ಬೋಸ್ಟನ್: ಒಂದು ಸಣ್ಣ ಭೇಟಿ ಇಬ್ಬರ ಜೀವನದಲ್ಲಿ ಬಲವಾದ ಸಂಬಂಧ ಏರ್ಪಡಲು ಕಾರಣವಾಗುತ್ತದೆ. ಇಷ್ಟದ ಬ್ರಾಂಡ್ ಟಿ ಶರ್ಟ್, ಒಂದೇ ಜೋಕ್ಗೆ ನಗು, ಊಟದ ಅಭಿರುಚಿ ಹೀಗೆ ತಮ್ಮಂತೆಯೇ ಯೋಚಿಸುವ, ಅಭಿರುಚಿ ಹೊಂದಿರುವ ವ್ಯಕ್ತಿಗಳಿಗೆ ಜನರು ಬಲು ಬೇಗ ಮನಸು ಸೋಲುತ್ತಾರೆ. ಸಾಮಾನ್ಯ ಆಸಕ್ತಿ ವಿಷಯಗಳಿಂದ ವ್ಯಕ್ತಿ ನಡುವೆ ಪ್ರೀತಿ ಮೂಡುತ್ತದೆ. ಇದೇ ಕಾರಣಕ್ಕೆ ಸಮಾನ ಮನಸ್ಥಿತಿಯ ವ್ಯಕ್ತಿಗಳನ್ನು ನಾವು ಹೆಚ್ಚು ಆಯ್ಜೆ ಮಾಡುತ್ತೇವೆ. ಇದೆ ಕೂಡ ಬೇರೊಬ್ಬರಿಗೆ ನಾವು ಆಕರ್ಷಿತರಾಗಲು ಕಾರಣವಾಗಿದೆ. ಈ ಸಂಬಂಧ ಬೋಸ್ಟನ್ ಯುನಿವರ್ಸಿಟಿಯ ಹೊಸ ಅಧ್ಯಯನ ನಡೆಸಿದೆ.
ಅಸಿಸ್ಟಿಂಟ್ ಪ್ರೊಫೆಸರ್ ಚಾರ್ಲಸ್ ಚೂ, ವ್ಯಕ್ತಿಗಳ ನಡುವಿನ ಆರ್ಕಷಣೆ ಮೂಡುವಲ್ಲಿ ಪ್ರಭಾವಶಾಲಿ ಅಂಶಗಳು ಯಾವುದು ಎಂಬುದನ್ನು ಅಧ್ಯಯನ ನಡೆಸಿದ್ದಾರೆ. ಅದರಲ್ಲಿ ಸ್ವಯಂ ಸಾಮರ್ಥ್ಯ ಚಿಂತನೆ ಅನ್ವೇಷಿಸಿದ್ದಾರೆ. ಇದು ಆಳವಾದ ನಂಬಿಕೆ ಅಥವಾ ಅವರು ಯಾರು ಏನು ಎಂಬುದನ್ನು ಪ್ರಮುಖವಾದ ಅಂಶವಾಗುತ್ತದೆ.
ಇಷ್ಟ ಪಟ್ಟವರ ಮುಂದೆ ಅಭಿಪ್ರಾಯ ಹಂಚಿಕೆ:ಇಷ್ಟ ಪಡುವ ಮತ್ತು ಇಷ್ಟಪಡದಿರುವ ಅಂಶಗಳು ನಮ್ಮನ್ನು ಹೆಚ್ಚು ಪ್ರೇರೆಪಿಸುತ್ತದೆ. ಯಾರನ್ನಾದರೂ ನಂಬಿದಾಗ ನೀವು ಕೂಡ ಅದನ್ನೇ ನಂಬುತ್ತೀರ. ಯಾರಾದರೂ ಅದೇ ರೀತಿ ಆಸಕ್ತಿ ವ್ಯಕ್ತಿಯನ್ನು ಪತ್ತೆ ಮಾಡಿದಾಗ ಅವರು ಜಾಗತಿಕ ವಿಚಾರ ದೃಷ್ಟಿಕೋನ ಹಂಚಿಕೊಳ್ಳಲು ಮುಂದಾಗುತ್ತದೆ. ಈ ಸಂಬಂಧ ಜರ್ನಲ್ ಆಫ್ ಪರ್ಸನಾಲಿಟಿ ಅಂಡ್ ಸೋಷಿಯಲ್ ಸೈಕಾಲಜಿ ಆಫ್ ದಿ ಅಮೆರಿಕನ್ ಸೈಕಾಲಾಜಿಕಲ್ ಅಸೋಸಿಯೇಷನ್ನಲ್ಲಿ ಪ್ರಕಟಿಸಲಾಗಿದೆ.
ಆಕರ್ಷಣೆಯ ಮೂಲಭೂತ ಸಾಮಾನ್ಯತೆ ಎಂಬುದು ಇಬ್ಬರೂ ವ್ಯಕ್ತಿಗಳು ಒಂದೇ ರೀತಿ ಚಿಂತಿಸಿದಾಗ, ಯಾರನ್ನು ಸಂಪರ್ಕಿಸುತ್ತೇವೆ ಎಂಬುದರ ಮೇಲೆ ನಿಯಂತ್ರಿತವಾಗುತ್ತದೆ. ನಮ್ಮಂತೆ ಚಿಂತನೆ ಮಾಡದೇ ಇರುವ ಜನರನ್ನು ನಾವು ಇಷ್ಟಪಡುವುದಿಲ್ಲ. ಇದು ರಾಜಕೀಯ, ಬ್ಯಾಂಡ್, ಬುಕ್ ಅಥವಾ ಟಿವಿ ಕಾರ್ಯಕ್ರಮಗಳಂತ ಚಿಕ್ಕ ವಿಷಯಗಳಲ್ಲೂ ಆಗಬಹುದು ಎಂದಿದ್ದಾರೆ.
ನಾವು ಎಲ್ಲರೂ ಸಂಕೀರ್ಣವಾಗಿದ್ದೇವೆ. ಆದರೆ ನಮ್ಮ ಭಾವನೆ, ಚಿಂತನೆಯಲ್ಲಿ ಸಂಪೂರ್ಣ ಪರಿಜ್ಞಾನ ಹೊಂದಿದ್ದೇವೆ. ಕೆಲವೊಮ್ಮೆ ಕೆಲವರ ಮನಸ್ಸು ನಮಗೆ ರಹಸ್ಯವಾಗುತ್ತದೆ. ಇದು ಕೂಡ ನಮ್ಮಂತೆಯೇ ಇರುವ ಜನರನ್ನು ಆಕರ್ಷಣೆ ಮಾಡುವ ಪ್ರಮುಖ ಅಂಶವಾಗಿದೆ. ಇದು ಕೆಲವೊಮ್ಮೆ ಅನಗತ್ಯ ಊಹೆಗಳಿಗೆ ನಮ್ಮನ್ನು ಈಡು ಮಾಡುತ್ತವೆ.