ಲಂಡನ್: ಲೈಂಗಿಕ ದೌರ್ಜನ್ಯದ ಬಳಿಕ ನ್ಯಾಯ ಕೇಳುವುದಕ್ಕಿಂತ ಹೆಚ್ಚಾಗಿ ರಕ್ಷಣೆ ಮುಖ್ಯವಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಳಿಕ ಹೆಚ್ಚಿನ ಜನರು ದೂರು ನೀಡಲು ನ್ಯಾಯ ಕೇಳಲು ಮುಂದಾಗುವುದಿಲ್ಲ. ಯಾಕೆ ತಕ್ಷಣಕ್ಕೆ ಜನರು ಮುಂದೆ ಬರುವುದಿಲ್ಲ. ಅಥವಾ ತಮಗೆ ಬೇಕಾದ ನ್ಯಾಯದ ವಿರುದ್ಧ ಹೋರಾಡುವುದಿಲ್ಲ ಎಂಬುದರ ಕುರಿತು ಎರಡು ಅಧ್ಯಯನಗಳಲ್ಲಿ ನಡೆಸಲಾಗಿದೆ.
ಬ್ರಿಟನ್ನ ಎಕ್ಸೆಟೆರ್ ಯುನಿರ್ವಸಿಟಿ ತ್ತು ಡೆನ್ಮಾರ್ಕ್ನ ಕೂಪನ್ಹೆಗನ್ ಯುನಿವರ್ಸಿಟಿ ಈ ಅಧ್ಯಯನ ನಡೆಸಿದೆ. ಲೈಂಗಿಕ ಕಿರುಕುಳವನ್ನು ಅನುಭವಿಸಿದ ಜನರಿಂದ ಗೌಪ್ಯ ಆನ್‌ಲೈನ್ ಸಮೀಕ್ಷೆಗಳನ್ನು ನಡೆಸಲಾಗಿದೆ. ಈ ವೇಳೆ, ಅವರು ನ್ಯಾಯಕ್ಕಾಗಿ ಹೋರಾಡುವ ಸಂಬಂಧ ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿಸಲಾಗಿದೆ.
ಸೈಕಲಾಜಿ ಆಫ್ ವುಮೆನ್ನ ತ್ರೈಮಾಸಿಕದಲ್ಲಿ ಈ ಅಧ್ಯಯನ ಪ್ರಕಟಿಸಲಾಗಿದೆ. ಇದರಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯ ಅಗತ್ಯತೆ ಮತ್ತು ಅವರ ಅಗತ್ಯತೆ ಪೂರೈಸಲು ಅನುಸರಿಸುವ ಇತರ ಕ್ರಮಗಳ ಬಗ್ಗೆ ವರದಿ ಮಾಡಲಾಗಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಗೆ ಪೊಲೀಸರ ದೂರಿನಂತಹ ಔಪಚಾರಿಕ ಕ್ರಿಯೆಗಿಂತ ರಕ್ಷಣೆ, ನಿಯಂತ್ರಣ ಮತ್ತು ಸಾಮಾಜಿಕ ಬೆಂಬಲ ಅಗತ್ಯವಾಗಿದೆ. ಮತ್ತೆ ಕೆಲವು ಮಂದಿ ಇದಕ್ಕೆ ವ್ಯತಿರಿಕ್ತವಾಗಿದ್ದು, ಲೈಂಗಿಕ ದೌರ್ಜನ್ಯ ಎದುರಿಸಿದಾಗ ಅದರ ವಿರುದ್ಧ ಔಪಚಾರಿಕವಾದ ಬಲವಾದ ಅಗತ್ಯತೆ ಮತ್ತು ನಿರೀಕ್ಷೆ ತೆಗೆದುಕೊಳ್ಳುವುದನ್ನು ನಿರೀಕ್ಷಿಸುತ್ತಾರೆ.
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂದರ್ಭದಲ್ಲಿ ಆ ವ್ಯಕ್ತಿ ಮುಂದೆ ಬಂದು ತಕ್ಷಣಕ್ಕೆ ಈ ಸಂಬಂಧ ಔಪಚಾರಿಕ ವರದಿ ಸಲ್ಲಿಸುವುದು ನಂಬಲಾಗಿದೆ. ಆದರೆ, ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿ, ಈ ಸಂಬಂಧ ಔಪಚಾರಿಕ ದೂರಿಗೆ ಮುಂದಾಗುವುದಿಲ್ಲ. ಇದರಲ್ಲಿ ಕೆಲವರು ದೂರು ಸಲ್ಲಿಸಿದರು ಅವರು ಘಟನೆ ನಡೆದ ತಕ್ಷಣಕ್ಕೆ ಬರುವುದಿಲ್ಲ. ಅವರು ತಡವಾಗಿ ಈ ಸಂಬಂಧ ದೂರು ಸಲ್ಲಿಕೆ ಮಾಡುತ್ತಾರೆ ಎಂಬುದು ತಿಳಿದು ಬಂದಿದೆ ಎಂದು ಪ್ರೊ ಮ್ಯಾನುಯಲ್ ಬರ್ರೆಟೊ ತಿಳಿಸಿದ್ದಾರೆ.
ದೂರು ಸಲ್ಲಿಕೆ ಬಳಿಕ ಪೊಲೀಸರು ಮತ್ತು ಇತರ ಅಧಿಕಾರಿಗಳೊಂದಿಗೆ ಕಾರ್ಯವಿಧಾನದ ಅಡೆತಡೆಗಳ ಮೇಲೆ ಕೇಂದ್ರೀಕರಿಸುತ್ತಾರೆ, ಆದರೆ ಲೈಂಗಿಕ ಕಿರುಕುಳವನ್ನು ಅನುಭವಿಸಿದ ವ್ಯಕ್ತಿಯ ನೈಜ ಅಗತ್ಯಗಳಿಗೆ ಕಡಿಮೆ ಗಮನ ನೀಡಲಾಗುತ್ತದೆ ಎಂದು ಬರ್ರೆಟೊ ತಿಳಿಸಿದ್ದಾರೆ.