ಬೆಂಗಳೂರು: ಮಳೆಗಾಲದಲ್ಲಿ ಕೆಲವು ಮಂದಿಗೆ ಕೀಲು ನೋವಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಈ ಅವಧಿಯಲ್ಲಿ ನೋವು ಉಲ್ಬಣಗೊಳ್ಳಲು ನಿಖರವಾದ ಕಾರಣ ತಿಳಿದಿಲ್ಲ. ಸಂಶೋಧನೆಗಳು ಕೂಡ ಈ ಬಗ್ಗೆ ಹೆಚ್ಚು ಸ್ಪಷ್ಟವಾಗಿ ತಿಳಿಸಿಲ್ಲ. ಮಳೆಗಾಲದಲ್ಲಿ ಈ ನೋವು ಹೆಚ್ಚು ಎಂದು ಕೆಲವು ಅಧ್ಯಯನಗಳು ವಾದಿಸಿದರೆ, ಮತ್ತೆ ಕೆಲವು ಅಧ್ಯಯನಗಳು ಈ ಆರೋಪವನ್ನು ತಳ್ಳಿಹಾಕುತ್ತದೆ. ಆದರೆ, ತಜ್ಞರ ಪ್ರಕಾರ, ಪರಿಸರದಲ್ಲಿನ ಬದಲಾವಣೆಗಳು ಕೀಲು ನೋವಿಗೆ ಪ್ರಮುಖ ಕಾರಣವಾಗಿದೆ.
ಮಳೆಗಾಲದಲ್ಲಿ ಪರಿಸರದಲ್ಲಿನ ವಾಯುವಿನ ಒತ್ತಡ ಕಡಿಮೆಯಾಗುತ್ತದೆ. ದೇಹದಲ್ಲಿನ ಗಾಳಿಯ ಒತ್ತಡವೂ ಈ ಋತುಮಾನದಲ್ಲಿ ಕಡಿಮೆಯಾಗುತ್ತದೆ. ಫಲಿತಾಂಶವಾಗಿ ಕೀಲುಗಳ ಸುತ್ತಲು ಇರುವ ಸ್ನಾಯು, ಅಸ್ಥಿರಜ್ಜು ಮತ್ತು ಇನ್ನಿತರೆ ಟಿಶ್ಯೂಗಳ ಮೇಲೆ ಒತ್ತಡ ಬೀಳುತ್ತದೆ. ಇದು ಕೀಲು ನೋವಿಗೆ ಕಾರಣವಾಗುತ್ತದೆ. ಸಂಧಿವಾತದೊಂದಿಗೆ ಬಳಲುತ್ತಿರುವ ಮಂದಿ ಅಥವಾ ಇತರೆ ದೀರ್ಘ ನೋವಿನ ಅನುಭವ ಹೊಂದಿರುವವರು ಇದರಿಂದ ಕಿರಿಕಿರಿ ಅನುಭವಿಸುತ್ತಾರೆ. ವಾತಾವರಣ ಸರಿ ಹೋದಂತೆ ಗಾಳಿಯ ಒತ್ತಡವೂ ಹೊಂದಾಣಿಕೆಯಾಗುತ್ತದೆ. ಇದರಿಂದ ನೋವು ಕೂಡ ಕಡಿಮೆಯಾಗುತ್ತದೆ. ಕೀಲು ನೋವಿಗೆ ಇದು ಮಾತ್ರವಲ್ಲದೇ, ಇನ್ನಿತರೆ ಕಾರಣಗಳು ಸಹ ಇವೆ.
ಮಳೆ ವಾತಾವರಣದಿಂದ ಮನೆಯಿಂದ ಹೊರ ಹೋಗಲು ಸಾಧ್ಯವಾಗುವುದಿಲ್ಲ. ಇದರಿಂದ ಮನೆಯಲ್ಲಿಯೇ ದೀರ್ಘಕಾಲ ಇರಬೇಕಾಗುತ್ತದೆ. ಮನೆಯಲ್ಲೇ ದೀರ್ಘಕಾಲ ಕುಳಿತಿರುವ ಕಾರಣ ಸ್ನಾಯು ಮತ್ತು ಕೀಲುಗಳು ಜಡತ್ವಗೊಂಡು ನೋವು ಹೆಚ್ಚುತ್ತದೆ.
ಮೋಡ ಕವಿದ ವಾತಾವರಣದಿಂದ ನಿಮ್ಮ ಮನಸ್ಥಿತಿ ಕೂಡ ಬದಲಾಗಬಹುದು. ಇದರಿಂದ ನಿಮ್ಮ ಗಮನ ನೋವಿನಂತಹ ನಕಾರಾತ್ಮಕ ಅಂಶಗಳಿಗೆ ಹೆಚ್ಚು ಹೋಗುತ್ತದೆ. ನೋವಿನ ಬಗ್ಗೆ ಹೆಚ್ಚು ಯೋಚಿಸಿದಂತೆ ಅದು ಮತ್ತಷ್ಟು ಕೆಟ್ಟದಾಗಬಹುದು.
ಅನೇಕ ಮಂದಿಗೆ ಮಳೆ ಬಂದರೆ ನೋವು ಹೆಚ್ಚಿದಂತೆ ಎಂಬ ಅಂಶ ತಲೆಯಲ್ಲಿ ಹೊಕ್ಕಿರುತ್ತದೆ. ಅವರ ಮನಸ್ಥಿತಿ ಅನುಸಾರವಾಗಿ ಕೂಡ ಅನೇಕ ಬಾರಿ ನೋವು ಹೆಚ್ಚುತ್ತದೆ.
ನೋವು ಕಡಿಮೆ ಮಾಡುವುದು ಹೇಗೆ?ಸಂಶೋಧನೆಗಳು ಮಳೆಗಾಲದಲ್ಲಿ ಕೀಲು ನೋವು ಹೆಚ್ಚಿಸುತ್ತದೆ ಎಂಬುದನ್ನು ಸಾಬೀತು ಮಾಡಲಿ, ಬಿಡಲಿ, ನೀವು ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದು ಮುಖ್ಯವಾಗುತ್ತದೆ. ಹವಾಮಾನ ಬದಲಾಗುತ್ತಿದ್ದಂತೆ ಈ ಬಗ್ಗೆ ಕ್ರಮವಹಿಸಿ.