್ ಕ್ರೀಮ್ಗಿಂತ ಫೇಸ್ ಸೀರಮ್ ಅನ್ನು ಬಳಸುವುದರಿಂದ, ಹೆಚ್ಚು ವೇಗವಾದ ಫಲಿತಾಂಶವನ್ನು ನೀವು ನಿರೀಕ್ಷಿಸಬಹುದು ಎನ್ನುತ್ತಾರೆ ಡಾ ಪ್ರೀತಿ.
ಫೇಸ್ ಸೀರಮ್ ಬಳಕೆ ಉತ್ತಮವೇ?:ನಿಮ್ಮ ಕಣ್ಣುಗಳ ಸುತ್ತಲಿನ ಚರ್ಮವು (ಕಣ್ಣಿನ ರೆಪ್ಪೆಗಳು ಮತ್ತು ಕಣ್ಣುಗಳ ಕೆಳಗೆ) ನಿಮ್ಮ ಮುಖದ ಉಳಿದ ಚರ್ಮಕ್ಕಿಂತ ತೆಳ್ಳಗಿರುತ್ತದೆ ಮತ್ತು ಹೆಚ್ಚು ಸೂಕ್ಷ್ಮವಾಗಿರುತ್ತದೆ. ಆದ್ದರಿಂದ, ಇದು ಸುಕ್ಕುಗಳು, ಸೂಕ್ಷ್ಮ ರೇಖೆಗಳು, ಪಿಗ್ಮೆಂಟೇಶನ್ ಮತ್ತು ಮುಖದ ಇತರ ಪ್ರದೇಶಗಳಿಗಿಂತ ಬೇಗ ವಯಸ್ಸಾದ ಕುರುಹುಗಳನ್ನು ತೋರಿಸುತ್ತದೆ. ಆದ್ದರಿಂದ, ಶುಷ್ಕತೆ ತಡೆಗಟ್ಟಲು ಈ ಚರ್ಮವನ್ನು ತೇವಗೊಳಿಸುವಂತೆ ನೀವು ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕು.