ಕರ್ನಾಟಕ

karnataka

ETV Bharat / sukhibhava

Covid Origin: ಕೋವಿಡ್​​ ಪ್ರಯೋಗಾಲಯದಿಂದ ಸೋರಿಕೆಯಾಗಿದೆ ಎಂಬ ಸಿದ್ದಾಂತ ತಳ್ಳಿ ಹಾಕಬೇಡಿ: ಟಾಪ್​ ವೈರಾಲಾಜಿಸ್ಟ್​​

ಜಾಗತಿಕವಾಗಿ ಅಪಾರ ಸಾವು ನೋವಿಗೆ ಕಾರಣವಾಗಿ, ದೀರ್ಘಾವಧಿ ಪರಿಣಾಮ ಬೀರುತ್ತಿರುವ ಕೋವಿಡ್​ ಮೂಲದ ಬಗ್ಗೆ ಇನ್ನು ಸ್ಪಷ್ಟತೆ ಸಿಕ್ಕಿಲ್ಲ.

WHO should not have dismissed Covid lab leak theory
WHO should not have dismissed Covid lab leak theory

By

Published : Jun 22, 2023, 10:41 AM IST

ಜಗತ್ತನ್ನೇ ತಲ್ಲಣಗೊಳಿಸಿದ್ದ ಕೋವಿಡ್​ 19 ಸಾಂಕ್ರಾಮಿಕ ಸೋಂಕಿನ ಮೂಲದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಅನೇಕರು ವಾದಿಸುವಂತೆ ಇದು ಚೀನಾದ ಲ್ಯಾಬ್​ನಿಂದ ಸೋರಿಕೆ ಆಗಿದೆ ಎಂದಿದ್ದಾರೆ. ಆದರೆ, ಈ ವಾದವನ್ನು ಚೀನಾ ತಳ್ಳಿ ಹಾಕಿದೆ. ಈ ನಡುವೆ ವಿಶ್ವ ಸಂಸ್ಥೆಯ ಆರೋಗ್ಯ ಸಂಸ್ಥೆಯ ಆರೋಗ್ಯ ಮಂಡಳಿ ಸಮಿತಿಯ ಟಾಪ್​ ವೈರಾಲಾಜಿಸ್ಟ್​ ಒಬ್ಬರಾದ ಪ್ರೊ ಮರಿಯನ್​ ಕೂಪ್​ಮ್ಯಾನ್ಸ್​​, ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್​ ಸೋಂಕು ಪ್ರಯೋಗಾಲಯದಿಂದ ಸೋರಿಕೆಯಾಗಿರುವ ಸಿದ್ದಾಂತವನ್ನು ತಳ್ಳಿ ಹಾಕಬಾರದು ಎಂದಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ 2021ರಲ್ಲಿ ಕೋವಿಡ್​ ಸೋಂಕು ಪ್ರಯೋಗಾಲಯದಿಂದ ಸೋರಿಕೆಯಾಗಿರುವುದು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಈ ಸಾಂಕ್ರಾಮಿಕ ರೋಗದ ಮೂಲದ ಪತ್ತೆ ಮಾಡುವ ಸಂಬಂದ ಡಬ್ಲೂಎಚ್​ಒ ನೇಮಿಸಿದ್ದ 12 ಜನರ ತಂಡದ ಸದಸ್ಯರಲ್ಲಿ ನೆದರ್‌ಲ್ಯಾಂಡ್‌ನ ರೋಟರ್‌ಡ್ಯಾಮ್‌ನಲ್ಲಿರುವ ಎರಾಸ್ಮಸ್ ವೈದ್ಯಕೀಯ ಕೇಂದ್ರದಲ್ಲಿ ವೈರೋಸೈನ್ಸ್ ವಿಭಾಗದ ಮುಖ್ಯಸ್ಥರಾಗಿರುವ ಕೂಪ್‌ಮ್ಯಾನ್ಸ್ ಕೂಡ ಒಬ್ಬರಾಗಿದ್ದರು.

"ಫೀವರ್: ದಿ ಹಂಟ್ ಫಾರ್ ಕೋವಿಡ್ ಒರಿಜಿನ್" ಎಂಬ ಬಿಬಿಸಿ ಪಾಡ್​ಕ್ಯಾಸ್ಟ್​ನಲ್ಲಿ ಮಾತನಾಡಿರುವ ಅವರು, ವುಹಾನ್​ನ ಪ್ರಯೋಗಾಲಯದಿಂದ ಕೋವಿಡ್​ ಸೋಂಕು ಹರಡಿದೆ ಎಂಬ ವಾದವನ್ನು ತಳ್ಳಿಹಾಕುವುದಿಲ್ಲ ಎಂದಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು​ ವರದಿ ಮಾಡಿದೆ. ಈ ವೇಳೆ, ಮಾತನಾಡಿದ ಅವರು, ಆ ರೀತಿ ನಾವು ಮಾಡಬಾರದಿತ್ತು ಎಂಬ ಉದ್ಘಾರವನ್ನು ಸೇರಿಸಿದ್ದಾರೆ.

2021ರ ಜನವರಿಯಲ್ಲಿ ಡಬ್ಲ್ಯೂಎಚ್​ಒ ತಜ್ಞರ ತಂಡ ಚೀನಾದಲ್ಲಿ ನಾಲ್ಕು ವಾರ ಕೋವಿಡ್​ ಸೋಂಕಿನ ಹರಡುವಿಕೆಗೆ ಕಾರಣದ ತಿಳಿಯುವ ಸಂಬಂಧ ತನಿಖೆ ನಡೆಸಿತ್ತು. ಈ ವೇಳೆ ಇದು ಲ್ಯಾಬ್​ನಿಂದ ಸೋರಿಕೆಯಾಗಿದೆಯಾ ಎಂಬುದನ್ನು ತಂಡ ಅಧ್ಯಯನ ನಡೆಸಿತ್ತು.

ಇದಾದ ಬಳಿಕ ತಂಡವೂ ಈ ಕುರಿತು ಎಲ್ಲಾ ಊಹೆಗಳು ಹಾಗೇ ಇದೆ. ಈ ವೈರಸ್​ ಮೂಲವನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಈ ಸಂಬಂಧ ಹೆಚ್ಚಿನ ಅಧ್ಯಯನ ನಡೆಸಬೇಕಿದ್ದು, ಇದನ್ನು ಇಲ್ಲಿಗೆ ಬಿಡಬಾರದು ಎಂದಿದ್ದರು. ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ ಸೋರಿಕೆಯಾಗಿದೆ ಎಂಬುದನ್ನು ಅಸಾಧ್ಯ. ಇದರ ಹಿಂದೆ ಶೀತಲೀಕರಿಸಿದ ಆಹಾರದ ಮೂಲ ಥಿಯರಿ ಇದೆ ಎಂದಿತು.

ಮತ್ತೊಂದೆಡೆ ಚೀನಾ ಕೂಡ ಮೇರಿಲ್ಯಾಂಡ್‌ನಲ್ಲಿರುವ ಯುಎಸ್ ಸಂಶೋಧನಾ ಸೌಲಭ್ಯದಲ್ಲಿ ಅಥವಾ ಆಮದು ಮಾಡಿದ ಶೀತಲೀಕರಿಸಿದ ಆಹಾರ ಪ್ಯಾಕೇಜಿಂಗ್‌ನಿಂದ ಸೋಂಕು ಹರಡಿದೆ ಎಂದಿತು.

ಈ ಕುರಿತು ಕಳೆದ ಮೇ ಅಲ್ಲಿ ಮಾತನಾಡಿದ ಚೀನಾದ ಮಾಜಿ ಸಿಡಿಸಿ ಮುಖ್ಯಸ್ಥ ಡಾ ಜಾರ್ಜ್ ಫೂ ಗಾವೊ ಅವರು ಕೋವಿಡ್ -19 ಲ್ಯಾಬ್ ಸೋರಿಕೆಯ ಪರಿಣಾಮವಾಗಿದೆ ಎಂಬ ಸಿದ್ಧಾಂತವನ್ನು ತಳ್ಳಿ ಹಾಕಬಾರದು ವುಹಾನ್‌ನಲ್ಲಿ ಕೋವಿಡ್ ಮೊದಲು ಹೊರಹೊಮ್ಮಿದಾಗ ಗಾವೊ ಚೀನಾದ ಸಿಡಿಸಿಯನ್ನು ನಿರ್ದೇಶಕರಾಗಿದ್ದರು. ವಿಜ್ಞಾನಿಗಳು ಯಾವಾಗಲಾದರೂ ಯಾವುದನ್ನಾದರೂ ಅನುಮಾನಿಸಬಹುದು. ಯಾವುದನ್ನು ತಳ್ಳಿ ಹಾಕಬಾರದು ಎಂದರು.

2019ರ ಅಂತ್ಯದಲ್ಲಿ ಕಾಣಿಸಿಕೊಂಡ ಕೋವಿಡ್​ ಸೋಂಕಿನಿಂದಾಗಿ 736 ಮಿಲಿಯನ್​ಕ್ಕೂ ಹೆಚ್ಚು ಮಂದಿ ಸೋಂಕಿಗೆ ತುತ್ತಾಗಿದ್ದು, 6.9 ಮಂದಿ ಸಾವನ್ನಪ್ಪಿದ್ದರು.

ಇದನ್ನೂ ಓದಿ: Covid-19 deaths: ಕೋವಿಡ್​ ಲಸಿಕೆಗಳ ಅಸಮಾನ ಹಂಚಿಕೆಯಿಂದ ಶೇ 50ರಷ್ಟು ಸಾವು- ಅಧ್ಯಯನ ವರದಿ

ABOUT THE AUTHOR

...view details