ಟೊರಾಂಟೋ( ಕೆನಡ): ನಮ್ಮ ಅಕ್ಕ- ಪಕ್ಕದ ಮನೆಯಲ್ಲಿ ಆಗುವ ಸದ್ದುಗಳು ಬಹಳಷ್ಟು ಕಿರಿಕಿರಿ ಮೂಡಿಸುತ್ತವೆ. ಅದರಲ್ಲೂ ಫ್ಲಾಟ್ಗಳು ಆಥವಾ ಬಹು ಅಂತಸ್ತಿನ ನಿವಾಸಿಗಳಿಗೆ ಈ ಸದ್ದಿನಿಂದ ಆಗುವ ತೊಂದರೆ ಹೆಚ್ಚು. ಇದು ಶಬ್ಧದ ಪರಿಣಾಮ ಎನ್ನಲಾಗುವುದು.
ಶಬ್ಧದ ಪರಿಣಾಮದಿಂದ ಉಂಟಾಗುವ ಕಿರಿಕಿರಿ ಕುರಿತು ನಡೆಸಿರುವ ಸಂಶೋಧನೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಅನೇಕ ಸರಣಿ ವಿನ್ಯಾಸದ ಪ್ರಯೋಗ ನಡೆಸಲಾಗಿದ್ದು, ಅಕ್ಕ- ಪಕ್ಕದ ಶಬ್ದದಿಂದಾಗುವ ಕಿರಿಕಿರಿ ಅನುಭವಿಸಲಾಗಿದೆ. ಅನಗತ್ಯವಾದ ಶಬ್ದಗಳು ಹೃದಯ ರಕ್ತನಾಳದ ಸಮಸ್ಯ ಮತ್ತು ನಿದ್ರೆಗೆ ಭಂಗ ತರುತ್ತವೆ. 2020ಕ್ಕಿಂತ ಮುಂಚೆ ಮನೆಯಿಂದಲೇ ಕೆಲಸ ಮಾಡುವ ಸಂಸ್ಕೃತಿ ಹೆಚ್ಚುವುದಕ್ಕೆ ಮೊದಲು ನಗರದಲ್ಲಿ ಜನ ಸಂಖ್ಯೆ ಪ್ರಮಾಣ ಹೆಚ್ಚಿದ್ದು, ಆಗ ಈ ವಿಷಯ ಹೆಚ್ಚು ವಾಸ್ತವಿಕವಾಗಿದೆ ಎಂಬುದಾಗಿ ಸಂಶೋಧಕ ಮುಲ್ಲರ್ ಟರ್ಪೆ ತಿಳಿಸಿದ್ದಾರೆ.
ಪ್ರಮಾಣಿತ ಪ್ರಯೋಗಗಳ ಮಾಪನ ಮತ್ತು ಶಬ್ದದ ಪ್ರಭಾದ ಮೂಲಗಳ ಮೇಲಿನ ಕಿರಿಕಿರಿ ನಡುವಿನ ಸಂಬಂಧವನ್ನು ತಿಳಿಯಲು ಅಂತಾರಾಷ್ಟ್ರೀಯ ಸಂಶೋಧನಾ ತಂಡ ಮುಂದಾಯಿತು ಈ ವೇಳೆ, ಅವರಿಗೆ ಲೀವಿಂಗ್ ರೂಂ ಒಂದನ್ನು ನೀಡಲಾಯಿತು. ಈ ವೇಳೆ, ವಸ್ತುಗಳನ್ನು ಬೀಳಿಸುವುದು, ಜನರು ನಡೆದಾಡುವ ಶಬ್ಧವನ್ನು ವಿವಿಧ ಹಿನ್ನೆಲೆ ತಂತ್ರ ಮತ್ತು ವರ್ಚುಯಲ್ ರಿಯಾಲಿಟಿ ಮೂಲಕ ದಾಖಲಿಸಲಾಯಿತು.