ಕರ್ನಾಟಕ

karnataka

ETV Bharat / sukhibhava

ಗುಂಗುರು ಕೂದಲಿಗೆ ಕಾರಣ ಏನು? ಕೂದಲಿನ ವಿನ್ಯಾಸದ ಬಗ್ಗೆ ತಜ್ಞರು ಹೇಳುವುದೇನು? - ಕೂದಲಿನ ವಿನ್ಯಾಸ ಮತ್ತು ಆರೈಕೆ

ಪ್ರತಿಯೊಬ್ಬರ ಸೌಂದರ್ಯವನ್ನು ಹಿಮ್ಮಡಿಗೊಳಿಸುವ ಕೂದಲಿನ ವಿನ್ಯಾಸ ಮತ್ತು ಆರೈಕೆ ಬಗ್ಗೆ ತಿಳಿಯುವುದ ಅತ್ಯವಶ್ಯಕವಾಗಿದೆ.

why-does-your-hair-curl-in-the-summer-a-chemist-explains-the-science-behind-hair-structure
why-does-your-hair-curl-in-the-summer-a-chemist-explains-the-science-behind-hair-structure

By

Published : Aug 12, 2023, 4:45 PM IST

ಗುಂಗುರು ಕೂದಲು ನಿಮಗಿದ್ದರೆ ಪ್ರತಿ ದಿನ ಯಾವ ಹೇರ್​ ಸ್ಟೈಲ್​ ಮಾಡಬೇಕು ಎಂಬುದು ನಿಮಗೆ ಚೆನ್ನಾಗಿ ತಿಳಿದಿರುತ್ತದೆ. ಒಂದು ವೇಳೆ ನೈಸರ್ಗಿಕವಾಗಿ ಗುಂಗುರು ಕೂದಲು ಹೊಂದಿಲ್ಲ ಎಂದರೂ ನಿಮಗೆ ಅದನ್ನು ಹೇಗೆ ಮಾಡಬೇಕು ಎಂದು ತಿಳಿದಿರುತ್ತದೆ. ಗುಂಗುರು ಕೂದಲಿನವರು ಕೂದಲಿನ ಸರಿಯಾದ ಆರೈಕೆ ಮಾರ್ಗವನ್ನು ಉತ್ತಮವಾಗಿ ಅರ್ಥ ಮಾಡಿಕೊಂಡಿದ್ದಾರೆ. ಇನ್ನೂ ಅನೇಕ ಮಂದಿ ನೈಸರ್ಗಿಕವಾಗಿ ಈ ರೀತಿ ಗುಂಗುರು ಕೂದಲು ಹೊಂದಲು ಕಾರಣವಾಗುವ ಅಂಶ ಯಾವುದು ಎಂದು ಪತ್ತೆ ಮಾಡುತ್ತಿದ್ದರೆ, ಅದಕ್ಕೆ ಉತ್ತರ ಅವರ ಕೂದಲಿನಲ್ಲಿನ ಮಾಲೆಕ್ಯೂಲರ್​. ಈ ಮಾಲೆಕ್ಯೂಲರ್​ ವಿನ್ಯಾಸದಿಂದ ಕೆಲವರು ಗುಂಗುರು ಕೂದಲು ಪಡೆದರೆ, ಮತ್ತೆ ಕೆಲವರು ನೇರವಾದ ಕೂದಲು ಪಡೆಯುತ್ತಾರೆ.

ಗುಂಗುರು ಕೂದಲಿಗೆ ಕಾರಣ ಏನು

ಕೂದಲ ವಿನ್ಯಾಸ: ಕೂದಲುಗಳು ನಮ್ಮ ಚರ್ಮದ ಮೇಲ್ಮೆ ಮೇಲೆ ಬೆಳೆಯುತ್ತದೆ. ಆದರೆ ಚರ್ಮದ ಫೋರ್ಸ್​ಗಳ ಸಹಾಯದಿಂದ ನೀವು ಉತ್ತಮ ಕೂದಲು ಹೊಂದಿದ್ದೀರಾ ಅಥವಾ ಕೆಟ್ಟ ಕೂದಲು ಹೊಂದಿದ್ದೀರಾ ಎಂಬುದು ತಿಳಿಯುತ್ತದೆ.

ಕೂದಲಿನ ಪ್ರಮುಖ ಪದರದಲ್ಲಿ ಮೆಡುಲ್ಲಾ ಇರುತ್ತದೆ. ಇದು ಕೂದಲಿನ ಮಾಶ್ಚರೈಸರ್​ ಹೊಂದಿರುತ್ತದೆ. ಈ ಪದರವು ದುರ್ಬಲವಾಗಿರುತ್ತದೆ. ದಪ್ಪ ಅಥವಾ ದಟ್ಟ ಕೂದಲು ಮಾತ್ರ ಇದನ್ನು ಹೊಂದಿರುತ್ತದೆ. ತೆಳು ಕೂದಲು ಈ ಪದರವನ್ನು ಹೊಂದಿರುವುದಿಲ್ಲ.

ಗುಂಗುರು ಕೂದಲಿಗೆ ಕಾರಣ ಏನು

ಇದರ ನಂತರದಲ್ಲಿ ಕಾರ್ಟೆಕ್ಸ್ (ತೊಗಟೆ)​ ಬರುತ್ತದೆ. ಇದರಿಂದ ಅನೇಕ ಕೂದಲು ಮೇಲೆ ಏಳುತ್ತದೆ. ಕಾರ್ಟೆಕ್ಸ್​ ಸುರಳಿ ಆಕಾರದ ಪ್ರೋಟಿನ್​ ಆಗಿದೆ. ಸಿಲಿಂಡರಾಕಾರದ ಬಂಡಲ್‌ನಲ್ಲಿ ಸಮಾನಾಂತರ ಸಾಲುಗಳಲ್ಲಿ ಇರುವ ಅಣುಗಳು ಇರುತ್ತವೆ. ಇದು ಬಂಡಲ್​ ರೀತಿಯ ಆಜಾರದಲ್ಲಿದ್ದು ಕೂದಲಿನ ಪೊಲಿಕ್ಲೆಗೆ ನಿರ್ಮಿತವಾಗಿರುತ್ತದೆ. ಇಲ್ಲಿಂದ ಕೂದಲಿನ ಬೆಳವಣಿಗೆ ನಡೆಯುತ್ತದೆ.

ಕೋಶಕ ಹೇಗೆ ಕೂದಲು ಬೆಳೆಯುತ್ತದೆ ಎಂಬುದು ಪ್ರೋಟಿನ್​ ವಿತರಣೆ ಮೇಲೆ ಪ್ರಭಾವಿತವಾಗಿದೆ. ಹೀಗಾಗಿ ಕೋಶಗಳು ನೇರವಾದ ಕೂದಲಿನ ರಚನೆಗೆ ಕಾರಣವಾಗುತ್ತದೆ. ಕರ್ಲ್​ ಪೊಲಿಕ್ಲೆ ಗುಂಗುರು ಕೂದಲನ್ನು ಉತ್ಪಾದಿಸುತ್ತದೆ. ಇದರಲ್ಲಿ ಕಡಿಮೆ ಪ್ರಮಾಣದಲ್ಲಿ ಅಂಕುಡೊಂಕಿನ ಪ್ರೋಟಿನ್​ಗಳು ಇರುತ್ತದೆ. ಈ ಕಾರ್ಟೆಕ್ಸ್​ನಲ್ಲಿ ಆಕಾರ, ಆಕೃತಿ ಮತ್ತು ದಪ್ಪದಲ್ಲಿ ವಂಶವಾಹಿನಿ ಕೋಡ್​ ಕೂಡ ಪ್ರಮುಖ ಪಾತ್ರ ವಹಿಸುತ್ತದೆ.

ಗುಂಗುರು ಕೂದಲಿಗೆ ಕಾರಣ ಏನು

ಕಡೆಯದಾಗಿ ಹೊರ ಬರುವ ಕೂದಲಿನ ಪದರವೇ ಕ್ಯೂಟಿಕಲ್​. ಈ ಕ್ಯೂಟಿಕಲ್​ ಅಂದರೆ ಹೊರ ಪದರ ಇದರ ಪ್ರಮುಖ ಕೆಲಸ ಕಾರ್ಟಿಕ್ಸ್​​ ರಕ್ಷಣೆ ಮಾಡುವುದು. ಆದರೆ, ಈ ಕ್ಯೂಟಿಕಲ್​​ಗಳು ಸುಲಭವಾಗಿ ಹಾನಿಯಾಗುತ್ತದೆ. ಇದರಿಂದ ಮಾಶ್ಚರೈಸರ್​ ನಷ್ಟ, ಪರಿಸರದ ಹಾನಿಗೆ ಕೂದಲು ತೆರೆದು ಕೊಳ್ಳುತ್ತದೆ. ಕೂದಲಿಗೆ ರಾಸಾಯನಿಕ ಬಳಕೆ, ಗಾಳಿ ಅಥವಾ ಶಾಖದ ಬಳಕೆ ಸೇರಿದಂತೆ ಹಲವು ಕಾರಣದಿಂದ ಇದು ಆಗಬಹುದು.

ಬೇಸಿಗೆಯಲ್ಲಿ ಕೂದಲು

ಕೂದಲಿನ ಪ್ರೋಟಿನ್​ಗಳಲ್ಲಿ ಹಲವು ಶಾಶ್ವತವಾದ ರಾಸಾಯನಿಕ ಜೋಡಣೆಯನ್ನು ಹೊಂದಿರುತ್ತದೆ. ಕೇವಲ ಪರ್ಮ್ಸ್​​ ಅಥವಾ ಸ್ಟ್ರೈಟ್ನಿಂಗ್​ ಇದರ ರಾಸಾಯನಿಕ ಚಿಕಿತ್ಸೆಯನ್ನು ಬದಲು ಮಾಡಬಹುದು. ಇದರ ಹೊರತಾಗಿ ನೈಸರ್ಗಿಕವಾಗಿ ಕಾರ್ಟೆಕ್ಸ್​​ನಲ್ಲಿನ ಪ್ರೋಟಿನ್​ ಮಾಲೆಕ್ಯೂಲ್ಸ್​ ಅನ್ನು ಹಿಡಿದಡಬಹುದು ಅದೆ ಹೈಡ್ರೋಜನ್​ ಬಾಂಡಿಂಗ್​

ಕ್ಯೂಟಿಕಲ್​ ಆರೋಗ್ಯವಾಗಿದ್ದಾಗ ಅದು ಕಾರ್ಟೆಕ್ಸ್​ ಅನ್ನು ರಕ್ಷಣೆ ಮಾಡುತ್ತದೆ. ನಿಮ್ಮ ಕೂದಲನ್ನು ಪರಿಸರದ ಹಾನಿಗೆ ದುರ್ಬಲವಾಗದಂತೆ ಕಡಿಮೆ ಮಟ್ಟದಲ್ಲಿ ತಡೆಯತ್ತದೆ. ಜೊತೆಗೆ ಕೆಳಗಿನ ಹಂತದ ಆರೋಗ್ಯಯುತ ಕ್ಯೂಟಿಕಲ್​ಗಳು ಕಾರ್ಟೆಕ್ಸ್​​ಗೆ ಸರಿಯಾದ ಮಾಶ್ಚರೈಸರ್​ ನೀಡುತ್ತವೆ.

ಈ ಕ್ಯೂಟಿಕಲ್​ ಹಾನಿಯಾಗುವಲ್ಲಿ ಪ್ರಮುಖ ಕಾರಣ ಹೀಟ್​ ಮತ್ತು ಸ್ಟೈಲಿಂಗ್​. ಜೊತೆಗೆ ರಾಸಾಯನಿಕ ಚಿಕಿತ್ಸೆ, ಬ್ರಶಿಂಗ್​, ಸೂರ್ಯ ಮತ್ತು ಗಾಳಿಗಳು ಇದರ ಹಾನಿಯಲ್ಲಿ ಪ್ರಮುಖವಾಗಿದೆ. ಅನೇಕ ಬಾರಿ ಪರಿಸರ ಹಾನಿಗಳಿಂದ ರಕ್ಷಣೆ ಪಡೆಯುವುದು ಅಸಾಧ್ಯವಾಗುತ್ತದೆ. ಈ ಹಿನ್ನೆಲೆ ಕೂದಲ ಬುಡವನ್ನು ಸ್ವಚ್ಛವಾಗಿ ಇರಿಸುವ ಮೂಲಕ ಆರೋಗ್ಯಯುತ ಕ್ಯೂಟಿಕಲ್ಸ್​ ಅನ್ನು ಕಾಯ್ದುಕೊಳ್ಳಬೇಕು. ಇದಕ್ಕೆ ಸರಿಯಾದ ಹೇರ್​ ಮಾಶ್ಚರೈಸರ್​ ಉತ್ಪನ್ನವನ್ನು ಬಳಕೆ ಮಾಡುತ್ತ ಅದರ ಆರೋಗ್ಯ ನಿರ್ವಹಣೆ ಮಾಡಬೇಕು. ಎಣ್ಣೆ ಮತ್ತು ಮಾಶ್ಚರೈಸರ್​ ಚಿಕಿತ್ಸೆಗಳು ಹಾನಿಯಾದ ಕ್ಯೂಟಿಕಲ್​ ಅನ್ನು ಸರಿಪಡಿಸುತ್ತದೆ. ಈ ಹಿನ್ನೆಲೆ ಕೂದಲು ಮತ್ತು ಅದರ ಸರಿಯಾದ ಚಿಕಿತ್ಸೆಯನ್ನು ಆಯ್ಕೆ ಮಾಡಿದ, ಅದರ ಮೇಲೆ ಆರ್ದ್ರತೆ ಬೀರುವ ಪರಿಣಾಮವನ್ನು ತಪ್ಪಿಸಬೇಕು.

ಇದನ್ನೂ ಓದಿ:ಸ್ಕಿನ್​ ಫ್ಲೋಡಿಂಗ್​ ಎಂದರೇನು ಗೊತ್ತಾ? ಚರ್ಮದ ಕಾಳಜಿಗೆ ಇದು ಅವಶ್ಯಕ

ABOUT THE AUTHOR

...view details